ರಾಜ್ಯದ ಬೊಕ್ಕಸದಿಂದಲೇ ರೈತರಿಗೆ ಪರಿಹಾರ ನೀಡಬೇಕು; ಕೇಂದ್ರದ ನೆರವಿಗೆ ಕಾಯಬಾರದು: ಬಿಎಸ್ ಯಡಿಯೂರಪ್ಪ

ರಾಜ್ಯದ ಬೊಕ್ಕಸದಿಂದಲೇ ರೈತರಿಗೆ ಪರಿಹಾರ ನೀಡಬೇಕು; ಕೇಂದ್ರದ ನೆರವಿಗೆ ಕಾಯಬಾರದು: ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ (ಸಂಗ್ರಹ ಚಿತ್ರ)

ಕೂಡಲೇ ರೈತರಿಗೆ ನೆರವು ನೀಡಲು ಸಿಎಂ ಮತ್ತು ಕಂದಾಯ ಸಚಿವರಿಗೆ ಮನವಿ ಮಾಡುತ್ತೇನೆ. ಈಗಿರುವ ಸ್ಥಿತಿಯಲ್ಲಿ ನೆರವು ನೀಡದಿದ್ದರೆ ರೈತರಿಗೆ ಬದುಕು ಸಾಗಿಸುವುದು ಅಸಾಧ್ಯ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

TV9kannada Web Team

| Edited By: ganapathi bhat

Dec 15, 2021 | 5:34 PM

ಬೆಳಗಾವಿ: ಇಲ್ಲಿ ನಡೆಯುತ್ತಿರುವ ವಿಧಾನ ಸಭಾ ಅಧಿವೇಶನದಲ್ಲಿ ನಿಯಮ 69 ರಡಿ ಅತಿವೃಷ್ಟಿ ಕುರಿತ ಚರ್ಚೆ ನಡೆಸಲಾಗಿದೆ. ಕರ್ನಾಟಕ ರಾಜ್ಯದ ಸ್ಥಿತಿ ಕೇಂದ್ರ ಸರ್ಕಾರಕ್ಕೆ ಗೊತ್ತೇ ಇದೆ. ಮೇಲಿಂದ ಮೇಲೆ ಮನವಿ ಮಾಡುತ್ತಲೇ ಇದ್ದೇವೆ. ವಾಸ್ತವಿಕ ಸ್ಥಿತಿ‌‌ ಗೊತ್ತಿರುವ ಕಾರಣ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರದ ನೆರವಿಗೆ ಕಾಯಬಾರದು. ರಾಜ್ಯದ ಬೊಕ್ಕಸದಿಂದಲೇ ರೈತರಿಗೆ ಪರಿಹಾರ ನೀಡಬೇಕು. ತಕ್ಷಣ ಬೇರೆ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಕೇಂದ್ರದಿಂದ ಹಣ ಬಂದೇ ಬರುತ್ತದೆ. ಹೆಚ್ಚು‌ ಹಣ ತರುವ ಪ್ರಯತ್ನ ಮಾಡೋಣ. ರೈತರ ನೆರವಿಗೆ ಧಾವಿಸುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯ. ಕೂಡಲೇ ರೈತರಿಗೆ ನೆರವು ನೀಡಲು ಸಿಎಂ ಮತ್ತು ಕಂದಾಯ ಸಚಿವರಿಗೆ ಮನವಿ ಮಾಡುತ್ತೇನೆ. ಈಗಿರುವ ಸ್ಥಿತಿಯಲ್ಲಿ ನೆರವು ನೀಡದಿದ್ದರೆ ರೈತರಿಗೆ ಬದುಕು ಸಾಗಿಸುವುದು ಅಸಾಧ್ಯ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ವಿಧಾನಸಭೆಯಲ್ಲಿ ನಿಯಮ 69ರಡಿ ಅತಿವೃಷ್ಟಿ ಕುರಿತ ಚರ್ಚೆ ನಡೆಸಲಾಗಿದೆ. ವಿಧಾನಸಭೆಯಲ್ಲಿ ಜೆಡಿಎಸ್​​ ಶಾಸಕ ಶಿವಲಿಂಗೇಗೌಡ ಚರ್ಚೆ ಮಾಡಿದ್ದಾರೆ. ಈ ವೇಳೆ, ಶಾಸಕರಿಗೆ ಬೇಗ ಮಾತು ಮುಗಿಸಿ ಎಂದು ಉಪಸಭಾಧ್ಯಕ್ಷ ತಿಳಿಸಿದ್ದಾರೆ. ಉಪಸಭಾಧ್ಯಕ್ಷರ​ ಮಾತಿಗೆ ಸಿಟ್ಟಾದ ಶಾಸಕ ಶಿವಲಿಂಗೇಗೌಡ, ಈ ರೀತಿ ಜಿಜ್ಞಾಸೆಯಲ್ಲಿ ಮಾತನಾಡಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮಂಥವರು ಸದನಕ್ಕೆ ಬರುವುದೇ ತಪ್ಪು ಎಂದು ಗರಂ ಆಗಿದ್ದಾರೆ. ನಾವೇನು‌ ಇಲ್ಲಿ ಬೇರೆ ಭಾಷಣ ಮಾಡುತ್ತೇವಾ? ಎಂದು ಕೇಳಿದ್ದಾರೆ. ಬಳಿಕ ಮುಂದುವರಿಸಿ ಎಂದು ಉಪಸಭಾಧ್ಯಕ್ಷರು ಸೂಚಿಸಿದ್ದಾರೆ. ನಂತರ ಚರ್ಚೆ ಮುಂದುವರಿಸಲಾಗಿದೆ.

ವಿಧಾನಸಭೆಯಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಅತಿವೃಷ್ಟಿ ಕುರಿತು ನಿಯಮ 69ರಡಿ ಚರ್ಚೆ ನಡೆಸಿದ್ದಾರೆ. ವಿಧಾನಸೌಧದ ಮುಂದೆ ನಾವು ಸಾಯಬೇಕಾ? ರಾ ಜ್ಯ ಸರ್ಕಾರಕ್ಕೆ ನಿಜವಾಗಿಯೂ ಕಣ್ಣು, ಕಿವಿ ಇದೆಯಾ? ನಾವು ಬರೀ ಹೋರಾಟ ಮಾಡಿಕೊಂಡೇ ಇರಬೇಕಾ? ನಮ್ಮ ವಿನಂತಿಗೆ ಯಾವ ಮಂತ್ರಿಗಳು ಸಹಾಯಕ್ಕೆ ಬಂದಿಲ್ಲ. ಖಾನಾಪುರ ಕ್ಷೇತ್ರದ ರೈತರ ಮೇಲೆ ಅನ್ಯಾಯ ಮಾಡಬೇಡಿ. ನೆರೆ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ ಎಂದು ಶಾಸಕಿ ಅಂಜಲಿ ಹೇಳಿದ್ದಾರೆ. ಯಡಿಯೂರಪ್ಪ ಘೋಷಿಸಿದ್ದ ಪರಿಹಾರ ಹಣವೂ ತಲುಪಿಲ್ಲ. ಈ ಅಧಿವೇಶನದಲ್ಲಿ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಖಾನಾಪುರದಿಂದ ವಿಧಾನಸೌಧಕ್ಕೆ ಪಾದಯಾತ್ರೆ ಮಾಡ್ತೇವೆ ಎಂದು ವಿಧಾನಸಭೆಯಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯ ಸುವರ್ಣ ಗಾರ್ಡನ್ ಬಳಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರ ಜೊತೆ ಧರಣಿ ನಿರತ ರೈತರು ಮಾತಿನ ಚಕಮಕಿ ನಡೆಸಿದ್ದಾರೆ. ಬೇಕೆಂದೇ ರೈತರಿಗೆ ಊಟ ತರುವ ವಾಹನಕ್ಕೆ ಅಡ್ಡಿ ಆರೋಪ, ಪೊಲೀಸರು ಅಡ್ಡಿಪಡಿಸುತ್ತಿದ್ದಾರೆಂದು ಆರೋಪಿಸಿ ವಾಗ್ವಾದ ಏರ್ಪಟ್ಟಿದೆ. ಧರಣಿ ಸ್ಥಳಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದ್ದಾರೆ. ಸಚಿವರ ಸಮ್ಮುಖದಲ್ಲೇ ರೈತರು, ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ.

ಸ್ಥಳಕ್ಕೆ 14 ಖಾತೆ ಸಚಿವರು ಬಂದು ಮನವಿ ಸ್ವೀಕರಿಸಲು ಆಗ್ರಹ ಮಾಡಿದ್ದಾರೆ. ವಿವಿಧ ಬೇಡಿಕೆ ಈಡೇರಿಸುವಂತೆ ಧರಣಿ ನಡೆಸುತ್ತಿರುವ ರೈತರು ಆಗ್ರಹ ವ್ಯಕ್ತಪಡಿಸಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರವಾಹ ಬಂದಿತ್ತು; ಈವರೆಗೆ ಸಂಪೂರ್ಣ ಪರಿಹಾರ ಕೊಟ್ಟಿಲ್ಲ: ಸಿದ್ದರಾಮಯ್ಯ ವಾಗ್ದಾಳಿ

ಇದನ್ನೂ ಓದಿ: ನಮಗೆ ಬಹುಮತವಿದ್ದರೂ ಜೆಡಿಎಸ್ ನಿರ್ಲಕ್ಷಿಸುವುದಿಲ್ಲ: ಗೆಲುವಿನ ಸಂಭ್ರಮದಲ್ಲಿ ಯಡಿಯೂರಪ್ಪ ಅಭಯ

Follow us on

Related Stories

Most Read Stories

Click on your DTH Provider to Add TV9 Kannada