ಹಣ ಡಬಲ್ ಮಾಡಿ‌ ಕೊಡುವುದಾಗಿ 25 ಲಕ್ಷ ರೂ. ವಂಚನೆ; ಪೊಲೀಸ್​ ಬಲೆಗೆ ಬಿದ್ದ 6 ಜನರ ಗ್ಯಾಂಗ್

ಹಣ ಡಬಲ್ ಮಾಡಿ‌ ಕೊಡುವುದಾಗಿ ಬೆಳಗಾವಿ ಜಿಲ್ಲೆಯ ಗೋಕಾಕ್(Gokak)​ನ ವಿದ್ಯಾನಗರದಲ್ಲಿ ವಾಸವಾಗಿದ್ದ ಸಿದ್ದನಗೌಡ ಬಿರಾದಾರ್ ಎಂಬುವವರಿಗೆ ಕಳೆದ ನವೆಂಬರ್​ನಲ್ಲಿ 25 ಲಕ್ಷ ರೂ. ವಂಚಿಸಿ ಪರಾರಿಯಾದ ಗ್ಯಾಂಗ್​ನ್ನು ಇದೀಗ ಕಾಕತಿ ಪೊಲೀಸರು(Kakati Police) ಬಂಧಿಸಿದ್ದಾರೆ.

ಹಣ ಡಬಲ್ ಮಾಡಿ‌ ಕೊಡುವುದಾಗಿ 25 ಲಕ್ಷ ರೂ. ವಂಚನೆ; ಪೊಲೀಸ್​ ಬಲೆಗೆ ಬಿದ್ದ 6 ಜನರ ಗ್ಯಾಂಗ್
ಬಂಧಿತ ಆರೋಪಿಗಳು
Follow us
Sahadev Mane
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 29, 2023 | 3:32 PM

ಬೆಳಗಾವಿ, ಡಿ.29: ಹಣ ಡಬಲ್ ಮಾಡಿ‌ ಕೊಡುವುದಾಗಿ 25 ಲಕ್ಷ ರೂ. ವಂಚಿಸಿ ಪರಾರಿಯಾದ ಗ್ಯಾಂಗ್​ನ್ನು ಕಾಕತಿ ಪೊಲೀಸರು(Kakati Police) ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್(Gokak)​ನ ವಿದ್ಯಾನಗರದಲ್ಲಿ ವಾಸವಾಗಿದ್ದ ಸಿದ್ದನಗೌಡ ಬಿರಾದಾರ್ ಎಂಬುವವರಿಗೆ ಕಳೆದ ನವೆಂಬರ್​ನಲ್ಲಿ ವಂಚನೆ ಮಾಡಿದ್ದರು. ಈ ಹಿನ್ನಲೆ ಸಿದ್ದನಗೌಡ ಅವರು ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು, ಇದೀಗ ಆರು ಜನ ಖದೀಮರ ಗ್ಯಾಂಗ್​ನ್ನು ಅರೆಸ್ಟ್​ ಮಾಡಿದ್ದಾರೆ.

ಘಟನೆ ವಿವರ

ಕೊಲ್ಹಾಪುರದಿಂದ ಬಸ್​ನಲ್ಲಿ ಬರುವಾಗ ಸಿದ್ದನಗೌಡರಿಗೆ ಈ ಖದೀಮರ ಗ್ಯಾಂಗ್​ನ ಸದಸ್ಯೆ ಜಾಹ್ನವಿ ಪರಿಚಯ ಆಗಿದ್ದರು. ಬಳಿಕ ನಂಬರ್ ಕೂಡ ಎಕ್ಸಚೇಂಜ್ ಮಾಡಿಕೊಂಡಿದ್ದ ಮಹಿಳೆ, ನಮ್ಮಣ್ಣ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಾನೆ. ನಿಮ್ಮ ಹಣ ಡಬಲ್ ಮಾಡಿ ಕೊಡುತ್ತೇವೆ ಎಂದು ಅವರನ್ನು ನಂಬಿಸಿ, ತನ್ನ ಕೆಡ್ಡಾಗೆ ಕೆಡವಿದ್ದಾಳೆ. ಎಲ್ಲವೂ ತಾನು ಅಂದುಕೊಂಡಂತೆ ಆಗುತ್ತಿದ್ದಂತೆ, ಸಿದ್ದನಗೌಡರಿಗೆ ಯಮಕನಮರಡಿಯ ಹೊಟೇಲ್ ಒಂದರಲ್ಲಿ ಹಣ ತರಲು ಹೇಳಿದ್ದಾಳೆ.

ಇದನ್ನೂ ಓದಿ:ಕೊರೊನಾ ನಡುವೆ ಅಮಾನುಷ ಕೆಲಸ: ದೇಶದ ವಿವಿಧೆಡೆ ನಕಲಿ ರೆಮಿಡಿಸಿವಿರ್ ಮಾರಾಟ; ಪೊಲೀಸರಿಂದ ಖದೀಮರ ಬಂಧನ

ಹಣ ತಂದ ನಂತರ ನಕಲಿ ಪೊಲೀಸರಿಂದ ದಾಳಿ

ಇನ್ನು ಸಿದ್ದನಗೌಡ ಅವರು ಹಣ ತಂದ ನಂತರ ಅವರದೇ ಗ್ಯಾಂಗ್​ನ ನಕಲಿ ಪೊಲೀಸರಿಂದ ದಾಳಿ ಮಾಡಿಸಿ, ಜಾಹ್ನವಿಯನ್ನು ಅರೆಸ್ಟ್ ಮಡಿದ್ದ ನಕಲಿ ಪೊಲೀಸರು, ಹಣದ ಜೊತೆಗೆ ಜಾಹ್ನವಿಯನ್ನು ಕರೆದುಕೊಂಡು ಪರಾರಿಯಾಗಿದ್ದರು. ಬಳಿಕ ಸಿದ್ದನಗೌಡ ಅವರಿಗೆ ತಾನು ಮೋಸ ಹೋಗಿದ್ದು ಗೊತ್ತಾದ ಬಳಿಕ ಕಾಕತಿ ಠಾಣೆಗೆ ಬಂದು ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿ ದೂರು ನೀಡಿದ್ದರು. ಅದರಂತೆ ದೂರು ದಾಖಲಿಸಿಕೊಂಡ ಪೊಲೀಸರು, ಮಾರು ವೇಷದಲ್ಲಿ ಹೋಗಿ ಹಣ ಡಬಲ್ ಮಾಡಿಕೊಡಿ ಎಂದು ಹೇಳಿ ಖದೀಮರ ಗ್ಯಾಂಗ್​ನ್ನು ಕೆಡ್ಡಾಗೆ ಕೆಡುವಿದ್ದಾರೆ. ಇದೀಗ ಮಾರುವೇಷ ಹಾಕಿ 6 ಜನರನ್ನು ಬಂಧಿಸಿದ್ದಾರೆ.‘

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ