ಬೆಳಗಾವಿ: ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಲೈನ್ ಮ್ಯಾನ್ ದುರ್ಮರಣ
ಬೆಳಗಾವಿ (belagavi) ಜಿಲ್ಲೆಯ ಕಿತ್ತೂರು ಪಟ್ಟಣದ ಕೆಇಬಿ ಆವರಣದಲ್ಲಿ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಲೈನ್ ಮ್ಯಾನ್ (Line Man) ಮೃತಪಟ್ಟ ಘಟನೆ ನಡೆದಿದೆ. ಹುಲಿಕಟ್ಟಿ ಗ್ರಾಮದ ಪ್ರೇಮಾನಂದ ಎಮ್ಮಿ(25) ಮೃತ ರ್ದುದೈವಿ.
ಬೆಳಗಾವಿ, ಡಿ.29: ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಲೈನ್ ಮ್ಯಾನ್ (Line Man) ಮೃತಪಟ್ಟ ಘಟನೆ ಬೆಳಗಾವಿ (belagavi) ಜಿಲ್ಲೆಯ ಕಿತ್ತೂರು ಪಟ್ಟಣದ ಕೆಇಬಿ ಆವರಣದಲ್ಲಿ ನಡೆದಿದೆ. ಹುಲಿಕಟ್ಟಿ ಗ್ರಾಮದ ಪ್ರೇಮಾನಂದ ಎಮ್ಮಿ(25) ಮೃತಪಟ್ಟವರು. ಶವವನ್ನು ಸರ್ಕಾರಿ ಆಸ್ಪತ್ರೆ ರವಾನೆ ಮಾಡಲಾಗಿದ್ದು, ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸದೆ ಕಂಬ ಹತ್ತಿಸಿದ್ದಕ್ಕೆ ಪ್ರೇಮಾನಂದ ಕುಟುಂಬಸ್ಥರು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಹಾಗೂ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ
ಮಂಡ್ಯ: ಕೆಎಸ್ಆರ್ಟಿಸಿ ಬಸ್ ಹಾಗೂ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಎಲೆಕೆರೆ ಹ್ಯಾಂಡ್ ಫೋಸ್ಟ್ ಬಳಿ ನಡೆದಿದೆ. ಟೆಂಪೋ ಡ್ರೈವರ್ಗೆ ಗಂಭೀರ ಗಾಯವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೆನಾಯಲ್ ಬಾಕ್ಸ್ ತುಂಬಿಕೊಂಡು ಬರುತ್ತಿದ್ದ ಟೆಂಪೋ ಇದಾಗಿದ್ದು, ಡಿಕ್ಕಿ ರಭಸಕ್ಕೆ ಟೆಂಪೋ ಉರುಳಿಬಿದ್ದಿದೆ. ಟೆಂಪೋದಲ್ಲಿ ಇದ್ದ ಪಿನಾಯಲ್ ಬಾಕ್ಸ್ ಗಳು ಚೆಲ್ಲಾಪಿಲ್ಲಿಯಾಗಿದ್ದು, ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಬೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಲೈನ್ಮ್ಯಾನ್ ಸಾವು, ಚೀಮಸಂದ್ರ ಬಳಿ ದುರ್ಘಟನೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:44 pm, Fri, 29 December 23