ಮುಂದಿನ ತಿಂಗಳ ಮೊದಲ ವಾರ ಕುಂದಾನಗರಿಯಲ್ಲಿ ಹೊಸ ಸರ್ಕಾರದ ಮೊದಲ ಮಹತ್ವದ ಅಧಿವೇಶನ – ಆದರೆ ಸುವರ್ಣ ವಿಧಾನಸೌಧ ಗೋಡೌನ್ ಆಂತಾಗಿದೆ!
UT Khader: ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿದ್ದು ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನ ಜಿಲ್ಲಾಡಳಿತದಿಂದ ಮಾಡಿಕೊಳ್ಳಲಾಗುತ್ತಿದೆ. ಡಿಸೆಂಬರ್ ಮೊದಲ ವಾರದಲ್ಲಿ ಅದರಲ್ಲೂ 4ರಿಂದ 15ರ ವರೆಗೂ ಅಧಿವೇಶನ ಮಾಡಲು ನಿರ್ಧಾರ ಮಾಡಲಾಗಿದೆ. ನಿನ್ನೆ ಮಂಗಳವಾರ ಖುದ್ದು ಸ್ಪೀಕರ್ ಯು.ಟಿ ಖಾದರ್ ಮತ್ತು ಸಭಾಪತಿ ಬಸವರಾಜ ಹೊರಟ್ಟಿ ಸುವರ್ಣ ವಿಧಾನ ಸೌದಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೊಸ ಸರ್ಕಾರದ ಮೊದಲ ಚಳಿಗಾಲ ಅಧಿವೇಶನ (Belagavi Winter Session) ಬೆಳಗಾವಿಯಲ್ಲಿ ನಡೆಸಲು ದಿನಾಂಕ ನಿಗದಿಯಾಗಿದೆ. ಖುದ್ದು ಸ್ಪೀಕರ್ ಮತ್ತು ಸಭಾಪತಿ ಸುವರ್ಣನ ವಿಧಾನ ಸೌಧಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರಿಯಾಗಿ ಸೌಧವನ್ನ ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ದ ಸ್ಪೀಕರ್ ಗರಂ ಅದ್ರೇ, ಸುವರ್ಣ ವಿಧಾನಸೌಧ ಗೋಡೌನ್ ಆಗಿದೆ ಅಂತಾ ಅಸಹಾಯಕತೆ ತೊಡಿಕೊಂಡ ಸಭಾಪತಿ, ಅಷ್ಟಕ್ಕೂ ಯಾವಾಗಿನಿಂದ ಬೆಳಗಾವಿಯಲ್ಲಿ ಅಧಿವೇಶನ ಆರಂಭ ಆಗಲಿದೆ? ಈ ಕುರಿತು ಸ್ಪೀಕರ್ ಮತ್ತು ಸಭಾಪತಿ ಹೇಳಿದ್ದೇನೂ ಅಂತೀರಾ ಈ ಸ್ಟೋರಿ ನೋಡಿ… ಸುವರ್ಣ ವಿಧಾನಸೌಧದಲ್ಲಿ ಸ್ಥಿತಿ ಕಂಡು ಗರಂ, ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಸ್ಪೀಕರ್, ಸುವರ್ಣ ವಿಧಾನಸೌಧ ಗೋಡೌನ್ ಆಗಿದೆ ಅಂತಾ ಅಸಹಾಯಕತೆ ತೋಡಿಕೊಂಡ ಸಭಾಪತಿ, ಅಧಿಕಾರಿಗಳ ಜತೆಗೆ ಇಡೀ ಸುವರ್ಣ ಸೌಧ ರೌಂಡ್ಸ್ ಮಾಡಿದ ಯು.ಟಿ ಖಾದರ್ ಮತ್ತು ಬಸವರಾಜ ಹೊರಟ್ಟಿ ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ (Suvarna Vidhana Soudha at Belagavi).
ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿದ್ದು ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನ ಜಿಲ್ಲಾಡಳಿತದಿಂದ ಮಾಡಿಕೊಳ್ಳಲಾಗುತ್ತಿದೆ. ಡಿಸೆಂಬರ್ ಮೊದಲ ವಾರದಲ್ಲಿ ಅದರಲ್ಲೂ 4ರಿಂದ 15ರ ವರೆಗೂ ಅಧಿವೇಶನ ಮಾಡಲು ನಿರ್ಧಾರ ಮಾಡಿದ್ದು ಸರ್ಕಾರದಿಂದ ಅಧಿಕೃತವಾಗಿ ದಿನಾಂಕ ಪ್ರಕಟವಾಗಬೇಕಿದೆ.
ಇತ್ತ ನಿನ್ನೆ ಮಂಗಳವಾರ ಖುದ್ದು ಸ್ಪೀಕರ್ ಯು.ಟಿ ಖಾದರ್ ಮತ್ತು ಸಭಾಪತಿ ಬಸವರಾಜ ಹೊರಟ್ಟಿ ಸುವರ್ಣ ವಿಧಾನ ಸೌದಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗ್ಗೆ ಹತ್ತು ಗಂಟೆಗೆ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದ ನಾಯಕರು ಮೊದಲು ವಿಧಾನಸಭೆ ಮತ್ತು ವಿಧಾನ ಪರಿಷತ್ ಸಭಾಂಗಣ ಪರಿಶೀಲನೆ ನಡೆಸಿದರು. ಈ ವೇಳೆ ಉಭಯ ಸಭಾಂಗಣದಲ್ಲಿನ ಮೈಕ್, ಟಿವಿಗಳ ಪರಿಶೀಲನೆ ಮಾಡಿ, ಸ್ಪೀಕರ್ ಟೇಬಲ್ ಬೆಂಗಳೂರು ಮಾದರಿಯಲ್ಲಿ ಹಾಕುವಂತೆ, ಉಭಯ ಹಾಲ್ ನಲ್ಲಿ ದೊಡ್ಡ ಟಿವಿ ಹಾಕಲು ಸ್ಪೀಕರ್ ಖಾದರ್ ಸೂಚನೆ ನೀಡಿದರು. ಮೊಗಸಾಲೆ, ಕಾನ್ಫರೆನ್ಸ್ ಹಾಲ್, ಸಿಎಂ, ಸಚಿವರ ಕಚೇರಿಗಳ ಜತೆಗೆ ಸುವರ್ಣ ವಿಧಾನಸೌಧ ಮೂರು ಮಹಡಿಯ ಪರಿಶೀಲನೆ ನಡೆಸಿದರು.
ಇದೇ ವೇಳೆ ಸುವರ್ಣ ಸೌಧದ ಗೋಡೆಗಳ ಮೇಲೆ ಕಲೆ ಹಾಗೂ ಸ್ವಚ್ಛತೆ ಇಲ್ಲದನ್ನ ಕಂಡು ಸ್ಪೀಕರ್ ಗರಂ ಆದ್ರೂ. ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳನ್ನ ಕರೆದು ನಿಮ್ಮ ಮನೆ ಆಗಿದ್ರೇ ಹೀಗೆ ಇಟ್ಕೊಳ್ತಿದ್ರಾ ಅಂತಾ ಕ್ಲಾಸ್ ತೆಗೆದುಕೊಂಡರು. ಪ್ರತಿ ವರ್ಷ ಸುವರ್ಣ ವಿಧಾನಸೌಧ ನಿರ್ವಹಣೆಗೆ 6ಕೋಟಿ ಹಣ ಪಡೆಯುತ್ತಿರಿ 120ಕ್ಕೂ ಅಧಿಕ ಲೇಬರ್ ಇದ್ದು ಯಾಕೆ ಸ್ವಚ್ಛವಾಗಿಟ್ಟುಕೊಂಡಿಲ್ಲ ಅಂತಾ ಗರಂ ಆದ್ರೂ. ಇತ್ತ ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ರಿಂದ ಸ್ಪೀಕರ್, ಸಭಾಪತಿ ಮಾಹಿತಿ ಪಡೆದುಕೊಂಡು ಕೂಡಲೇ ಗುತ್ತಿಗೆದಾರನನ್ನ ಕರೆಯಿಸಿ ಸ್ವಚ್ಛಗೊಳಿಸುವಂತೆ ಸೂಚನೆ ನೀಡಿದರು. ಸಚಿವಾಲಯದ ಅಧಿಕಾರಿಗಳು, ಬೆಳಗಾವಿ ಪೊಲೀಸ್ ಕಮೀಷನರ್, ಜಿಪಂ ಸಿಇಒ, ಪಾಲಿಕೆ ಕಮೀಷನರ್ ಸಾಥ್ ನೀಡಿದರು. ಈ ಕುರಿತು ಮಾತನಾಡಿದ ಸ್ಪೀಕರ್ ಖಾದರ್ ಡಿಸೆಂಬರ್ ಮೊದಲ ವಾರದಲ್ಲಿ ಅಧಿವೇಶನ ನಡೆಸಲಾಗುವುದು, ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳಲು ಸೂಚನೆ ನೀಡಿದ್ದು ನಾವು ಕೂಡ ಪರಿಶೀಲನೆ ನಡೆಸಿದ್ದೇವೆ ಅಂತಾ ಹೇಳಿದರು…
ಇನ್ನು ಸಭಾಪತಿ ಬಸವರಾಜ ಹೊರಟ್ಟಿ ಕೂಡ ವಿಧಾನ ಪರಿಷತ್ ಸಭಾಂಗಣ ಪರಿಶೀಲನೆ ನಡೆಸಿದರು. ಜತೆಗೆ ಸಭಾಪತಿ ಕುರ್ಚಿ ಎತ್ತರ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನೂ ಉಭಯ ನಾಯಕರು ಸುವರ್ಣ ಸೌಧ ರೌಂಡ್ಸ್ ಹಾಕುವ ಸಂದರ್ಭದಲ್ಲಿ ಸುವರ್ಣ ವಿಧಾನಸೌಧ ಗೋಡೌನ್ ಆಗಿದೆ ಅಂತಾ ಹೊರಟ್ಟಿ ಸ್ಪೀಕರ್ ಅವರ ಮುಂದೆ ಅಸಹಾಯಕತೆ ಮಾತು ಹೇಳಿದರು. ಹೌದು ಅಧಿವೇಶನ ಬಂದ ಸಂದರ್ಭದಲ್ಲಿ ಹತ್ತು ದಿನ ಜಾತ್ರೆ ಮಾದರಿಯಲ್ಲಿ ಅಧಿವೇಶನ ನಡೆಸಿ ನಂತರ ದೊಡ್ಡ ಕಡ್ಡಟ ಸೈಲೆಂಟ್ ಆಗಿ ಬಿಡುತ್ತೆ.
ವರ್ಷದಲ್ಲಿ ಒಂದು ಬಾರಿ ಕಾರ್ಯ ಚಟುವಟಿಕೆ ಈ ಸೌಧದಲ್ಲಿ ನಡೆಯುತ್ತಿದ್ದು ಎನೂ ಮಾಡದ ಸ್ಥಿತಿಯಲ್ಲಿ ನಾವಿದ್ದೇವೆ ಅನ್ನೋ ರೀತಿಯಲ್ಲಿ ಸಭಾಪತಿ ಮಾತಾಡಿದ್ರೂ. ನಾನು ಬೆಳಗಾವಿ ಸುವರ್ಣ ವಿಧಾನ ಸೌಧ ಕಟ್ಟುವಾಗ ಹೇಳಿದ್ದೆ ಬೆಂಗಳೂರು ವಿಧಾನಸೌಧದಂತೆ ಚಿಕ್ಕದಾಗಿ ಬೆಳಗಾವಿ ಸುವರ್ಣ ವಿಧಾನ ಸೌಧ ನಿರ್ಮಿಸುವಂತೆ ಆದ್ರೆ ಬೆಳಗಾವಿಯಲ್ಲಿ ಆಗಿದ್ದೇ ಬೇರೆ ಅದನ್ನ ಆಮೇಲೆ ಹೇಳ್ತಿನಿ ಅಂದ್ರು. ಏನಿಲ್ಲಾ ಇದೊಂದು ನಥಿಂಗ್ ಬಟ್ ಬಿಗ್ ಗೋಡೌನ್ ಆಗಿದೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ರೂ…
ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದ ಮೊದಲ ಚಳಿಗಾಲ ಅಧಿವೇಶನ ಬೆಳಗಾವಿಯಲ್ಲಿ ನಡೆಸಲು ಎಲ್ಲಾ ರೀತಿಯ ತಯಾರಿ ನಡೆಸಲಾಗಿದೆ. ಇತ್ತ ಸ್ಪೀಕರ್, ಸಭಾಪತಿ ಬೇಟಿ ನೀಡಿ ಪರಿಶೀಲನೆ ನಡೆಸಿ ವಾಪಾಸ್ ಆಗಿದ್ದು ಆದಷ್ಟು ಬೇಗ ಸರ್ಕಾರದಿಂದ ಅಧಿವೇಶನದ ದಿನಾಂಕ ಘೋಷಣೆ ಆಗಲಿದೆ. ಭೀಕರ ಬರದ ನಡುವೆ, ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಅಧಿವೇಶನ ನಡೆಸುತ್ತಿದ್ದು ಯಾವ ಮಟ್ಟಿಗೆ ಸರ್ಕಾರ ಮತ್ತು ವಿರೋಧ ಪಕ್ಷದ ನಡುವಿನ ಫೈಟ್ ಗೆ ಸಾಕ್ಷಿಯಾಗಲಿದೆ ಅನ್ನೋದನ್ನ ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:37 am, Wed, 8 November 23