ಬೆಳಗಾವಿ: ಮಹದಾಯಿಗಾಗಿ ಪಾದಯಾತ್ರೆ ಮಾಡುವುದು ನಿಶ್ಚಿತ: ಸತೀಶ್ ಜಾರಕಿಹೊಳಿ

| Updated By: preethi shettigar

Updated on: Jan 18, 2022 | 3:55 PM

ಮೇಕೆದಾಟು ಪಾದಯಾತ್ರೆಯಂತೆಯೇ ಇದನ್ನು ಮಾಡುತ್ತೇವೆ. ಸರ್ಕಾರದ ಮೇಲೆ ಒತ್ತಡ ತರುವಲ್ಲಿ ಕಾಂಗ್ರೆಸ್ ಸಫಲ ಆಗಿದೆ. ಪಾದಯಾತ್ರೆ ಅರ್ಧಕ್ಕೆ ನಿಂತರು ಅದು ಯಶಸ್ವಿಯಾಗಿದೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಬೆಳಗಾವಿ: ಮಹದಾಯಿಗಾಗಿ ಪಾದಯಾತ್ರೆ ಮಾಡುವುದು ನಿಶ್ಚಿತ: ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
Follow us on

ಬೆಳಗಾವಿ: ಮೇಕೆದಾಟು ಪಾದಯಾತ್ರೆ (Mekedatu padayatra) ಬಳಿಕ ಮಹದಾಯಿ ಪಾದಯಾತ್ರೆ ಮಾಡಲು ನಿರ್ಧಾರ ಮಾಡಿದ್ದೇವೆ. ಮಹದಾಯಿ ಪಾದಯಾತ್ರೆ ಮಾಡಲು ಕಾಂಗ್ರೆಸ್‌ನಲ್ಲಿ ಈಗಾಗಲೇ ಚರ್ಚೆ ನಡೆಯುತ್ತಿದೆ. ಮಹದಾಯಿಗಾಗಿ ಪಾದಯಾತ್ರೆ (mahadayi padayatra) ಮಾಡುವುದು ನಿಶ್ಚಿತ. ಎಲ್ಲಿಂದ ಪಾದಯಾತ್ರೆ ಆರಂಭಿಸಬೇಕು ಎಂಬುವುದು ನಿರ್ಧಾರವಾಗಿಲ್ಲ. ಆದರೆ ಮೇಕೆದಾಟು ಪಾದಯಾತ್ರೆಯಂತೆಯೇ ಇದನ್ನು ಮಾಡುತ್ತೇವೆ. ಸರ್ಕಾರದ ಮೇಲೆ ಒತ್ತಡ ತರುವಲ್ಲಿ ಕಾಂಗ್ರೆಸ್ ಸಫಲ ಆಗಿದೆ. ಪಾದಯಾತ್ರೆ ಅರ್ಧಕ್ಕೆ ನಿಂತರು ಅದು ಯಶಸ್ವಿಯಾಗಿದೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ(Satish jarkiholi) ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಖಾಸಗಿ ತರಕಾರಿ ಮಾರುಕಟ್ಟೆ ನಿರ್ಮಾಣ ವಿಚಾರ

ಈಗಾಗಲೇ ಜಿಲ್ಲಾಧಿಕಾರಿ ಭೇಟಿಯಾಗಿ ಬೆಳಗಾವಿಯಲ್ಲಿ ಖಾಸಗಿ ತರಕಾರಿ ಮಾರುಕಟ್ಟೆ ನಿರ್ಮಾಣದ ಬಗ್ಗೆ ಚರ್ಚೆ ಮಾಡಲಾಗಿದೆ. ಎಪಿಎಂಸಿ ಉಳಿಯುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಿ ಎಂದಿದ್ದೇವೆ. ಖಾಸಗಿ ತರಕಾರಿ ಮಾರುಕಟ್ಟೆ ಮೇಲೆ ಯಾರ ನಿಯಂತ್ರಣ ಇಲ್ಲ. ಸರ್ಕಾರ ವೆಚ್ಚ ಮಾಡಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡಿದೆ. ಎಪಿಎಂಸಿ ಉಳಿಸಲು ಜಿಲ್ಲಾಧಿಕಾರಿ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದ್ದೇವೆ. ಖಾಸಗಿ ತರಕಾರಿ ಮಾರುಕಟ್ಟೆಯವರು ಎಪಿಎಂಸಿಗೆ ಹೋಗದಂತೆ ತಡೆಯುತ್ತಿದ್ದಾರೆ. ಎಪಿಎಂಸಿಯಲ್ಲಿ ಸೆಸ್ಸ್, ತೂಕದ ವ್ಯವಸ್ಥೆ ಇದೆ. ಖಾಸಗಿ ತರಕಾರಿ ಮಾರುಕಟ್ಟೆಯಲ್ಲಿ ಈ ಯಾವುದೇ ವ್ಯವಸ್ಥೆ ಇಲ್ಲ. ಬಿಜೆಪಿ ಶಾಸಕರು, ಸರ್ಕಾರ ಪರ ಇರುವುದು ಬಿಟ್ಟು ಖಾಸಗಿಯವರ ಪರ ಇದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

ಖಾಸಗಿ ಮಾರುಕಟ್ಟೆ ಪ್ರಾರಂಭ ಆಗಿದ್ದು ರಾಜ್ಯದಲ್ಲಿ ಇದೆ ಮೊದಲು. ನಮ್ಮ ಪ್ರಯತ್ನ ಎರಡು ಉಳಿಯಬೇಕು (ಸರ್ಕಾರಿ ಮತ್ತು ಖಾಸಗಿ) ಎಂಬುವುದು ಆಗಿದೆ. ಖಾಸಗಿ ಮಾರುಕಟ್ಟೆಗೆ ಕಾನೂನಿನಲ್ಲಿ ಅವಕಾಶ ಇದೆ. ಬಂದ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯ, ಕೇಂದ್ರ ಸರ್ಕಾರ ಖಾಸಗೀಕರಣ ಪರ ಇದೆ. ಕಾಂಗ್ರೆಸ್, ಬಿಜೆಪಿ ಎಂದು ವಿಂಗಡಣೆ ಮಾಡಲು ಆಗಲ್ಲ. ರೈತರಿಗೆ ಎರಡು ಕಡೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಮೇಯರ್, ಉಪಮೇಯರ್ ಆಯ್ಕೆ ವಿಳಂಬಕ್ಕೆ ಸತೀಶ್ ಪ್ರತಿಕ್ರಿಯೆ

ಪಾಲಿಕೆಯಲ್ಲಿ ಅನಧಿಕೃತ ಮೇಯರ್, ಉಪಮೇಯರ್ ಇದ್ದಾರೆ. ಬಿಜೆಪಿ ಶಾಸಕರಿರುವವರೆಗೆ ಅವರೇ ಮೇಯರ್, ಉಪ ಮೇಯರ್. ಅನಧಿಕೃತವಾಗಿ ಬೆಳಗಾವಿ ಮೇಯರ್ ಆಗಿ ಅಭಯ್ ಪಾಟೀಲ್, ಉಪ ಮೇಯರ್ ಆಗಿ ಅನಿಲ್ ಬೆನಕೆ ಇದ್ದಾರೆ. 5 ವರ್ಷದ ಅವಧಿಗೆ ಸರ್ಕಾರ ಅನಧಿಕೃತವಾಗಿ ಘೋಷಿಸಿದೆ. ಪಾಲಿಕೆ ಸದಸ್ಯರು ಟೀ, ಬಿಸ್ಕತ್​​ ಸವಿಯಲು ಮಾತ್ರ ಇದ್ದಾರೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇದನ್ನೂ ಓದಿ:
2ನೇ ಹಂತದ ಮೇಕೆದಾಟು ಪಾದಯಾತ್ರೆ ಬಗ್ಗೆ ಡಿಕೆ ಶಿವಕುಮಾರ್ ಚರ್ಚೆ; ಅಶ್ವತ್ಥ್ ನಾರಾಯಣ್​ಗೆ ಬಿಸಿ ಮುಟ್ಟಿಸಲು ಪ್ಲಾನ್?

ಯೋಗದ ಬಗ್ಗೆ ಜಾಗೃತಿ ಮೂಡಿಸಲು ಮೈಸೂರಿನ ಯೋಗ ಶಿಕ್ಷಕ 2,030 ಕಿಮೀ ದೂರದ ಕಾಶಿವರೆಗೆ ಪಾದಯಾತ್ರೆ ಮಾಡಿದರು!

Published On - 3:29 pm, Tue, 18 January 22