AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಕೃಷ್ಣಮೃಗಗಳ ಸಾವಿನ ರಹಸ್ಯ ಬಯಲು: ಆ ರೋಗವೇ ಕಾರಣ

ಬೆಳಗಾವಿಯ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿಗೆ ಕೊನೆಗೂ ಕಾರಣ ರಿವೀಲ್ ಆಗಿದೆ. ಒಂದಲ್ಲಾ ಎರಡಲ್ಲಾ 31 ಕೃಷ್ಣಮೃಗಗಳನ್ನ ಬಲಿ ಪಡೆದಿದ್ದು ಬೇರೆ ಯಾವುದು ಅಲ್ಲ ಅದೊಂದು ರೋಗ ಎಂಬುವುದು ಮರಣೋತ್ತರ ಪರೀಕ್ಷೆಯಲ್ಲಿ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಳಗಾವಿ ಕೃಷ್ಣಮೃಗಗಳ ಸಾವಿನ ರಹಸ್ಯ ಬಯಲು: ಆ ರೋಗವೇ ಕಾರಣ
ಕೃಷ್ಣಮೃಗ
Sahadev Mane
| Edited By: |

Updated on: Nov 20, 2025 | 6:25 PM

Share

ಬೆಳಗಾವಿ, ನವೆಂಬರ್​ 20: ಬೆಳಗಾವಿಯ (Belagavi) ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ (Blackbuck) ಸಾವಿನ ರಹಸ್ಯ ಕೊನೆಗೂ ಬಯಲಾಗಿದೆ. ಮರಣೋತ್ತರ ಪರೀಕ್ಷೆ ಬಗ್ಗೆ ಲ್ಯಾಬ್ ವರದಿ ಬಂದಿದ್ದು, 31 ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗವೇ ಕಾರಣವೆಂಬುವುದು ದೃಢವಾಗಿದೆ. ಹಿಮೋರಿಜಿಕ್ ಸೆಪ್ಟಿಸೀಮಿಯಾ ಬ್ಯಾಕ್ಟೀರಿಯಾದಿಂದ ಮೃತಪಟ್ಟಿವೆ ಎಂದು ದಕ್ಷಿಣ ಪ್ರಾದೇಶಿಕ ರೋಗಪತ್ತೆ ಪ್ರಯೋಗಾಲಯ ಪ್ರಾಣಿ ಆರೋಗ್ಯ ಮತ್ತು ಪಶುವೈದ್ಯಕೀಯ ಜೀವಶಾಸ್ತ್ರ ರೋಗ ಪತ್ತೆ ಬ್ಯಾಕ್ಟೀರಿಯಾಲಜಿ ಮತ್ತು ಮೈಕಾಲಜಿ ಬೆಂಗಳೂರು ವರದಿ ನೀಡಿದೆ.

ಬೆಳಗಾವಿಯ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಮಾರಣಹೋಮವೇ ನಡೆದು ಹೋಗಿತ್ತು. ಇದ್ದ 38 ಕೃಷ್ಣಮೃಗಗಳ ಪೈಕಿ 31ಕೃಷ್ಣ ಮೃಗಗಳು ನಾಲ್ಕು ದಿನದ ಅಂತರದಲ್ಲಿ ಸಾವನ್ನಪ್ಪಿದ್ದವು. ಇನ್ನೂಳಿದ 7 ಕೃಷ್ಣಮೃಗಗಳನ್ನ ನಿರಂತರವಾಗಿ ಚಿಕಿತ್ಸೆ ನೀಡಿ ಹಗಲಿರುಳು ಶ್ರಮಿಸಿ ಬದುಕಿಸಿಕೊಳ್ಳುವ ಕೆಲಸವನ್ನ ಅರಣ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಮಾಡಿದ್ದಾರೆ.

ಇದನ್ನೂ ಓದಿ: ಕೃಷ್ಣ ಮೃಗಗಳ ಸರಣಿ ಸಾವು: ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗದ ಭೀತಿ

ನಾಲ್ಕು ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿ ಲ್ಯಾಬ್​ಗೆ ರವಾನಿಸಲಾಗಿತ್ತು. ಇದರಲ್ಲಿ ಪರೀಕ್ಷೆ ವೇಳೆ ಗಳಲೆ ರೋಗದಿಂದ ಕೃಷ್ಣಮೃಗಗಳು ಸಾವನ್ನಪ್ಪಿವೆ ಅನ್ನೋದು ಗೊತ್ತಾಗಿದೆ. ಗಳಲೆ ರೋಗ ಅಂದರೆ,  ಇದೊಂದು ಬ್ಯಾಕ್ಟೀರಿಯಾದಿಂದ ಹರಡುವ ಕಾಯಿಲೆಯಾಗಿದ್ದು, ಇದಕ್ಕೆ ಹಿಮೋರಿಜನ್ ಸೆಪ್ಟಿಸಿಮಿಯಾ ಎಂದು ಕರೆಯುತ್ತಾರೆ. ಇದು ಸಸ್ಯಹಾರಿ ಪ್ರಾಣಿಗಳ ದೇಹದಲ್ಲಿರುತ್ತೆ. ವಾತಾವರಣದಲ್ಲಿ ಏರುಪೇರಾದಾಗ ಇದರ ಶಕ್ತಿ ಹೆಚ್ಚಾಗಿ ಕಿಡ್ನಿ, ಲಂಗ್ಸ್, ಹೃದಯ ಭಾಗ ಸೇರಿದಂತೆ ದೇಹದ ಎಲ್ಲಾ ಅಂಗಾಗಳನ್ನ ಹಾನಿ ಮಾಡುತ್ತೆ.

ಈ ಬ್ಯಾಕ್ಟೀರಿಯಾ ಆ್ಯಕ್ಟೀವ್ ಆದ ಒಂದೇ ದಿನದಲ್ಲಿ ಪ್ರಾಣಿಗಳು ಸಾವನ್ನಪ್ಪುತ್ತವೆ. ಇದು ಗಾಳಿಯಿಂದಲೂ ರೋಗ ಹರಡುವ ಸಾಧ್ಯತೆ ಇದ್ದು, ಹೊರಗಿನಿಂದಲೂ ಪ್ರಾಣಿಗಳ ದೇಹ ಸೇರಿಕೊಂಡು ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿರಬಹುದು ಅನ್ನೋದು ಕೂಡ ಸಂಶಯ ಇದೆ. ಈ ರೋಗಕ್ಕೆ ಕನ್ನಡದಲ್ಲಿ ಗಳಲೆ ರೋಗ ಎಂದು ಕರೆಯುತ್ತಾರೆ. ಇದೇ ರೋಗದಿಂದ ಕೃಷ್ಣಮೃಗಗಳು ಸಾವನ್ನಪ್ಪಿವೆ ಅಂತಾ ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ಡಿಎಫ್‌ಒ ಕ್ರಾಂತಿ ಹೇಳಿದ್ದಿಷ್ಟು 

ಇನ್ನು ಈ ಕುರಿತಾಗಿ ನಿನ್ನೆ ಸುದ್ಧಿಗೋಷ್ಠಿ ನಡೆಸಿದ ಡಿಎಫ್‌ಒ ಕ್ರಾಂತಿ, ಏಳು ಜೀವಂತ ಇರುವ ಕೃಷ್ಣಮೃಗಗಳ ಆರೋಗ್ಯವಾಗಿವೆ. ಕೆಲ ದಿನಗಳವರೆಗೂ ಎಲ್ಲವನ್ನ ನಿಗಾದಲ್ಲಿ ಇಡಲಾಗುತ್ತೆ. ಹೊರಗಿಂದ ಈ ಕಾಯಿಲೆ ಬರಬೇಕು, ಇಲ್ಲಾ ಆ ಪ್ರಾಣಿಯಲ್ಲಿ ಬ್ಯಾಕ್ಟೀರಿಯಾ ಇರುತ್ತೆ. ವಾತಾವರಣದಲ್ಲಿ ಏರುಪೇರು ಆದಾಗ ಒಳಗೆ ಇದ್ದ ಬ್ಯಾಕ್ಟೀರಿಯಾದಿಂದ ಕಾಯಿಲೆ ಬರುತ್ತೆ. ಗಾಳಿಯಿಂದಲೂ ಈ ಕಾಯಿಲೆ ಬರುವ ಸಾಧ್ಯತೆ ಇರುತ್ತೆ. ಮುಖ್ಯವಾಗಿ ಸಸ್ಯಹಾರಿ ಪ್ರಾಣಿಗಳಿಗೆ ಬರುವ ಕಾಯಿಲೆ ಇದು ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 28 ಕೃಷ್ಣಮೃಗಗಳ ಸಾವಿನ ಕೇಸ್​​​: ಗೊಂದಲ ಮೂಡಿಸಿರುವ ಅರಣ್ಯ ಅಧಿಕಾರಿಗಳ ಹೇಳಿಕೆ

ಈಗಾಗಲೇ ಮೃಗಾಲಯದಲ್ಲಿ ಬೇರೆ ಪ್ರಾಣಿಗಳಿಂದ ಅಂತರ ಕಾಯ್ದುಕೊಳ್ಳಲಾಗಿದೆ. ಎಲ್ಲಾ ಪ್ರಾಣಿಗಳನ್ನ ನಿಗಾದಲ್ಲಿ ಇಡಲಾಗಿದ್ದು, ಎಲ್ಲದಕ್ಕೂ ರೋಗನಿರೋಧಕ ಔಷಧಿ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಸಾಕು ಪ್ರಾಣಿಗಳಿಗೆ ಹರಡುವ ಸಾಧ್ಯತೆ ಇರುವ ಕಾರಣ, ಪಶು ಸಂಗೋಪನೆ ಇಲಾಖೆಗೆ ತಿಳಿಸಿದ್ದು ಮುಂಜಾಗ್ರತಾ ಕ್ರಮಗಳನ್ನ ವಹಿಸಲಾಗುವುದು ಎಂದು ಡಿಎಫ್‌ಒ ಕ್ರಾಂತಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.