ಬೇಜವಾಬ್ದಾರಿ ವಿರೋಧ ಪಕ್ಷ: ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಬೊಮ್ಮಾಯಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 21, 2021 | 6:57 PM

ವಿಧೇಯಕ ಮಂಡಿಸುವಾಗ ಅವರು ಉಪಸ್ಥಿತರಿರಲಿಲ್ಲ. ಇದು ಬೇಜವಾಬ್ದಾರಿ ವಿರೋಧಪಕ್ಷ ಎಂದು ಬೊಮ್ಮಾಯಿ ಹರಿಹಾಯ್ದರು

ಬೇಜವಾಬ್ದಾರಿ ವಿರೋಧ ಪಕ್ಷ: ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಬೊಮ್ಮಾಯಿ
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಳಗಾವಿ: ತರಾತುರಿಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡಿಸಲಾಗಿದೆ ಎಂಬ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು. ವಿಧೇಯಕ ಮಂಡನೆಗೆ ಅರ್ಧಗಂಟೆ ಮೊದಲೇ ಕಾಂಗ್ರೆಸ್ ಪಕ್ಷದ ಮುಖ್ಯ ಮುಖ್ಯ ಸಚೇತಕರಿಗೆ ಸ್ಪೀಕರ್ ಮಾಹಿತಿ ನೀಡಿದ್ದರು. ಆದರೂ ಅವರು ವಿಧೇಯಕ ಮಂಡಿಸುವಾಗ ಉಪಸ್ಥಿತರಿರಲಿಲ್ಲ. ಇದು ಬೇಜವಾಬ್ದಾರಿ ವಿರೋಧಪಕ್ಷ ಎಂದು ಬೊಮ್ಮಾಯಿ ಹರಿಹಾಯ್ದರು. ನಿಯಮದಂತೆಯೇ ಸದನದಲ್ಲಿ ನಾವು ವಿಧೇಯಕ ಮಂಡಿಸಿದ್ದೇವೆ. ಕೇವಲ ರಾಜಕಾರಣ ಅಥವಾ ಮತಬ್ಯಾಂಕ್​ಗಾಗಿ ಅವರು ವಿಧೇಯಕ ವಿರೋಧಿಸುತ್ತಿದ್ದಾರೆ. ಚರ್ಚೆಗೆ ಮುಕ್ತ ಅವಕಾಶವಿದೆ, ನಾಳೆ (ಡಿ.22) ಚರ್ಚೆ ಮಾಡಲಿ ಎಂದರು ಸಲಹೆ ಮಾಡಿದರು.

ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ನಾವೂ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದ್ದೇವೆ. ಮತಾಂತರ ವಿಧೇಯಕದಲ್ಲಿ ಏನಿದೆ, ಏನಿಲ್ಲ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವರದಿಯಾಗಿದೆ. ಇದನ್ನು ಕಾನೂನು ಮತ್ತು ಸಂವಿಧಾನ ಸಮ್ಮತವಾಗಿ ನಾವು ರೂಪಿಸಿದ್ದೇವೆ ಎಂದರು.

ವಿಧೇಯಕ ಮಂಡನೆ
ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕವನ್ನು ಮಂಗಳವಾರ ಮಂಡಿಸಲಾಯಿತು. ಮಧ್ಯಾಹ್ನ ಊಟದ ನಂತರ ಕಲಾಪ ಆರಂಭವಾದ ತಕ್ಷಣ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಸ್ಪೀಕರ್ ಅವಕಾಶ ನೀಡಿದರು. ವಿರೋಧ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ವಿಧೇಯಕದ ಪ್ರತಿ ಕೊಟ್ಟಿಲ್ಲ, ಚರ್ಚೆ ಮಾಡಿಲ್ಲ ಎಂದು ವಿರೋಧ ಪಕ್ಷಗಳ ಸದಸ್ಯರು ಆಕ್ಷೇಪಿಸಿದರು.

ಇಂಥ ವಿಧೇಯಕಗಳನ್ನು ಕದ್ದುಮುಚ್ಚಿ ಏಕೆ ತರ್ತೀರಿ. ಸರ್ಕಾರ ಕಳ್ಳತನದಿಂದ ವಿಧೇಯಕ ಮಂಡಿಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪಿಸಿದರು.

ಇದನ್ನೂ ಓದಿ: Anti Conversion Bill Highlights: ಮತಾಂತರ ನಿಷೇಧ ಕಾಯ್ದೆಯ ಮುಖ್ಯ ಅಂಶಗಳು, ಪ್ರತಿಪಕ್ಷಗಳ ಆಕ್ಷೇಪಗಳಿವು
ಇದನ್ನೂ ಓದಿ: ಮತಾಂತರ ಕಾಯ್ದೆಗೆ 40 ಮಠಾಧೀಶರಿಂದ ಮನವಿ; 2016ರಲ್ಲೇ ಕಾಯಿದೆ ಜಾರಿಗೆ ಕಾಂಗ್ರೆಸ್​ ಮುಂದಾಗಿತ್ತು ಎಂದ ಸಿಎಂ ಬೊಮ್ಮಾಯಿ

Published On - 6:56 pm, Tue, 21 December 21