ದುರ್ಗಾಮಾತಾ ದೌಡ್: ಡಿಜೆ ಸಾಂಗ್​ಗೆ ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿದ ಯುವಕರು

ಹಿಂದೂಪರ ಸಂಘಟನೆ ದುರ್ಗಾಮಾತಾ ದೌಡ್ ಆಯೋಜಿಸಿದ್ದು, ಡಿಜೆ ಸಾಂಗ್​ಗೆ ತಲ್ವಾರ್ ಹಿಡಿದು ಯುವಕರು ಡ್ಯಾನ್ಸ್ ಮಾಡಿದ್ದಾರೆ.

ದುರ್ಗಾಮಾತಾ ದೌಡ್: ಡಿಜೆ ಸಾಂಗ್​ಗೆ ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿದ ಯುವಕರು
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡುತ್ತಿರುವ ಯುವಕರು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 02, 2022 | 8:52 PM

ಬೆಳಗಾವಿ: ದುರ್ಗಾಮಾತಾ ದೌಡ್​ ಮೆರವಣಿಗೆಯಲ್ಲಿ ಯುವಕರು ತಲ್ವಾರ್ ಪ್ರದರ್ಶನ ಮಾಡಿರುವಂತಹ ಘಟನೆ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ತಲ್ವಾರ್​ ಹಿಡಿದು ಯುವಕರು ಕುಣಿದ್ದಾರೆ. ಹಿಂದೂಪರ ಸಂಘಟನೆ ದುರ್ಗಾಮಾತಾ ದೌಡ್ ಆಯೋಜಿಸಿದ್ದರು. ಡಿಜೆ ಸಾಂಗ್​ಗೆ ತಲ್ವಾರ್ ಹಿಡಿದು ಯುವಕರು ಡ್ಯಾನ್ಸ್ ಮಾಡಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಕಂಡುಬಂದಿದೆ. ಇನ್ನೂ ಕಲಬುರಗಿಯಲ್ಲಿ ವಿಶ್ವಹಿಂದು ಪರಿಷತ್ ಮಹಿಳಾ ಘಟಕದಿಂದ ನಗರದಲ್ಲಿ ದುರ್ಗಾದೌಡ್ ಶೋಭಾಯಾತ್ರೆ ಆಯೋಜನೆ ಮಾಡಲಾಗಿತ್ತು. ಸಾವಿರಾರು ಮಹಿಳೆಯರು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ನಗರದ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದ‌ರಗೆ ದುರ್ಗಾದೇವಿ ಬೃಹತ್ ಮೂರ್ತಿ ಮೆರವಣಿಗೆ ಮಾಡಲಾಯಿತು. ಶೋಭಾಯಾತ್ರೆಯಲ್ಲಿ ಮಹಿಳೆಯರು ಸಖತ್​ ಆಗಿ ಹೆಜ್ಜೆ ಹಾಕಿದರು. ಜೊತೆಗೆ ಯುವತಿಯರು ಬುಲೆಟ್​ನಲ್ಲಿ ಭಾಗವಸಿದ್ದರು. ಎಲ್ಲಡೆ ಭಗವಾ ಧ್ವಜಗಳು ರಾರಾಜಿಸಿದವು.

ದುರ್ಗಾ ದೌಡ್​ನಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಭಾಗಿ

ಉಡುಪಿ: ನಗರದಲ್ಲಿ ದುರ್ಗಾ ದೌಡ್ ಮೆರವಣಿಗೆ ಆಯೋಜಿಸಿದ್ದು ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿದೆ. ಸಾವಿರಾರು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು. ಸಚಿವ ವಿ ಸುನಿಲ್ ಕುಮಾರ್, ಶಾಸಕ ರಘುಪತಿ ಭಟ್, ಶಾಸಕ ಸುಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅನೇಕ ಗಣ್ಯರು ಭಾಗಿದ್ದರು. ಮಹಾರಾಷ್ಟ್ರ ಕೇರಳದಿಂದ ಕಲಾತಂಡಗಳು ಆಗಮಿಸಿದ್ದವು.  ದುರ್ಗೆ, ಶಿವಾಜಿ, ಸಾವರ್ಕರ್, ಭಾವಚಿತ್ರ ವೇಷದಾರಿಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಸಾವಿರಾರು ಕೇಸರಿ ಬಾವುಟಗಳ ಸಹಿತ ಘೋಷಣೆ ಕೂಗುತ್ತಾ ಕಾರ್ಯಕರ್ತರು ಸಾಗಿದರು.

ದಕ್ಷಿಣ ಭಾರತೀಯರು ಬಾಲಿವುಡ್ ಸಿನಿಮಾಗಳನ್ನು ಬಹಿಷ್ಕರಿಸಿ: ಕಾಜಲ್ ಹಿಂದೂಸ್ತಾನಿ

ಲವ್ ಜಿಹಾದ್ ವಿಷ ಬೀಜ ಬಿತ್ತುವುದೇ ಬಾಲಿವುಡ್ ಸಿನಿಮಾಗಳ ಉದ್ದೇಶ. ದಕ್ಷಿಣ ಭಾರತೀಯರು ಬಾಲಿವುಡ್ ಸಿನಿಮಾಗಳನ್ನು ಬಹಿಷ್ಕರಿಸಿ ಎಂದು ದುರ್ಗಾದೌಡ್ ಸಮಾವೇಶದಲ್ಲಿ ಗುಜರಾತ್‌ನ ಸಾಮಾಜಿಕ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿ ಹೇಳಿಕೆ ನೀಡಿದರು. ಲವ್ ಜಿಹಾದ್ ವಿಷ ಬೀಜ ಬಿತ್ತುವುದೇ ಬಾಲಿವುಡ್ ಸಿನಿಮಾಗಳ ಉದ್ದೇಶ. ಉತ್ತರ ಭಾರತೀಯರು ಬಾಲಿವುಡ್ ಸಿನಿಮಾ ಬಹಿಷ್ಕರಿಸುತ್ತಿದ್ದಾರೆ. ಆದರೆ ನಿಮಗೆ ದಕ್ಷಿಣ ಭಾರತೀಯರಿಗೆ ಏನಾಗಿದೆ ಎಂದು ಪ್ರಶ್ನಿಸಿದರು.

ಹಿಂದೂ ಜಾಗರಣ ವೇದಿಕೆ ಶಸ್ತ್ರಾಸ್ತ್ರ ಮೂಲಕ ಮನೆಗಳನ್ನು ತಲುಪಲಿದೆ

ಹಿಂದೂ ಮುಖಂಡ ಶ್ರೀಕಾಂತ್ ಕಾರ್ಕಳ ಮಾತನಾಡಿದ್ದು, ಶೀಘ್ರದಲ್ಲೇ ಆರ್​ಎಸ್​ಎಸ್​ಗೆ ನೂರು ವರ್ಷ ಪೂರ್ಣವಾಗುತ್ತಿದೆ. ಮುಂದಿನ ಮೂರು ವರ್ಷದಲ್ಲಿ ಊರು ಹಳ್ಳಿ ಮನೆಗೆ ಸಂಘ ತಲುಪುತ್ತದೆ. ಹಿಂದೂ ಜಾಗರಣ ವೇದಿಕೆ ಶಸ್ತ್ರಾಸ್ತ್ರ ಮೂಲಕ ಮನೆಗಳನ್ನು ತಲುಪುತ್ತದೆ. ಪ್ರತಿ ಹಿಂದುಗಳ ಮನೆಯಲ್ಲಿ ಆಯುಧ ಪೂಜೆ ಆಗಬೇಕು. ಆಯುಧ ಪೂಜೆಗೆ ಹಳೆ ಸೈಕಲ್ ಗ್ರೈಂಡರ್ ಗೆ ಪೂಜೆ ಮಾಡಬೇಡಿ. ಹಳೇ ಮಿಕ್ಸಿ, ಕುಕ್ಕರ್​ಗೆ ಆಯುಧ ಪೂಜೆ ಮಾಡಬೇಡಿ. ಶಸ್ತ್ರ ಪೂಜೆಯ ಜೊತೆ ಶಸ್ತ್ರ ಬಳಸುವ ಮನೋಸ್ಥೈರ್ಯ ಮುಂದೆ ಬೆಳೆಸೋಣ. ಶಸ್ತ್ರ ಇಡುವ, ಹಿಡಿಯುವ ಸ್ಥೈರ್ಯ ಹಿಂದೂ ಸಮಾಜ ಬೆಳೆಸಬೇಕು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.