ಬೆಳಗಾವಿ: ಪರಿಷತ್‌ನ 14 ಕಾಂಗ್ರೆಸ್ ಸದಸ್ಯರ ಅಮಾನತು ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ಬಹಳ ಕೆಟ್ಟ ಪದ್ಧತಿ. ಸಂಸತ್ನಲ್ಲೂ ಮಾಡಿದ್ದಾರೆಂದು ಇಲ್ಲಿಯೂ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಮಾರಕ. ಪರಿಷತ್ ಸದಸ್ಯರ ಅಮಾನತು ಕಾಂಗ್ರೆಸ್ ಖಂಡಿಸುತ್ತದೆ. ನಾಳೆ 10 ಗಂಟೆಗೆ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸ್ತೇವೆ. ಮುಂದೆ ಏನು ಕ್ರಮಕೈಕೊಳ್ಳಬೇಕೆಂದು ಚರ್ಚೆ ನಡೆಸುತ್ತೇವೆ ಎಂದು ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ನೆರೆ ಪರಿಹಾರ, ಸರ್ಕಾರದ ವೈಫಲ್ಯ ಖಂಡಿಸಿ ಟ್ರ್ಯಾಕ್ಟರ್ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟ್ರ್ಯಾಕ್ಟರ್ ರಾಲಿ ನಡೆಯಲಿದೆ. ಸರ್ಕಾರದ ತಾರತಮ್ಯ, ಜನ ವಿರೋಧಿ ನೀತಿ ಖಂಡಿಸಿ ರಾಲಿ ನಡೆಯಲಿದೆ. ಕಾಂಗ್ರೆಸ್ ಕಚೇರಿಯಿಂದ ಸುವರ್ಣಸೌಧದವರೆಗೂ ರಾಲಿ ನಡೆಯಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಡಿ. 22ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
ಡಿಸೆಂಬರ್ 22 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಿಗದಿಪಡಿಸಲಾಗಿದೆ. ಕೇವಲ ವಿಧಾನಸಭಾ ಸದಸ್ಯರಿಗೆ ಮಾತ್ರ ಸಭೆಗೆ ಆಹ್ವಾನ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆಯಾಯ ಕ್ಷೇತ್ರಗಳ ಸಮಸ್ಯೆ ಆಲಿಸಲು ಸಿಎಲ್‌ಪಿ ಸಭೆ ನಡೆಸಲಾಗುವುದು ಎಂದು ತಿಳಿದುಬಂದಿದೆ.
ರೂಲಿಂಗ್ ಕೊಟ್ಟ ಮೇಲೆ ನಾನು ಏನೂ ಮಾತನಾಡಲ್ಲ: ಸಿಎಂ ಬೊಮ್ಮಾಯಿ
ಪರಿಷತ್ನಲ್ಲಿ 14 ಕಾಂಗ್ರೆಸ್ ಸದಸ್ಯರ ಅಮಾನತು ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಸದನದ ಒಳಗೆ ನಡೆದಿದ್ದನ್ನು ಹೊರಗೆ ಮಾತನಾಡಬಾರದು. ವಿಧಾನಪರಿಷತ್ ಸಭಾವತಿ ರೂಲಿಂಗ್ ಕೊಟ್ಟಿದ್ದಾರೆ. ರೂಲಿಂಗ್ ಕೊಟ್ಟ ಮೇಲೆ ನಾನು ಏನೂ ಮಾತನಾಡಲ್ಲ ಎಂದು ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕ್ಯಾಪ್ಟನ್ ವರುಣ್ ಸಿಂಗ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಭಾರತೀಯ ಸೇನೆ ದುಃಖದಲ್ಲಿದೆ. ವರುಣ್ ಸಿಂಗ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕ್ಯಾಪ್ಟನ್ ವರುಣ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ನಮ್ಮ ಅಮಾನತು ಸರಿಯಲ್ಲ, ಪರಿಷತ್ನಲ್ಲಿ ಪ್ರತಿಭಟನೆ ಮುಂದುವರಿಸುತ್ತೇವೆ: ನಾರಾಯಣಸ್ವಾಮಿ
ಇದನ್ನೂ ಓದಿ: ವಿಧಾನಪರಿಷತ್‌ನ 14 ಕಾಂಗ್ರೆಸ್ ಸದಸ್ಯರ ಅಮಾನತು; ಸಭಾಪತಿ ಬಸವರಾಜ ಹೊರಟ್ಟಿ ಆದೇಶ