ಬೆಳಗಾವಿ ಸಿಇಎನ್ ಪೊಲೀಸರ ಭರ್ಜರಿ ಕಾರ್ಯಾಚರಣೆ! ಆನ್ಲೈನ್ನಲ್ಲಿ ಹಣ ಕಳೆದುಕೊಂಡಿದ್ದ 2 ಕೋಟಿಗೂ ಹೆಚ್ಚು ಹಣ ಜಪ್ತಿ
ಸಿಇಎನ್ ಪೊಲೀಸರು 88 ಲಕ್ಷ ರೂ. ಹಣವನ್ನು ವಂಚನೆಗೊಳಗಾದವರ ಖಾತೆಗೆ ಜಮಾ ಮಾಡಿದ್ದಾರೆ. ಇನ್ನುಳಿದ 1 ಕೋಟಿ 44 ಲಕ್ಷ 99 ಸಾವಿರ ಹಣವನ್ನು ಕಾನೂನು ಪ್ರಕ್ರಿಯೆ ನಂತರ ಹಸ್ತಾಂತರ ಮಾಡಲಿದ್ದಾರೆ.
ಬೆಳಗಾವಿ: ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ಸಿಇಎನ್ ಪೊಲೀಸರು ಆನ್ಲೈನ್ ವಂಚಕರ ಹೆಡೆಮುರಿ ಕಟ್ಟಿದ್ದಾರೆ. ಬೆಳಗಾವಿ ಪೊಲೀಸ್ ಕಮೀಷನರ್ ವ್ಯಾಪ್ತಿಯಲ್ಲಿ ಒಂದೇ ವರ್ಷದಲ್ಲಿ 1,309 ಸೈಬರ್ ವಂಚನೆ ದೂರುಗಳು ದಾಖಲಾಗಿದ್ದವು. ಆನ್ಲೈನ್ನಲ್ಲಿ ಜನರು ಬರೋಬ್ಬರಿ 2 ಕೋಟಿ 45 ಲಕ್ಷ 37 ಸಾವಿರ ರೂಪಾಯಿ ಹಣವನ್ನು ಕಳೆದುಕೊಂಡಿದ್ದರು. ಸಿಇಎನ್ ಇನ್ಸ್ಪೆಕ್ಟರ್ ಬಿ.ಆರ್.ಗಡ್ಡೇಕರ ತಂಡ ಕಾರ್ಯಾಚರಣೆ ನಡೆಸಿ ಒಂದು ವರ್ಷದಲ್ಲಿ ಸುಮಾರು 2 ಕೋಟಿ 39 ಲಕ್ಷ 9 ಸಾವಿರ ರೂ. ಹಣವನ್ನು ಜಪ್ತಿ ಮಾಡಿದ್ದಾರೆ.
ಸದ್ಯ ಸಿಇಎನ್ ಪೊಲೀಸರು 88 ಲಕ್ಷ ರೂ. ಹಣವನ್ನು ವಂಚನೆಗೊಳಗಾದವರ ಖಾತೆಗೆ ಜಮಾ ಮಾಡಿದ್ದಾರೆ. ಇನ್ನುಳಿದ 1 ಕೋಟಿ 44 ಲಕ್ಷ 99 ಸಾವಿರ ಹಣವನ್ನು ಕಾನೂನು ಪ್ರಕ್ರಿಯೆ ನಂತರ ಹಸ್ತಾಂತರ ಮಾಡಲಿದ್ದಾರೆ. ಪೊಲೀಸರು ಮೂವತ್ತಕ್ಕೂ ಅಧಿಕ ಆರೋಪಿಗಳನ್ನ ಬಂಧಿಸಿದ್ದು, ಬೆಳಗಾವಿ ಪೊಲೀಸರ ಕಾರ್ಯಕ್ಕೆ ಜಿಲ್ಲೆಯ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಆರೋಪಿಗಳನ್ನು ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಮದ್ಯ ಕಳ್ಳತನ ಮದ್ಯದ ಅಂಗಡಿ ಶೆಟರ್ ಮುರಿದು ಮದ್ಯ ಕಳ್ಳತನ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಗ್ರಾಮದ ವಿಂಟೇಜ್ ಲಿಕ್ಕರ್ ಬಾರ್‌ನಲ್ಲಿ ನಡೆದಿದೆ. 30 ಸಾವಿರಕ್ಕೂ ಹೆಚ್ಚು ಬೆಲೆಬಾಳುವ ಮದ್ಯವನ್ನು ಕಳ್ಳತನ್ ಮಾಡಿದ್ದಾರೆ. ಸದಾಶಿವ ಅವರಿಗೆ ಸೇರಿದ ಬಾರ್‌ನಲ್ಲಿ ಕಳ್ಳತನ ನಡೆದಿದೆ ಎಂದು ಹೇಳಲಾಗುತ್ತಿದೆ
ಇದನ್ನೂ ಓದಿ
ನವಾಬ್ ಮಲ್ಲಿಕ್ ವಿರುದ್ಧ 1.25 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಸಮೀರ್ ವಾಂಖೆಡೆ ತಂದೆ
ಶ್ರೀಕಿ, ವಿಷ್ಣು ಭಟ್ ಪುಂಡಾಟ ಪ್ರಕರಣ; ಭೀಮಾ ಜ್ಯುವೆಲರ್ಸ್ ಮಾಲೀಕನ ಮಗ ವಿಷ್ಣು ಬಂಧನ