ಸಿಟಿ ರವಿ ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್ ಹೇಳಿದ್ದಿಷ್ಟು
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಗುರುವಾರ ವಿಧಾನ ಪರಿಷತ್ ಸಭೆಯನ್ನು 10 ನಿಮಿಷ ಮುಂದೂಡಿದ ಬಳಿಕ ಮತ್ತು ನಡೆದ ಘಟನೆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬೆಳಗಾವಿ, ಡಿಸೆಂಬರ್ 20: ಎಂಎಲ್ಸಿ ಸಿಟಿ ರವಿ (CT Ravi) ಅಶ್ಲೀಲ ಪದ ಬಳಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಅವರು ಸುದ್ದಿಗೋಷ್ಠಿ ನಡೆಸಿ ಗುರುವಾರ ಪರಿಷತ್ನಲ್ಲಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ. “ಬಿಆರ್ ಅಂಬೇಡ್ಕರ್ ಅವರ ಕುರಿತಾಗಿ ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ವಿರೋಧಿಸಿ ಪರಿಷತ್ನಲ್ಲಿ ಧರಣಿ ಮಾಡಿ ಕುಳಿತುಕೊಂಡ್ವಿ. ಸಭಾಪತಿಗಳು ಅಧಿವೇಶನವನ್ನು 10 ನಿಮಿಷ ಮುಂದೂಡಿದರು. ಈ ವೇಳೆ ಸಿಟಿ ರವಿಯವರು ರಾಹುಲ್ ಗಾಂಧಿ ಅವರಿಗೆ ಡ್ರಗ್ ಎಡಿಕ್ಟ್ ರಾಹುಲ್ ಗಾಂಧಿ ಅಂತ 3-4 ಬಾರಿ ಹೇಳಿದರು. ಅದಕ್ಕೆ ನಾನು, ಸಿಟಿ ರವಿ ಕೊಲೆಗಾರ ಅಂದೆ. ಇದಕ್ಕೆ ಪ್ರತಿಯಾಗಿ ಸಿಟಿ ರವಿಯವರು ಅಶ್ಲೀಲ ಪದ ಬಳಸಿದರು. ಸಿ.ಟಿ.ರವಿ ಒಮ್ಮೆಯಲ್ಲ, 10 ಬಾರಿ ಹೇಳಿ ತೇಜೋವಧೆ ಮಾಡಿದರು” ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಆ ಕೆಟ್ಟ ಪದವನ್ನು ನನ್ನ ಬಾಯಿಯಿಂದ ಹೇಳುವುದಕ್ಕೆ ಕಷ್ಟ ಆಗುತ್ತಿದೆ. ಅಶ್ಲೀಲ ಪದವನ್ನು ಬಿಜೆಪಿಯವರೇ ಕೇಳಿಸಿಕೊಂಡಿದ್ದರು. ಅಶ್ಲೀಲ ಪದ ಕೇಳಿಸಿಕೊಂಡು ಕೆಲವರು ಕಿವಿಯಲ್ಲಿ ಸಾರಿ ಹೇಳಿದರು. ನಾನು ಇನ್ನೂ ಆಘಾತದಲ್ಲಿ ಇದ್ದೇನೆ ಎಂದು ಕಣ್ಣೀರು ಹಾಕಿದರು.
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ
ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಸಿಂಹ
