ಬೆಳಗಾವಿಯಲ್ಲಿ ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ನಿಷೇಧಿತ MDMA ಮಾದಕ ವಸ್ತು ವಶಕ್ಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 17, 2024 | 7:41 PM

ಬೆಳಗಾವಿಯ ಬಾಂದುರಗಲ್ಲಿಯಲ್ಲಿ ನಿಷೇಧಿತ MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಟಿಳಕವಾಡಿ ಪೊಲೀಸರು(Tilakwadi Police)ದಾಳಿ ನಡೆಸಿ. 3 ಲಕ್ಷ 64 ಸಾವಿರ ಮೌಲ್ಯದ 34 ಗ್ರಾಂ ಎಂಡಿಎಂಎನ್ನು ಪೊಲೀಸರು‌ ಜಪ್ತಿ ಮಾಡಿದ್ದು,ಬಂಧಿತ ಆರೋಪಿ ಇದನ್ನು ಎಲ್ಲಿಂದ ತಂದು ಮಾರಾಟ ಮಾಡುತ್ತಿದ್ದ ಎನ್ನುವ ಆಯಾಮದಲ್ಲಿ ತನಿಖೆ ಶುರುವಾಗಿದೆ.

ಬೆಳಗಾವಿಯಲ್ಲಿ ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ನಿಷೇಧಿತ MDMA ಮಾದಕ ವಸ್ತು ವಶಕ್ಕೆ
ಬಂಧಿತ ಆರೋಪಿ
Follow us on

ಬೆಳಗಾವಿ, ಮಾ.17: ಬೆಳಗಾವಿಯ ಬಾಂದುರಗಲ್ಲಿಯಲ್ಲಿ ನಿಷೇಧಿತ MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಟಿಳಕವಾಡಿ ಪೊಲೀಸರು(Tilakwadi Police)ದಾಳಿ ನಡೆಸಿ. 3 ಲಕ್ಷ 64 ಸಾವಿರ ಮೌಲ್ಯದ 34 ಗ್ರಾಂ ಎಂಡಿಎಂಎನ್ನು ಪೊಲೀಸರು‌ ಜಪ್ತಿ ಮಾಡಿದ್ದು, ಆಳವನಗಲ್ಲಿ ನಿವಾಸಿ ರಿಜ್ವಾನಾಖಾನ್ ಪಠಾಣ್​ ಎಂಬಾತನನ್ನ ಬಂಧಿಸಲಾಗಿದೆ. ಇತ ಸಾರ್ವಜನಿಕವಾಗಿಯೇ ನಿಷೇಧಿತ ಕ್ರಿಸ್ಟಲ್ ಮೆಥಾಂಫೆಟಮೈನ್ ಮಾದಕ ವಸ್ತುವನ್ನ ಮಾರಾಟ ಮಾಡುತ್ತಿದ್ದ.

ಇನ್ನು ಬಂಧಿತ ಆರೋಪಿ ಇದನ್ನು ಎಲ್ಲಿಂದ ತಂದು ಮಾರಾಟ ಮಾಡುತ್ತಿದ್ದ ಎನ್ನುವ ಆಯಾಮದಲ್ಲಿ ತನಿಖೆ ಶುರುವಾಗಿದೆ. ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಇದೇ ಮೊದಲ ಸಲ ಬೆಳಗಾವಿಯಲ್ಲಿ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ. ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಹಾಸನ ಜಿಲ್ಲಾ ಕಾರಾಗೃಹದಲ್ಲಿ ಗಾಂಜಾ ಘಮಲು; ಪೊಲೀಸರ ದಿಢೀರ್ ದಾಳಿಯಲ್ಲಿ ಪತ್ತೆಯಾಯ್ತು ಮಾದಕ ವಸ್ತು, ಮೊಬೈಲ್ ಫೋನ್​ಗಳು

ಲೇಔಟ್​ಗಳಿಗೆ ಕೆರೆ ಮಣ್ಣು ಲೂಟಿ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲ ತಾಲೂಕಿನ ಹಂಚಿಪುರ ಕೆರೆ ಮಣ್ಣನ್ನು ಲೇಔಟ್​ಗಳಿಗೆ ಹಾಕುಲು ಲೂಟಿ ಮಾಡಲಾಗಿದೆ. ಕಕ್ಕೆಪಾಳ್ಯದ ಲಕ್ಷ್ಮೀನಾರಾಯಣ ಅವರಿಗೆ ಸೇರಿದ ಲೇಔಟ್ ಇದಾಗಿದ್ದು, ಜೆಸಿಬಿ,ಟ್ರ್ಯಾಕ್ಟರ್,ಬಳಸಿ ಕೆರೆ ಮಣ್ಣು ಕಳವು ಮಾಡಲಾಗಿದೆ. ಮಣ್ಣು ಹೆಚ್ಚೆಚ್ಚು ಲೂಟಿಯಿಂದಾಗಿ ಕೆರೆಯಲ್ಲಿರುವ ಮರಗಳ ಬಿದ್ದಿವೆ. ಇಷ್ಟೇಲ್ಲಾ ಆಗುತ್ತಿದ್ದರೂ  ಗೊತ್ತಿಲ್ಲದಂತೆ ಯಂಟಗಾನಹಳ್ಳಿ ಗ್ರಾಮ ಪಂಚಾಯತಿ ಅಧಿಕಾರಿಗಳು ವರ್ತನೆ ತೋರುತ್ತಿದ್ದಾರೆ. ಈ ಹಿನ್ನಲೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ