ತಂಗಿಯನ್ನ ಚುಡಾಯಿಸಿದ್ದಕ್ಕೆ ರಾಜ್ಯೋತ್ಸವ ಮೆರವಣಿಗೆಯಲ್ಲಿ ಚಾಕು ಇರಿತ: ಸಹೋದರರಿಬ್ಬರ ಬಂಧನ
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಮೆರವಣಿಗೆಯಲ್ಲಿ ಚಾಕು ಇರಿದು ಅಟ್ಟಹಾಸ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಸದ್ಯ ಮಾರ್ಕೆಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋದರರು ಬಂಧಿತರು. ಆರೋಪಿಗಳ ಸೋದರಿಯನ್ನ ಚುಡಾಯಿಸಿದ್ದಕ್ಕೆ ಹತ್ಯೆಗೆ ಯತ್ನಿಸಿದ್ದಾರೆ. ಸುಳಿವು ಸಿಗುತ್ತಿದ್ದಂತೆ ಅರೆಸ್ಟ್ ಮಾಡಿ ಪೊಲೀಸರು ಜೈಲಿಗಟ್ಟಿದ್ದಾರೆ.

ಬೆಳಗಾವಿ, ನವೆಂಬರ್ 02: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ (Kannada Rajyotsava) ಮೆರವಣಿಗೆ ವೇಳೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಕೆಟ್ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ (Arrest). ಸೋದರರಾದ ಅರುಣ್ ಕುರುಬರ ಮತ್ತು ಕಿರಣ್ ಕುರುಬರ ಬಂಧಿತರು. ಆರೋಪಿಗಳ ತಂಗಿಯನ್ನ ಚುಡಾಯಿಸಿದ್ದಕ್ಕೆ ಹತ್ಯೆಗೆ ಯತ್ನಿಸಲಾಗಿದೆ. ಸುಳಿವು ಸಿಗುತ್ತಿದ್ದಂತೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಐವರಿಗೆ ಚಾಕು ಇರಿತ
ಬೆಳಗಾವಿಯಲ್ಲಿ ಮೊದಲಿನಿಂದಲೂ ಎಂಇಎಸ್ ಪುಂಡರ ಅಟ್ಟಹಾಸ ಹೆಚ್ಚಿದೆ. ಮರಾಠಿಗರಿಗೆ ಪಾಠ ಕಲಿಸಲೆಂದೇ ಈ ಬಾರಿ ಅದ್ಧೂರಿ ರಾಜ್ಯೋತ್ಸವ ನಡೆದಿತ್ತು. ಶನಿವಾರ ಬೆಳಗಿನಿಂದ ರಾತ್ರಿವರೆಗೂ ಮೆರವಣಿಗೆ ನಡೆದಿತ್ತು. ಈ ಮೆರವಣಿಗೆ ವೇಳೆ ಕಿಡಿಗೇಡಿಗಳು ನಗರದ ಐವರಿಗೆ ಚಾಕುವಿನಿಂದ ಇರಿದಿದ್ದಾರೆ.
ತಂಗಿಯನ್ನ ಚುಡಾಯಿಸಿದ್ದಕ್ಕೆ ಚಾಕು ಇರಿತ!
ಇನ್ನು ಶನಿವಾರ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಕೆಕೆ ಕೊಪ್ಪ ಗ್ರಾಮದ ಆದಿತ್ಯ ಬೆಂಡಿಗೇರಿಗೂ ಬೆಳಗಾವಿ ಡಿಸಿ ಕಚೇರಿ ಎದುರು ದುರುಳರು ಚಾಕು ಇರಿದಿದ್ದಾರೆ. ಬಂಧಿತ ಸಹೋದರರ ತಂಗಿಯನ್ನು ಆದಿತ್ಯ ಚುಡಾಯಿಸಿದ್ದನಂತೆ. ಇದೇ ಕಾರಣಕ್ಕೆ ಬೆಳಗಾವಿಗೆ ಬಂದು ಆದಿತ್ಯನನ್ನ ಹೊಡೆದರೇ ಗೊತ್ತಾಗುವುದಿಲ್ಲ ಅಂತಾ ಹಲ್ಲೆ ಮಾಡಿ ಪರಾರಿಯಾಗಿದ್ದರು. ಆದರೆ ಇದೀಗ ಜೈಲು ಪಾಲಾಗಿದ್ದಾರೆ. ಅತ್ತ ಆದಿತ್ಯಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇದನ್ನೂ ಓದಿ: ಬೆಳಗಾವಿ: ಕನ್ನಡ ರಾಜ್ಯೋತ್ಸವ ಮೆರವಣಿಗೆ ವೇಳೆ ದುಷ್ಕರ್ಮಿಗಳಿಂದ ಐವರಿಗೆ ಚಾಕು ಇರಿತ
ಬೆಳಗಾವಿಯಲ್ಲಿ ನಿನ್ನೆ ನಡೆದ ರಾಜ್ಯೋತ್ಸವದಲ್ಲಿ ಸುಮಾರು ಮೂರರಿಂದ ನಾಲ್ಕು ಲಕ್ಷ ಜನ ಭಾಗಿಯಾಗಿದ್ದರ ಬಗ್ಗೆ ಮಾಹಿತಿ ಇದೆ. ಇಂತಹ ಸಂದರ್ಭದಲ್ಲಿ ಕೆಲ ಕಿಡಗೇಡಿಗಳು ಹಳೆ ದ್ವೇಷ ಇಟ್ಟುಕೊಂಡು ಚಾಕು ಇರಿದು ಅಟ್ಟಹಾಸ ಮೆರೆದಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಕನ್ನಡ ರಾಜ್ಯೋತ್ಸವದಂದೇ MES ಕಾರ್ಯಕರ್ತರ ಪುಂಡಾಟ; ಅನುಮತಿ ಇಲ್ಲದಿದ್ರೂ ಕರಾಳ ದಿನ ಆಚರಣೆ!
ಇನ್ನೊಂದು ಕಡೆ ಖದೀಮರು ಗ್ಯಾಂಗ್ ಕಟ್ಟಿಕೊಂಡು ಬಂದು 300ಕ್ಕೂ ಅಧಿಕ ಜನರ ಮೊಬೈಲ್ ಕದ್ದು ಕೈ ಚಳಕ ತೋರಿಸಿದ್ದಾರೆ. ಒಟ್ಟಿನಲ್ಲಿ ಮೊಬೈಲ್ ಹಾಗೂ ಚಾಕು ಇರಿತ ಪ್ರಕರಣ ಪೊಲೀಸರಿಗೆ ಸದ್ಯ ತಲೆನೋವಾಗಿ ಮಾರ್ಪಟ್ಟಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:24 pm, Sun, 2 November 25



