ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲ: ಬೇರೊಬ್ಬ ವೈದ್ಯನ ಹೆಸರಿನಲ್ಲಿ ಅಬ್ದುಲ್ ನಡೆಸ್ತಿದ್ದ ಕ್ಲಿನಿಕ್ ಸೀಜ್

ಮಕ್ಕಳ ಮಾರಾಟ ಜಾಲ ಪತ್ತೆ ಪ್ರಕರಣ ಕುರಿತು ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ, ಬೆಳಗಾವಿ ಜಿಲ್ಲೆಯ ಕಿತ್ತೂರಿನ ಸೋಮವಾರಪೇಟೆಯಲ್ಲಿರುವ ನಕಲಿ ವೈದ್ಯನ ಕ್ಲಿನಿಕ್​ನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಜೊತೆಗೆ ಅಬ್ದುಲ್ ಗಫರ್ ಲಾಡಖಾನ್ ಬಂಧಿಸಿದ್ದಾರೆ.

ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲ: ಬೇರೊಬ್ಬ ವೈದ್ಯನ ಹೆಸರಿನಲ್ಲಿ ಅಬ್ದುಲ್ ನಡೆಸ್ತಿದ್ದ ಕ್ಲಿನಿಕ್ ಸೀಜ್
ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 11, 2024 | 9:49 PM

ಬೆಳಗಾವಿ, ಜೂ.11: ಮಕ್ಕಳ ಮಾರಾಟ ಜಾಲ ಪತ್ತೆ ಪ್ರಕರಣ ಕುರಿತು ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ, ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರಿನ ಸೋಮವಾರಪೇಟೆಯಲ್ಲಿರುವ ನಕಲಿ ವೈದ್ಯನ ಕ್ಲಿನಿಕ್​ನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ನಿನ್ನೆ(ಜೂ.10) ಆರೋಪಿ ಅಬ್ದುಲ್ ಗಫರ್ ಲಾಡಖಾನ್​ನ​ನ್ನು ಬಂಧಿಸಿದ್ದರು. ಇತ 10 ವರ್ಷದಿಂದ ಬೇರೊಬ್ಬ ವೈದ್ಯನ ಹೆಸರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಎನ್ನಲಾಗಿದೆ. ಇಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೂಚನೆ ಮೆರೆಗೆ ತಾಲೂಕು ವೈದ್ಯಾಧಿಕಾರಿ ಎಸ್.ಎಸ್.ಸಿದ್ದನ್ನವರ್ ತಂಡ ಪರಿಶೀಲನೆ ನಡೆಸಿತ್ತು. ಈ ವೇಳೆ ಅಲೋಪತಿ ಔಷಧಿ, ವೈದ್ಯಕೀಯ ಸಲಕರಣೆ, ಹಾಸಿಗೆ ಪತ್ತೆಯಾಗಿದ್ದು, ಈ ಹಿನ್ನಲೆ ಕ್ಲಿನಿಕ್ ಸೀಜ್ ಮಾಡಲಾಗಿದೆ. ಜೊತೆಗೆ ಮುಂದಿನ ತನಿಖೆಗೆ ಜಿಲ್ಲಾ ಕೆಪಿಎಂಇಗೆ ಮನವಿ ಮಾಡಿದ್ದಾರೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ನಕಲಿ ವೈದ್ಯ ಅಬ್ದುಲ್ ಲಾಡಖಾನ್ ಹಾಗೂ ನರ್ಸ್ ಮಹಾದೇವಿ ಜೈನರ್ ಸೇರಿ ಐವರನ್ನು ಪೊಲೀಸರು ಜೂ.10 ರಂದು ಬಂಧಿಸಿದ್ದಾರೆ. ಇತ ಹತ್ತು ವರ್ಷದಿಂದ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಸೋಮವಾರ ಪೇಟೆಯಲ್ಲಿ ಕ್ಲಿನಿಕ್ ನಡೆಸುತ್ತಿದ್ದ.  ಮದುವೆಯಾಗದೆ ಗರ್ಭಿಣಿಯರಾಗುವ ಯುವತಿಯರನ್ನೆ ಟಾರ್ಗೇಟ್ ಮಾಡುತ್ತಿದ್ದ ಈ ಟೀಂ, ಅವರ ಬಳಿ 15ರಿಂದ 20ಸಾವಿರ ಹಣ ಪಡೆದು ಅವರಿಗೆ ಅಬಾರ್ಷನ್ ಮಾಡಿಸುತ್ತಿತ್ತು. ಅಲ್ಲದೆ ಹುಟ್ಟಿದ ಮಗು ಸತ್ತಿದೆ ಎಂದು ಕಥೆ ಕಟ್ಟಿ ಯುವತಿ ಹಾಗೂ ಜೊತೆಗಿದ್ದವರನ್ನು ತಳ್ಳಿ ಹಾಕಿ ನಂತರ ಆ ಮಗುವನ್ನು ತಾವೇ ಕೆಲ ದಿನಗಳ ಕಾಲ ಸಾಕಿ ಬಳಿಕ ಹಣಕ್ಕೆ ಮಾರಾಟ ಮಾಡುತ್ತಿದ್ದರು.

ಇದನ್ನೂ ಓದಿ:ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ ಕೇಸ್: ಬಂಧಿತ ಕಿಂಗ್ ಪಿನ್ ಅಬ್ದುಲ್ ಅಸಲಿಗೆ ವೈದ್ಯನೇ ಅಲ್ಲ

ಈ ವಿಚಾರ ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿರುವ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಒಂದು ಟೀಮ್ ಮಾಡಿಕೊಂಡ ಅಧಿಕಾರಿಗಳು ನರ್ಸ್ ಮಹಾದೇವಿಗೆ ಅಪ್ರೋಚ್ ಆಗಿದ್ದಾರೆ. ತಮಗೆ ಮಗು ಇಲ್ಲ ಮಗು ಬೇಕು ಎಂದು ಹೇಳಿದ್ದಾರೆ. ಈಕೆ ಅಬ್ದುಲ್ ಬಳಿ 60 ಸಾವಿರ ಹಣ ಕೊಟ್ಟು ಮಗು ಖರೀದಿ ಮಾಡಿದ್ದಾಳೆ. ಬಳಿಕ 1ಲಕ್ಷ 40ಸಾವಿರಕ್ಕೆ ಮಾರಾಟ ಮಾಡಲು ಮುಂದಾಗಿದ್ದಾಳೆ. ಅಧಿಕಾರಿಗಳ ತಂಡ ಬೆಳಗಾವಿಗೆ ಆಕೆಯನ್ನ ಮಗು ಸಮೇತ ಕರೆಯಿಸಿ ಖೆಡ್ಡಾಗೆ ಬೀಳಿಸಿದ್ದಾರೆ. ವಿಚಾರಣೆ ವೇಳೆ ಮಹಾದೇವಿ ಅಬ್ದುಲ್ ಹೆಸರು ಸಮೇತ ಐದು ಜನ ಹೆಸರು ಬಾಯಿ ಬಿಟ್ಟಿದ್ದಾಳೆ. ಇದೀಗ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಐದು ಜರನ್ನ ಬಂಧಿಸಲಾಗಿತ್ತು. ಇದೀಗ ಆತನ ಕ್ಲಿನಿಕ್​ನ್ನು ಸೀಜ್​ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!