ಬೆಳಗಾವಿ: ಫೈಟರ್ ಟಗರಿನ ಗೆಲುವು ಸಹಿಸಲಾಗದೆ ಕದ್ದು ಮಟನ್ ಮಾರ್ಕೆಟ್ಗೆ ತಂದ ಖದೀಮರು, ಮುಂದೇನಾಯ್ತು…?
ತಳಕಟನಾಳ ಗ್ರಾಮದ ಅಜಯ್ ಕಣಿಲ್ದಾರ್ ಎಂಬುವವರಿಗೆ ಸೇರಿದ ಐದು ವರ್ಷದ ರಾಕಿ ಎಂಬ ಟಗರನ್ನು ಖದೀಮರು ಶನಿವಾರ ಕಳ್ಳತನ ಮಾಡಿದ್ದರು. ಟಗರು ಕಳ್ಳತನವಾಗುತ್ತಿದ್ದಂತೆ ಟಗರು ಮಾಲೀಕ ಗೋಕಾಕ್ ತಾಲೂಕಿನ ಕುಲಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಈಗ ಟಗರು ಮಟನ್ ಮಾರುಕಟ್ಟೆಯಲ್ಲಿ ಸಿಕ್ಕಿದೆ. ಖದೀಮರು ಮಟನ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ತಂದಾಗ ಪತ್ತೆಯಾಗಿದೆ.
ಬೆಳಗಾವಿ, ಆ.29: ಟಗರು ಕಾಳಗದಲ್ಲಿ ಜನರ ಮನ ಗೆದ್ದು ಮಿಂಚುತ್ತಿದ್ದ ರಾಕಿ ಎಂಬ ಹೆಸರಿನ ಫೈಟರ್ ಟಗರನ್ನು (Rocky Tagaru) ಖದೀಮರು ಕಳ್ಳತನ ಮಾಡಿ ಮಾರಾಟ ಮಾಡಲೆಂದು ಮಟನ್ ಮಾರುಕಟ್ಟೆಗೆ ತಂದಿದ್ದ ಘಟನೆ ಬೆಳಗಾವಿ(Belagavi) ಜಿಲ್ಲೆಯ ಗೋಕಾಕ್ ತಾಲೂಕಿನ ತಳಕಟನಾಳ ಗ್ರಾಮದಲ್ಲಿ ನಡೆದಿದೆ. ಸದ್ಯ ಪರಿಚಯಸ್ಥರು ಟಗರು ಯಾರದ್ದು ಎಂದು ವಿಚಾರಿಸಿದಾಗ ಖದೀಮರು ಗಾಬರಿಗೊಂಡು ಟಗರನ್ನು ಬಿಟ್ಟು ಎಸ್ಕೇಪ್ ಆಗಿದ್ದಾರೆ. ರಾಕಿ ಈಗ ಸೇಫಾಗಿ ಮನೆ ಸೇರಿದ್ದಾನೆ. ಮನೆಯಲ್ಲಿ ಕಟ್ಟಿ ಹಾಕಿದ್ದ ಟಗರನ್ನು ಖದೀಮರು ಕದ್ದು ಎರಡೂವರೆ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.
ತಳಕಟನಾಳ ಗ್ರಾಮದ ಅಜಯ್ ಕಣಿಲ್ದಾರ್ ಎಂಬುವವರಿಗೆ ಸೇರಿದ ಐದು ವರ್ಷದ ರಾಕಿ ಎಂಬ ಟಗರನ್ನು ಖದೀಮರು ಶನಿವಾರ ಕಳ್ಳತನ ಮಾಡಿದ್ದರು. ಟಗರು ಕಳ್ಳತನವಾಗುತ್ತಿದ್ದಂತೆ ಟಗರು ಮಾಲೀಕ ಗೋಕಾಕ್ ತಾಲೂಕಿನ ಕುಲಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು. ಸದ್ಯ ತಡರಾತ್ರಿ ಗೋಕಾಕ್ ಮಟನ್ ಮಾರುಕಟ್ಟೆಯಲ್ಲಿ ಟಗರು ಪತ್ತೆಯಾಗಿದೆ. ರಾಕಿ ಈಗ ಮನೆಗೆ ವಾಪಸ್ ಆಗಿದ್ದು ಟಗರು ಮಾಲೀಕ ನಿಟ್ಟುಸಿರು ಬಿಟ್ಟಿದ್ದಾನೆ.
ಇದನ್ನೂ ಓದಿ: ಬಕ್ರೀದ್ ಟೈಮಲ್ಲಿ 6 ಲಕ್ಷ ರೂ ವರೆಗೆ ರೇಟ್ ಏರಿಸಿಕೊಂಡಿದ್ದ ಧಾರವಾಡದ ಜಂಗ್ಲಿ ಟಗರು ಹೃದಯಾಘಾತಕ್ಕೆ ಬಲಿ
ಕಳೆದ 15 ದಿನದ ಹಿಂದೆ ರಾಕಿಗೆ 2.50 ಲಕ್ಷ ರೂ. ನೀಡುತ್ತೇವೆ, ನಮಗೆ ಕೊಡಿ ಎಂದು ಟಗರು ಪ್ರಿಯರೊಬ್ಬರು ಬೇಡಿಕೆ ಇಟ್ಟಿದ್ದರು. ಅಲ್ಲದೆ ಯಾವುದೇ ಸ್ಥಳದಲ್ಲಿ ಟಗರು ಕಾಳಗ ನಡೆದರೂ ರಾಕಿ ಗೆಲುವನ್ನು ತನ್ನದಾಗಿಸಿಕೊಳ್ಳುತ್ತಿತ್ತು. ಹೀಗಾಗಿ ರಾಕಿಯನ್ನು ಮಾರಲು ಟಗರು ಮಾಲೀಕನಿಗೂ ಇಷ್ಟ ಇರಲಿಲ್ಲ. ರಾಕಿಯನ್ನು ಮಗುವಂತೆ ಸಾಕುತ್ತಿದ್ದರು. ಹೀಗಾಗಿ ಕಾಳಗದಲ್ಲಿ ಟಗರು ಗೆಲ್ಲುವುದನ್ನು ನೋಡಿ ಸಹಿಸಲಾಗದೆ ಖದೀಮರು ಕಳ್ಳತನ ಮಾಡಿದ್ದರು. ಮನೆ ಬಳಿ ಕಟ್ಟಿ ಹಾಕಿದ್ದ ವೇಲೆ ಕಳ್ಳತನ ಮಾಡಿದ್ದರು. ಬಳಿಕ ಎರಡೂವರೆ ಲಕ್ಷ ಹಣಕ್ಕೂ ಬೇಡಿಕೆ ಇಟ್ಟಿದ್ದರು. ಕೊನೆಗೆ ಟಗರು ಮಾರಿ ಬಂದ ಹಣ ತೆಗೆದುಕೊಳ್ಳಲು ಚಿಂತಿಸಿ ಮಟನ್ ಮಾರುಕಟ್ಟೆಗೆ ಬಂದಿದ್ದರು.
ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:54 pm, Tue, 29 August 23