Belagavi Session: ಬೆಳಗಾವಿ ಅಧಿವೇಶನದ ವೇಳೆ ಸರ್ಕಾರಕ್ಕೆ ಪ್ರತಿಭಟನೆಗಳ ಬಿಸಿ; ಅಥಣಿ ಬಂದ್
ಬೆಳಗಾವಿ ಅಧಿವೇಶನ ಹಿನ್ನೆಲೆ ಅನೇಕ ಸಂಘಟನೆಗಳು ಇಂದು ಸಾಲು ಸಾಲು ಪ್ರತಿಭಟನೆಗಳನ್ನು ಹಮ್ಮಿಕೊಂಡಿವೆ. ಜೊತೆಗೆ ಮತ್ತೆ ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಕೇಳಿ ಬಂದಿದ್ದು ಅಥಣಿ ಜಿಲ್ಲೆ ಮಾಡುವಂತೆ ಒತ್ತಾಯಿಸಿ ಇಂದು ಅಥಣಿ ಬಂದ್ಗೆ ಕರೆ ಕೊಡಲಾಗಿದೆ.
ಅಥಣಿ ಬಂದ್
Follow us on
ಬೆಳಗಾವಿ, ಡಿ.11: ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ (Belagavi Session). ಅಧಿವೇಶನದ ಆರನೇ ದಿನವೂ ಸುವರ್ಣಸೌಧ ಹೊರಗೆ ಪ್ರತಿಭಟನೆ ಕಾವು ಕಡಿಮೆ ಆಗಿಲ್ಲ. ಇದೀಗ ಸಾಲು ಸಾಲು 13 ಪ್ರತಿಭಟನೆಗಳು ಸರ್ಕಾರಕ್ಕೆ ಬಿಸಿ ಮುಟ್ಟಿಸಲಿವೆ. ಅನೇಕ ಸಂಘಟನೆಗಳು ಇಂದು ಸಾಲು ಸಾಲು ಪ್ರತಿಭಟನೆಗಳನ್ನು ಹಮ್ಮಿಕೊಂಡಿವೆ. ಜೊತೆಗೆ ಮತ್ತೆ ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಕೇಳಿ ಬಂದಿದ್ದು ಅಥಣಿ ಜಿಲ್ಲೆ ಮಾಡುವಂತೆ ಒತ್ತಾಯಿಸಿ ಇಂದು ಅಥಣಿ ಬಂದ್ಗೆ ಕರೆ ಕೊಡಲಾಗಿದೆ.
ಸರ್ಕಾರಕ್ಕೆ ಬಿಸಿ ಮುಟ್ಟಿಸಲಿರುವ ಪ್ರತಿಭಟನೆಗಳು
ಕರ್ನಾಟಕ ರಾಜ್ಯ ರೈತ ಸಂಘಟನೆಗಳ ರೈತ ಒಕ್ಕೂಟ ಪ್ರತಿಭಟನೆ ನಡೆಸಲಿದೆ. ರೈತರ ಸಾಲಮನ್ನಾ, 10 ಗಂಟೆ ವಿದ್ಯುತ್, ಮೂರು ರೈತ ವಿರೋಧಿ ಕಾನೂನು ವಾಪಸ್ ಪಡೆಯುವಂತೆ ರೈತರು ಗಾಂಧಿನಗರದಿಂದ ಸುವರ್ಣಸೌಧದ ವರೆಗೂ ಪಾದಯಾತ್ರೆ ಮಾಡಲಿದ್ದಾರೆ.
ಕಾಂತರಾಜ್ ಆಯೋಗದ ವರದಿ ಬಿಡುಗಡೆ, ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸ್ಸಿಗೆ ಒತ್ತಾಯಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಪ್ರತಿಭಟನೆ.
ಪರಿಶಿಷ್ಟ ಜಾತಿ, ಒಳ ಮೀಸಲಾತಿ, ವರ್ಗೀಕರಣ ಪರಿಷ್ಕೃತ ಶಿಫಾರಸ್ಸು ಆದೇಶ ಕೇಂದ್ರಕ್ಕೆ ಕಳುಹಿಸಲು ಒತ್ತಾಯಿಸಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮಿತಿಯಿಂದ ಪ್ರತಿಭಟನೆ.
ಉದ್ಯೋಗ, ಯೋಜನೆಗಳಲ್ಲಿ ಮೀಸಲಾತಿಗೆ ಒತ್ತಾಯಿಸಿ ಅಖಿಲ ಕರ್ನಾಟಕ ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿ ಸಂಘದಿಂದ ಪ್ರತಿಭಟನೆ.
ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ವಕ್ಫ್ ಬೋರ್ಡ್ ಸ್ಥಾಪಿಸಲು ಆಗ್ರಹಿಸಿ ಹುಬ್ಬಳ್ಳಿಯ ಉತ್ತರ ಕರ್ನಾಟಕ ಅಂಜುಮನ್ -ಎ-ಇಸ್ಲಾಮ್ ದಿಂದ ಹೋರಾಟ.
ಸರ್ಕಾರದಿಂದ ತರಬೇತಿ ನೀಡಿ ಮಾನ್ಯತೆ ನೀಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮೀಣ ಪ್ರಥಮ ಚಿಕಿತ್ಸಾ ವೈದರ ಸಂಘದಿಂದ ಪ್ರತಿಭಟನೆ.
ಖಾಸಗಿ ಶಾಲೆಗಳಲ್ಲಿ ಶೇ.25 ರಷ್ಟು ಆರ್ಟಿಐ ಮಕ್ಕಳ ದಾಖಲಾತಿ ಮರು ಅನುಷ್ಠಾನಕ್ಕೆ ಒತ್ತಾಯಿಸಿ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದಿಂದ ಹೋರಾಟ.
ಇನ್ನು ಮತ್ತೊಂದೆಡೆ ಮತ್ತೆ ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಕೇಳಿ ಬಂದಿದ್ದು ಅಥಣಿ ಜಿಲ್ಲೆ ಮಾಡುವಂತೆ ಒತ್ತಾಯಿಸಿ ಇಂದು ಅಥಣಿ ಬಂದ್ಗೆ ಕರೆ ಕೊಡಲಾಗಿದೆ. ಅಥಣಿಯ ಅಂಬೇಡ್ಕರ್ ವೃತ್ತದಲ್ಲಿ ಟಾಯರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಲಾಗುತ್ತಿದೆ. ಅಥಣಿ ಜಿಲ್ಲಾ ಹೋರಾಟ ಸಮಿತಿ ಸ್ವಯಂ ಪ್ರೇರಿತ ಬಂದ್ಗೆ ಕರೆ ಕೊಟ್ಟಿದ್ದು ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ ತೋಡ್ಕರ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದೆ. ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿಗೆ ಹೋರಾಟಗಾರರು ಮನವಿ ಸಲ್ಲಿಸಲಿದ್ದಾರೆ. ಲಕ್ಷ್ಮಣ ಸವದಿ ಅವರು ಅಥಣಿ ಜಿಲ್ಲೆ ರಚನೆ ಬಗ್ಗೆ ಸದನದಲ್ಲಿ ಧ್ವನಿ ಎತ್ತಲಿದ್ದಾರೆ. ಪಕ್ಷಾತೀತವಾಗಿ ಹೋರಾಟಕ್ಕೆ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಅಥಣಿ ಬಂದ್ ಹಿನ್ನೆಲೆ ಬೀಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ