ಬೆಳಗಾವಿ: ಕಸ ವಿಲೇವಾರಿ ವಾಹನದಲ್ಲಿ ಆಯುಕ್ತರ ರೌಂಡ್ಸ್, ಪೌರ ಕಾರ್ಮಿಕರು ಸೂಕ್ತ ಸಮಯಕ್ಕೆ ಬಾರದಿದ್ದಕ್ಕೆ ಫುಲ್ ಕ್ಲಾಸ್

ಕೆಲವು ವಾರ್ಡ್ ಗಳಿಗೆ ಕಸ ಸಂಗ್ರಹಿಸುವ ವಾಹನಗಳು ಹೋಗುತ್ತಿರಲಿಲ್ಲ, ಕೆಲವು ಕಡೆಗಳಲ್ಲಿ ಸರಿಯಾದ ಸಮಯಕ್ಕೆ ವಾಹನ ತೆರಳುತ್ತಿಲ್ಲ ಅಂತಾ ಆಯುಕ್ತರಿಗೆ ಸಾರ್ವಜನಿಕರಿಂದ ಕೆಲವು ದೂರುಗಳು ಬಂದಿದ್ದವು. ಇದರಿಂದ ಅಲರ್ಟ್ ಆದ ಆಯುಕ್ತ ಅಶೋಕ ದುಡಗುಂಟಿ ಇಂದು ಬೆಳಗ್ಗೆ 5.30ಕ್ಕೆ ಸೈಕಲ್ ಮೇಲೆ ಕಸ ಸಂಗ್ರಹಿಸುವ ವಾಹನಗಳ ಶಾಖೆಗೆ ಭೇಟಿ ನೀಡಿದರು.

ಬೆಳಗಾವಿ: ಕಸ ವಿಲೇವಾರಿ ವಾಹನದಲ್ಲಿ ಆಯುಕ್ತರ ರೌಂಡ್ಸ್, ಪೌರ ಕಾರ್ಮಿಕರು ಸೂಕ್ತ ಸಮಯಕ್ಕೆ ಬಾರದಿದ್ದಕ್ಕೆ ಫುಲ್ ಕ್ಲಾಸ್
ಆಯುಕ್ತ ಅಶೋಕ ದುಡಗುಂಟಿ
Follow us
Sahadev Mane
| Updated By: ಆಯೇಷಾ ಬಾನು

Updated on:Aug 07, 2023 | 12:24 PM

ಬೆಳಗಾವಿ, ಆ.07: ಬೆಳಗಾವಿ ನಗರದಲ್ಲಿ ಕಸ ವಿಲೇವಾರಿ(Garbage Disposal) ಸೂಕ್ತವಾಗಿ ಆಗಬೇಕು ಅಂತಾ ಖುದ್ದು ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ(Ashok Dudagunti) ಅಖಾಡಕ್ಕಿಳಿದಿದ್ದಾರೆ. ಕೆಲವು ವಾರ್ಡ್ ಗಳಿಗೆ ಕಸ ಸಂಗ್ರಹಿಸುವ ವಾಹನಗಳು ಹೋಗುತ್ತಿರಲಿಲ್ಲ, ಕೆಲವು ಕಡೆಗಳಲ್ಲಿ ಸರಿಯಾದ ಸಮಯಕ್ಕೆ ವಾಹನ ತೆರಳುತ್ತಿಲ್ಲ ಅಂತಾ ಆಯುಕ್ತರಿಗೆ ಸಾರ್ವಜನಿಕರಿಂದ ಕೆಲವು ದೂರುಗಳು ಬಂದಿದ್ದವು. ಇದರಿಂದ ಅಲರ್ಟ್ ಆದ ಆಯುಕ್ತ ಅಶೋಕ ದುಡಗುಂಟಿ ಇಂದು ಬೆಳಗ್ಗೆ 5.30ಕ್ಕೆ ಸೈಕಲ್ ಮೇಲೆ ಕಸ ಸಂಗ್ರಹಿಸುವ ವಾಹನಗಳ ಶಾಖೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಡ್ರೈವರ್‌ಗಳು, ಕ್ಲಿನರ್ ಎಷ್ಟು ಗಂಟೆಗೆ ಡ್ಯೂಟಿಗೆ ಬರ್ತಾರೆ ಅಂತಾ ಹಾಜರಿ ಪುಸ್ತಕ ಪರಿಶೀಲನೆ ನಡೆಸಿದರು.

ಕೆಲವು ಪೌರ ಕಾರ್ಮಿಕರು ಸೂಕ್ತ ಸಮಯಕ್ಕೆ ಬಾರದಿದ್ದಕ್ಕೆ ತರಾಟೆಗೆ ತೆಗೆದುಕೊಂಡು ನಾಳೆಯಿಂದ ಕಡ್ಡಾಯವಾಗಿ ಸಮಯಕ್ಕೆ ಸರಿಯಾಗಿ ಬರಬೇಕು, ತಮಗೆ ನಿಗದಿ ಪಡಿಸಿದ ವಾರ್ಡ್​ಗಳಿಗೆ ತೆರಳಿ ಕಸ ಸಂಗ್ರಹಿಸುವಂತೆ ಸೂಚನೆ ನೀಡಿದ್ದಾರೆ. ಇಂದು ಮುಖ್ಯವಾಗಿ ವಾರ್ಡ್ 43ರಲ್ಲಿ ರೌಂಡ್ಸ್ ಮಾಡಿದ ಆಯುಕ್ತ ಅಲ್ಲಿರುವ ಸಮಸ್ಯೆಗಳನ್ನ ಸಾರ್ವಜನಿಕರಿಂದ ಆಲಿಸಿದರು. ಮಹಾನಗರ ಪಾಲಿಕೆ ಸದಸ್ಯೆ ವಾಣಿ ವಿಲಾಸ್ ಜೋಶಿ ಕೂಡ ಆಯುಕ್ತರಿಗೆ ಸಾಥ್ ನೀಡಿದ್ದು, ಸ್ಮಶಾನ ಸೇರಿದಂತೆ ಒಳಚರಂಡಿ ವ್ಯವಸ್ಥೆ ಕುರಿತು ಕೂಡ ಮಾಹಿತಿ ನೀಡಿದರು. ಇನ್ನೂ ಕೆಲವು ಕಡೆಗಳಲ್ಲಿ ನಾಲಾಗಳಲ್ಲಿ ಕಸ ತುಂಬಿಕೊಂಡಿದ್ದು ಅದನ್ನ ಕೂಡಲೇ ಸ್ವಚ್ಚಗೊಳಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಸ್ಮಶಾನಗಳಲ್ಲಿ ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ ಸೇರಿದಂತೆ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನ ಲೋಕವಳ್ಳಿಯಲ್ಲಿ ವಸತಿಗೆ ಮಂಜೂರಾದ ಜಾಗದಲ್ಲಿ ಚರ್ಚ್ ನಿರ್ಮಿಸಲಾಗುತ್ತಿದೆ; ಹಿಂದೂ ಕಾರ್ಯಕರ್ತರ ದೂರು

ಇದೇ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ವಾಣಿ ವಿಲಾಸ್ ಜೋಶಿ ಕೂಡ ತಮ್ಮ ವಾರ್ಡ್​ನಲ್ಲಿನ ಸಮಸ್ಯೆಗಳನ್ನ ಆಯುಕ್ತರ ಗಮನಕ್ಕೆ ತರುವ ಮೂಲಕ ಕೂಡಲೇ ಸರಿ ಪಡಿಸುವಂತೆ ಮನವಿ ಮಾಡಿಕೊಂಡರು. ಒಟ್ಟಾರೆ ನೂತನವಾಗಿ ಆಗಮಿಸಿರುವ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿಯವರ ಜನಪರ ಕಾಳಜಿಗೆ ನಗರದ ಜನ ಮೆಚ್ಚುಗೆ ವ್ಯಕ್ಯಪಡಿಸಿದ್ದಾರೆ‌. ಮುಂದಿನ ದಿನಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಇನ್ನಷ್ಟು ಅಭಿವೃದ್ಧಿಯತ್ತ ನಗರವನ್ನ ತೆಗೆದುಕೊಂಡು ಹೋಗಲಿ. ಮತ್ತು ಸ್ವಚ್ಛ ಸುಂದರ ನಗರವನ್ನಾಗಿ ಕುಂದಾನಗರಿಯನ್ನಾಗಿಸಲಿ ಎಂಬುವುದು ಸಾರ್ವಜನಿಕರ ಮನವಿ.

ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:23 pm, Mon, 7 August 23