ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮುಗಿಯದೇ ಬಿಜೆಪಿ ಶಾಸಕರು ಬೆಂಗಳೂರಿಗೆ ಬರುವಂತಿಲ್ಲ: ನಳಿನ್ ಕುಮಾರ್ ಕಟೀಲ್ ಖಡಕ್ ಸೂಚನೆ
ನಿಮ್ಮೆಲ್ಲರ ಮಾತಿನಂತೆ ಈಬಾರಿ ಪಕ್ಷದ ಚಿಹ್ನೆಯಡಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ. ಬಿಜೆಪಿ ಚಿಹ್ನೆಯಿಂದ ಸ್ಪರ್ಧೆ ಮಾಡುವ ನಿರ್ಧಾರ ನಾಯಕರದ್ದಲ್ಲ, ಕಾರ್ಯಕರ್ತರದ್ದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು
ಬೆಳಗಾವಿ: ಮಂಗಳೂರಿನಲ್ಲಿ ಬಿಜೆಪಿ ಅಧಿಕಾರ ಹಿಡಿದಂತೆ ಬೆಳಗಾವಿಯಲ್ಲೂ ಬಿಜೆಪಿ ಅಧಿಕಾರ ಹಿಡಿದೇ ಹಿಡಿಯಲಿದೆ. ಚುನಾವಣೆಯಲ್ಲಿ ಒಂದೊಂದು ವಾರ್ಡ್ ಗೆ ಒಬ್ಬೊಬ್ಬ ಶಾಸಕರನ್ನು ನೇಮಿಸುತ್ತೇವೆ. ಹಾಕುತ್ತೇವೆ. ಸಭೆ ಸಮಾರಂಭಗಳನ್ನ ಮಾಡುವಂತಿಲ್ಲ. ಮಹಾನಗರ ಪಾಲಿಕೆ ಚುನಾವಣೆ ( Belagavi municipal corporation Election 2021) ಮುಗಿಯುವವರೆಗೂ ಯಾವ ಶಾಸಕರೂ ಬೆಂಗಳೂರಿಗೆ ಹೋಗುವಂತಿಲ್ಲ. ಇಪ್ಪತ್ತೈದು ವರ್ಷದ ನಂತರ ಪಕ್ಷದ ಚಿಹ್ನೆ ಮೇಲೆ ನಿಲ್ಲುತ್ತಿದ್ದೇವೆ. ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಧ್ವಜ ಹಾರಿಸಿದಂತೆ ಬೆಳಗಾವಿಯಲ್ಲೂ ಬಿಜೆಪಿ ಧ್ವಜ ಹಾರಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಘೋಷಿಸಿದರು.
ಸೆಪ್ಟೆಂಬರ್ 3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ನಡೆಸಿದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ವರ್ಷದ ಹಿಂದೆ ಬೆಳಗಾವಿಗೆ ಬಂದಾಗ ಬಿಜೆಪಿ ಚಿಹ್ನೆಯಡಿ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರು ಒತ್ತಾಯಿಸಿದ್ದರು. ನಿಮ್ಮೆಲ್ಲರ ಮಾತಿನಂತೆ ಈಬಾರಿ ಪಕ್ಷದ ಚಿಹ್ನೆಯಡಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ. ಬಿಜೆಪಿ ಚಿಹ್ನೆಯಿಂದ ಸ್ಪರ್ಧೆ ಮಾಡುವ ನಿರ್ಧಾರ ನಾಯಕರದ್ದಲ್ಲ, ಕಾರ್ಯಕರ್ತರದ್ದು. ಈ ಚುನಾವಣೆ ನಾಯಕರ ಚುನಾವಣೆ ಅಲ್ಲ, ಬೆಳಗಾವಿ ಕಾರ್ಯಕರ್ತರ ಚುನಾವಣೆ. ಇದನ್ನು ಬಿಜೆಪಿ ಸವಾಲಾಗಿ ಸ್ವೀಕರಿಸಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಚೆನ್ನಮ್ಮ ಹೆಸರಿಡಲು ಸಿಎಂಗೆ ಮನವಿ
ಧಾರವಾಡದಲ್ಲಿ ಅಪ್ಘಾನಿಸ್ತಾನದ ವಿದ್ಯಾರ್ಥಿಗಳು; ತಾಯ್ನಾಡಿನ ದುಸ್ಥಿತಿ, ಕುಟುಂಬದವರನ್ನು ನೆನೆದು ಕಣ್ಣೀರು
(BJP State president Nalin Kumar Kateel says BJP MLAs Cannot Come To Bengaluru before Belagavi municipal corporation Election 2021)