AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವಾಬ್​ ಮಲ್ಲಿಕ್​ ವಿರುದ್ಧ 1.25 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಸಮೀರ್​ ವಾಂಖೆಡೆ ತಂದೆ

ಈಗಾಗಲೇ ಟಿವಿ, ಪತ್ರಿಕೆಗಳಲ್ಲಿ ಪ್ರಕಟವಾದ ನವಾಬ್​ ಮಲ್ಲಿಕ್​ ತಮ್ಮ ಬಗ್ಗೆ ಮಾಡಿರುವ ಆರೋಪದ ಸಂಬಂಧ ಲೇಖನಗಳು, ಟ್ವೀಟ್​ಗಳು, ಸಂದರ್ಶನಗಳನ್ನು ಡಿಲೀಟ್ ಮಾಡಬೇಕು ಎಂದೂ ಧ್ಯಾನ್​ದೇವ್ ಮನವಿ ಮಾಡಿದ್ದಾರೆ.

ನವಾಬ್​ ಮಲ್ಲಿಕ್​ ವಿರುದ್ಧ 1.25 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಸಮೀರ್​ ವಾಂಖೆಡೆ ತಂದೆ
ನವಾಬ್​ ಮಲ್ಲಿಕ್​​
TV9 Web
| Updated By: Lakshmi Hegde|

Updated on: Nov 07, 2021 | 9:29 AM

Share

ಮಾದಕ ದ್ರವ್ಯ ನಿಯಂತ್ರಣ ಮಂಡಳಿ (ಎನ್​ಸಿಬಿ) ವಲಯ ನಿರ್ದೇಶಕ ಸಮೀರ್​ ವಾಂಖೆಡೆ ತಂದೆ ಧ್ಯಾನ್​ದೇವ್​ ಧ್ಯಾನದೇವ್ ಕಚ್ರುಜಿ ವಾಂಖೆಡೆ ಅವರು ಮಹಾರಾಷ್ಟ್ರ ಸಂಪುಟ ಸಚಿವ ನವಾಬ್​ ಮಲ್ಲಿಕ್​ ಬಾಂಬೆ ಹೈಕೋರ್ಟ್​​​ನಲ್ಲಿ ಮಾನನಷ್ಟ 1.25 ಕೋಟಿ ರೂಪಾಯಿ ಮೊಕದ್ದಮೆ ಹೂಡಿದ್ದಾರೆ.  ಈ ಸಮೀರ್​ ವಾಂಖೆಡೆ ಕಳೆದ ತಿಂಗಳು ಶಾರುಖ್​ ಖಾನ್​ ಪುತ್ರ ಆರ್ಯನ್​​​ರನ್ನು ಬಂಧಿಸಿದಾಗಿನಿಂದಲೂ ಸುದ್ದಿಯಲ್ಲಿದ್ದಾರೆ. ಸದ್ಯ ಅವರನ್ನು ಆರ್ಯನ್​ ಖಾನ್​ ಕೇಸ್​ ಸೇರಿ ಎಲ್ಲ ಕೇಸ್​ಗಳಿಂದಲೂ ವಜಾ ಗೊಳಿಸಲಾಗಿದ್ದು ಅವರ ಜಾಗಕ್ಕೆ ಐಪಿಎಸ್​ ಅಧಿಕಾರಿ ಸಂಜಯ್​ ಕುಮಾರ್​​ರನ್ನು ನೇಮಕ ಮಾಡಲಾಗಿದೆ.

ವಾಂಖೆಡೆ ವಕೀಲ ಪರ ಅರ್ಷದ್ ಶೇಖ್ ಮಾನನಷ್ಟ ಮೊಕದ್ದಮೆ ಹೂಡಿದ್ದು, ನವಾಬ್​ ಮಲ್ಲಿಕ್​ ಅವರು, ಸಮೀರ್​ ವಾಂಖೆಡೆ ಕುಟುಂಬವನ್ನು ವಂಚಕ ಕುಟುಂಬ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ, ಅವರ ಧಾರ್ಮಿಕ ನಂಬಿಕೆಯನ್ನೇ ಪ್ರಶ್ನಿಸಿದ್ದಾರೆ. ವಾಂಖೆಡೆ ಕುಟುಂಬ ಹಿಂದೂಗಳಲ್ಲ ಎಂದು ಹೇಳಿದ್ದಾರೆ. ಅವರ ಇಡೀ ಕುಟುಂಬದ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಸಮೀರ್​ ವಾಂಖೆಡೆ ಕುಟುಂಬದ ಗೌರವ, ಸಾಮಾಜಿಕ ಗೌರವ, ಅವರೆಲ್ಲರ ಹೆಸರಿಗೆ ಹಾನಿ ಉಂಟು ಮಾಡಿದ್ದಾರೆ. ಇದು ಸರಿಪಡಿಸಲಾಗದ ನಷ್ಟವಾಗಿದೆ ಎಂದೂ ಮೊಕದ್ದಮೆಯಲ್ಲಿ ತಿಳಿಸಿದ್ದಾರೆ.  ಅಷ್ಟೇ ಅಲ್ಲ, ನವಾಬ್​ ಮಲ್ಲಿಕ್​ ಆಗಲೀ, ಅವರ ಪಕ್ಷದ ಇತರ ಸದಸ್ಯರಾಗಲೀ ತಮ್ಮ ಕುಟುಂಬದ ವಿರುದ್ಧ ಮಾತನಾಡುವುದನ್ನು ಶಾಶ್ವತವಾಗಿ ನಿಲ್ಲಿಸಬೇಕು. ಅವರಿಗೆ ಹಾಗೆ ಸೂಚನೆ ನೀಡಬೇಕು ಎಂದು ಧ್ಯಾನ್​ದೇವ್​ ಬಯಸುತ್ತಾರೆ ಎಂದು ಮಾನನಷ್ಟ ಮೊಕದ್ದಮೆಯಲ್ಲಿ ತಿಳಿಸಲಾಗಿದೆ.

ಅದಿಷ್ಟೇ ಅಲ್ಲ, ಈಗಾಗಲೇ ಟಿವಿ, ಪತ್ರಿಕೆಗಳಲ್ಲಿ ಪ್ರಕಟವಾದ ನವಾಬ್​ ಮಲ್ಲಿಕ್​ ತಮ್ಮ ಬಗ್ಗೆ ಮಾಡಿರುವ ಆರೋಪದ ಸಂಬಂಧ ಲೇಖನಗಳು, ಟ್ವೀಟ್​ಗಳು, ಸಂದರ್ಶನಗಳನ್ನು ಡಿಲೀಟ್ ಮಾಡಬೇಕು. ಹಾಗೇ, ಈಗ ಬಾಕಿ ಉಳಿದಿರುವ ಮೊಕದ್ದಮೆಯ ಅಂತಿಮ ತೀರ್ಪು ಬರುವವರೆಗೂ ಯಾವುದೇ ಮಾಧ್ಯಮದಲ್ಲಿ ಈ ಬಗ್ಗೆ ಪ್ರಕಟಿಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬೇಕು. ಈ ಸಂಬಂಧ ಕೋರ್ಟ್​ ಸೂಚನೆ ನೀಡಬೇಕು ಎಂದು ಧ್ಯಾನ್​ದೇವ್​ ಮನವಿ ಮಾಡಿದ್ದಾರೆ.

ಇನ್ನು ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರ ವಿರುದ್ಧ ಪ್ರತಿಕ್ರಿಯೆ ನೀಡಿರುವ ನವಾಬ್​ ಮಲ್ಲಿಕ್​, ನಾನು ಅನ್ಯಾಯ ಇದ್ದಲ್ಲಿ ಮಾತನಾಡುತ್ತೇನೆ. ಮಾನನಷ್ಟ ಮೊಕದ್ದಮೆಗೆಲ್ಲ ಹೆದರುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Puneeth Rajkumar: ಇಂದು ಸಂಜೆ 6 ಗಂಟೆಗೆ ರಾಜ್ಯದ 550ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪುನೀತ್​ಗೆ ನಮನ ಕಾರ್ಯಕ್ರಮ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?