AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾದಕ ವಸ್ತು ಸಾಗಾಣಿಕೆ ಶಂಕೆ: ಬೆಂಗಳೂರಿಗೆ ಬರುವ ಅಂತರಾಜ್ಯ ಬಸ್​ಗಳ ತಪಾಸಣೆ ನಡೆಸಿದ ಸಿಸಿಬಿ

ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ತುಮಕೂರು ರಸ್ತೆ ಮೂಲಕ ಬೆಂಗಳೂರಿಗೆ ಬರುವ ಅಂತರಾಜ್ಯ ಖಾಸಗಿ ಮತ್ತು ಸರ್ಕಾರಿ ಬಸ್​ಗಳನ್ನು ಶನಿವಾರ ಮುಂಜಾನೆ ಸಿಸಿಬಿ ಪೊಲೀಸರು ಶ್ವಾನದಳದೊಂದಿಗೆ ಧಿಡೀರ್​ ತಪಾಸಣೆ ನಡೆಸಿದರು.

ಮಾದಕ ವಸ್ತು ಸಾಗಾಣಿಕೆ ಶಂಕೆ: ಬೆಂಗಳೂರಿಗೆ ಬರುವ ಅಂತರಾಜ್ಯ ಬಸ್​ಗಳ ತಪಾಸಣೆ ನಡೆಸಿದ ಸಿಸಿಬಿ
ಸಿಸಿಬಿ ಪೊಲೀಸರ ತಪಾಸಣೆ
TV9 Web
| Edited By: |

Updated on: Sep 03, 2023 | 11:46 AM

Share

ಬೆಂಗಳೂರು: ಮಾದಕ ವಸ್ತು ಸಾಗಾಣಿಕೆ ಶಂಕೆ ಹಿನ್ನೆಲೆಯಲ್ಲಿ ನಗರ ಪ್ರವೇಶಿಸಿದ ಅಂತ‌ರಾಜ್ಯ ಬಸ್‌ಗಳು ಸೇರಿದಂತೆ ಕೆಲ ವಾಹನಗಳನ್ನು ಶನಿವಾರ ಮುಂಜಾನೆ ಸ್ನಿಫರ್​ ಡಾಗ್​​​ (ಶ್ವಾನದಳ)ದೊಂದಿಗೆ ಮತ್ತು​ ಸಿಸಿಬಿ ಪೊಲೀಸರು (CCB Police) ದಿಢೀರ ತಪಾಸಣೆ ನಡೆಸಿದರು. ಕೆಲ ದಿನಗಳ ಹಿಂದೆ ಬೆಂಗಳೂರಿಗೆ (Bengaluru) ಮಹಾರಾಷ್ಟ್ರದ ಮುಂಬೈ ಹಾಗೂ ಗೋವಾದಿಂದ ಬಸ್‌ಗಳಲ್ಲಿ ಡ್ರಗ್ಸ್ (Drugs) ಪೂರೈಕೆಯಾಗುತ್ತಿದೆ ಎಂಬ ಮಾಹಿತಿ ಸಿಸಿಬಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ 20ಕ್ಕೂ ಹೆಚ್ಚಿನ ಸಿಸಿಬಿ ಪೊಲೀಸರ ತಂಡ ನೆಲಮಂಗಲ ಟೋಲ್‌ ಬಳಿ ಬಸ್‌ ತಪಾಸಣೆ ನಡೆಸಿತು.

ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಬೆಂಗಳೂರಿಗೆ ತುಮಕೂರು ರಸ್ತೆ ಮೂಲಕವೇ ಬಹಳಷ್ಟು ಖಾಸಗಿ ಮತ್ತು ಸರ್ಕಾರಿ ಸಾರಿಗೆ ಅತಿ ಹೆಚ್ಚು ವಾಹನಗಳು ಆಗಮಿಸುತ್ತವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಸಮೀಪದ ಟೋಲ್ ಗೇಟ್ ಬಳಿ ಬಸ್​​ಗಳನ್ನು ಸಿಸಿಬಿ ಪೊಲೀಸರು ಶ್ವಾನ ದಳದೊಂದಿಗೆ ತಪಾಸಣೆ ನಡೆಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಡ್ರಗ್ ಪೆಡ್ಲರ್​ನನ್ನು ಬಂಧಿಸಿದ ಸಿಸಿಬಿ, 2.50 ಲಕ್ಷ ಮೌಲ್ಯದ ಮಾದಕವಸ್ತು ವಶಕ್ಕೆ

ಈ ಬಗ್ಗೆ ಬೆಂಗಳೂರು ಪೊಲೀಸರು ಟ್ವೀಟ್​ ಮಾಡಿ, ಅಂತರಾಜ್ಯದಿಂದ ಬಸ್​ಗಳ ಮುಖಾಂತರ ಮಾದಕ ವಸ್ತು ಆಮದು ಆಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಅಂತರಾಜ್ಯದಿಂದ ನಗರಕ್ಕೆ ಬರುವ ಬಸ್​ಗಳನ್ನು ಸಿಸಿಬಿ ಪೊಲೀಸರು ಮತ್ತು ನಗರ ಪೊಲೀಸರು ಜಂಟಿಯಾಗಿ ಶ್ವಾನ ದಳದೊಂದಿಗೆ ತಪಾಸಣೆ ನಡೆಸಿದೇವು” ಎಂದು ಟ್ವೀಟ್​ ಮಾಡಿದ್ದಾರೆ.

ಇದೇ ವರ್ಷ ಮೇ ತಿಂಗಳಲ್ಲಿ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಮೋಹನ್ ಅವರು ನಗರವನ್ನು ಡ್ರಗ್ಸ್​​ ಮುಕ್ತವಾಗಿಸಲು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಬೆಂಗಳೂರಿನಲ್ಲಿನ ಡ್ರಗ್ಸ್ ಹಾವಳಿಯನ್ನು ಹೇಗೆ ತಡೆಗಟ್ಟಬೇಕು. ಮತ್ತು ನಗರವನ್ನು ಮಾದಕ ದ್ರವ್ಯ ಮುಕ್ತವಾಗಿಸಲು ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಬಳಿಕ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮುಂದಿನ ವರ್ಷಗಳಲ್ಲಿ ಬೆಂಗಳೂರನ್ನು ಮಾದಕ ದ್ರವ್ಯ ಮುಕ್ತ ನಗರವನ್ನಾಗಿ ಮಾಡಲು ಇಲಾಖೆಗೆ ನಿರ್ದೇಶನ ನೀಡಿದ್ದೇನೆ. ಪೊಲೀಸ್ ಇಲಾಖೆಯು ಡ್ರಗ್ಸ್ ವಿರುದ್ಧ ಸಮರ ಸಾರುದೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್