Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ದೈಹಿಕ ಸಂಪರ್ಕ ಬೆಳೆಸಿ ಮಹಿಳೆಯರಿಗೆ ಬ್ಲಾಕ್ಮೇಲ್ ಮಾಡುತ್ತಿದ್ದ ಕಾಮುಕ ಅರೆಸ್ಟ್

ಬಂಧಿತ ಆರೋಪಿ ಫೈಸಲ್, ಮೊದಲು ಇನ್ಸ್ಟಾಗ್ರಾಮ್​ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಬಳಿಕ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದ. ಒಮ್ಮೆ ರಿಕ್ವೆಸ್ಟ್ ಅಕ್ಸೆಪ್ಟ್ ಆಯ್ತು ಅಂದ್ರೆ ಸಾಕು ನಿಧಾನವಾಗಿ ಚಾಟಿಂಗ್ ಶುರು ಮಾಡ್ತಿದ್ದ. ಚಾಟಿಂಗ್ ಶುರುವಾಗಿದ್ದೇ ತಡ ಬಣ್ಣಬಣ್ಣದ ಮಾತಗಳನ್ನಾಡಿ ಕಷ್ಟ ಸುಖದ ಕಥೆ ಹೇಳಿ ಹತ್ತಿರವಾಗುತ್ತಿದ್ದ. ಬಳಿಕ ತನ್ನ ಜಾಗಕ್ಕೆ ಕರ್ಸ್ಕೊಂಡು ದೈಹಿಕ ಸಂಪರ್ಕ ಬೆಳೆಸುತ್ತಿದ್ದ.

ಬೆಂಗಳೂರು: ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ದೈಹಿಕ ಸಂಪರ್ಕ ಬೆಳೆಸಿ ಮಹಿಳೆಯರಿಗೆ ಬ್ಲಾಕ್ಮೇಲ್ ಮಾಡುತ್ತಿದ್ದ ಕಾಮುಕ ಅರೆಸ್ಟ್
ಆರೋಪಿ ಫೈಸಲ್
Follow us
TV9 Web
| Updated By: ಆಯೇಷಾ ಬಾನು

Updated on: Sep 03, 2023 | 8:14 AM

ಬೆಂಗಳೂರು, ಸೆ.03: ಇತ್ತೀಚೆಗೆ ಆನ್ಲೈನ್ ವಂಚನೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ(Social Media) ಪರಿಚಯವಾಗಿ ಬಳಿಕ ವಂಚಿಸುವ ಘಟನೆಗಳು ದಿನೇ ದಿನೇ ಹೆಚ್ಚುತ್ತಿವೆ. ಸದ್ಯ ಮಹಿಳೆಯರನ್ನೇ(Women) ಟಾರ್ಗೆಟ್​ ಮಾಡಿ ಬ್ಲಾಕ್ಮೇಲ್(Blackmail) ಮಾಡುತ್ತಿದ್ದ ಕಾಮುಕನನ್ನು ಬೆಂಗಳೂರು ಪೊಲೀಸರು(Bengaluru Police) ಬಂಧಿಸಿದ್ದಾರೆ. ಈ ಕಾಮುಕ ಇನ್ಸ್ಟಾಗ್ರಾಮ್ ಬಳಸುವ ಮಹಿಳೆಯರನ್ನೇ ಟಾರ್ಗೆಟ್​ ಮಾಡುತ್ತಿದ್ದ. ಮಹಿಳೆಯರಿಗೆ ಪರಿಚಯವಾಗಿ ಸ್ನೇಹ ಬೆಳೆಸಿ ಮಂಚಕ್ಕೆ ಕರೆಯುತ್ತಿದ್ದ. ಬಳಿಕ ಬ್ಲಾಕ್ಮೇಲ್ ಮಾಡುತ್ತಿದ್ದ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಫೈಸಲ್ ಬಂಧಿತ ಆರೋಪಿ. ಅಸ್ಸಾಂ ಮೂಲದ ಪೈಸಲ್ ನಗರದಲ್ಲಿ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದಾನೆ.

ಬಂಧಿತ ಆರೋಪಿ ಫೈಸಲ್, ಮೊದಲು ಇನ್ಸ್ಟಾಗ್ರಾಮ್​ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಬಳಿಕ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದ. ಒಮ್ಮೆ ರಿಕ್ವೆಸ್ಟ್ ಅಕ್ಸೆಪ್ಟ್ ಆಯ್ತು ಅಂದ್ರೆ ಸಾಕು ನಿಧಾನವಾಗಿ ಚಾಟಿಂಗ್ ಶುರು ಮಾಡ್ತಿದ್ದ. ಚಾಟಿಂಗ್ ಶುರುವಾಗಿದ್ದೇ ತಡ ಬಣ್ಣಬಣ್ಣದ ಮಾತಗಳನ್ನಾಡಿ ಕಷ್ಟ ಸುಖದ ಕಥೆ ಹೇಳಿ ಹತ್ತಿರವಾಗುತ್ತಿದ್ದ. ಬಳಿಕ ತನ್ನ ಜಾಗಕ್ಕೆ ಕರ್ಸ್ಕೊಂಡು ದೈಹಿಕ ಸಂಪರ್ಕ ಬೆಳೆಸುತ್ತಿದ್ದ. ದೈಹಿಕ ಸಂಪರ್ಕ ಬೆಳೆಸಿದ್ದೇ ತಡ ತನ್ನ ಅಸಲಿ ಆಟ ಶುರು ಮಾಡ್ತಿದ್ದ. ದೈಹಿಕ ಸಂಪರ್ಕದ ವಿಡಿಯೋ ಇಟ್ಕೊಂಡು ಕರೆದಾಗಲೆಲ್ಲ ಆತನ ಬಳಿ ಬರ್ಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದ. ಬರೋಕೆ ಆಗಲ್ಲ ಅಂದ್ರೆ ನಿನ್ನ ಗಂಡನಿಗೆ, ಸ್ನೇಹಿತರಿಗೆ ಕಳಿಸ್ತೀನಿ ಎಂದು ಬೆದರಿಸುತ್ತಿದ್ದ. ಹೀಗೆ ಹೆಚ್​ಎಸ್​ಆರ್ ಲೇಔಟ್​ನ ನಿವಾಸಿ ಮಹಿಳೆ ಜೊತೆಗಿನ ವಿಡಿಯೋ ಬಳಸಿ ಬ್ಲಾಕ್ ಮೇಲ್ ಮಾಡಿದ್ದು ಪೊಲೀಸರಿಗೆ ಲಾಕ್ ಆಗಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ನನ್ನ ಮಗಳ ವಿಚಾರಕ್ಕೆ ಬರಬೇಡ ಎಂದಿದ್ದಕ್ಕೆ ಬಾಲಕಿ ತಂದೆಯ ಕೊಲೆ

ಹೆಚ್​ಎಸ್​ಆರ್ ಲೇಔಟ್​ನ ಮಹಿಳೆಯನ್ನು ಇನ್ಸ್ಟಾಗ್ರಾಮ್​ ಮೂಲಕ ಪರಿಚಯ ಮಾಡಿಕೊಂಡು ಆರೋಪಿ ದೈಹಿಕ ಸಂಪರ್ಕ ಬೆಳೆಸಿದ್ದ. ಸುಮಾರು ನಾಲ್ಕೈದು ಬಾರಿ ದೈಹಿಕ ಸಂಪರ್ಕ ಮಾಡಿ ವಿಡಿಯೋ ರೆಕಾರ್ಡ್ ಮಾಡಿದ್ದ. ಕೊನೆಗೆ ಆಕೆಯನ್ನು ಚೆನೈಗೆ ಬರುವಂತೆ ಹೇಳಿದ್ದ. ಇದರಿಂದ ಭಯಗೊಂಡ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದರು. ಆರೋಪಿ ಫೈಸಲ್ ವಿರುದ್ಧ ದೂರು ದಾಖಲಿಸಿದ್ದರು. ದೂರು ಹಿನ್ನಲೆ ಪೊಲೀಸರು ಮಹಿಳೆಯನ್ನು ಚೆನ್ನೈಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಆರೋಪಿ ಫೈಸಲ್ ಮಹಿಳೆಯನ್ನು ಕರೆಸಿ ಬೇರೆಯವರ ಜೊತೆ ಮಲಗಿಸಿ ಹಣ ಮಾಡುವ ಫ್ಲ್ಯಾನ್ ಮಾಡಿದ್ದ ಎಂದು ಬಯಲಾಗಿದೆ. ಪೊಲೀಸರು ಆರೋಪಿಗೆ ಸುಳಿವಿಲ್ಲದೇ ಬಲೆ ಬೀಸಿದ್ದು ಮಹಿಳೆಯ ಸಹಾಯದಿಂದಲೇ ಆರೋಪಿ ಫೈಸಲ್​ನನ್ನು ಬಂಧಿಸಿದ್ದಾರೆ.

ಪೊಲೀಸರು ಆರೋಪಿಯನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಿದ್ದು ಫೈಸಲ್ ಮೊಬೈಲ್​ನ ಇಂಚಿಂಚೂ ಜಾಲಾಡುತ್ತಿದ್ದಾರೆ. ಇದೇ ರೀತಿ ಸಾಕಷ್ಟು ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಿಡಿಯೋ ಮಾಡಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಕೋರ್ಟ್ ಅನುಮತಿ ಪಡೆದು ಮೊಬೈಲ್ ರಿಟ್ರೀವ್ ಗೆ ಸಿದ್ದತೆ ನಡೆದಿದೆ. ಮೊಬೈಲ್ ರಿಟ್ರೀವ್ ಮಾಡಿದ ಬಳಿಕ ಮತ್ತಷ್ಟು ಪ್ರಕರಣಗಳು ಹೊರಬೀಳುವ ಸಾಧ್ಯತೆ ಇದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್