ಚಿಕ್ಕೋಡಿ: ಮದುವೆ ಸಮಾರಂಭದಲ್ಲಿ ಮಾಜಿ ಸೈನಿಕನ ಹುಚ್ಚಾಟ ಕಂಡು ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದವರು ದಂಗಾಗಿದ್ದಾರೆ. ಮದುವೆ ಸಮಾರಂಭದಲ್ಲಿ ಮಾಜಿ ಯೋಧ ಒಬ್ಬರು ಬಂದೂಕಿನಿಂದ ಗಾಳಿಯಲ್ಲಿ ಗುಂಡಿನ ಸುರಿಮಳೆಗೈದಿದ್ದಾರೆ. ಗುಂಡು ಹಾರಿಸಿರುವ ಮಾಜಿ ಯೋಧನ ವಿಡಿಯೋ ವೈರಲ್ ಆಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಆಯೋಜಿಸಿದ್ದ ಮದುವೆ ಸಮಾರಂಭದಲ್ಲಿ ಘಟನೆ ನಡೆದಿದೆ. ರಫಿಕ್ ಅಹಮ್ಮದ ತಹಶೀಲ್ದಾರ ಎಂಬ ಮಾಜಿ ಯೋಧನಿಂದ ಗುಂಡಿನ ಸುರಿಮಳೆ ಕೃತ್ಯ ನಡೆದಿದೆ. ತನ್ನ 9.62 mmನ ಲೈಸೆನ್ಸ್ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಮದುವೆ ಸಮಾರಂಭದ ಖುಷಿಯಲ್ಲಿ 5 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ. ಮಾಜಿ ಸೈನಿಕನ ಹುಚ್ಚಾಟದಿಂದ ಮದುವೆಗೆ ಆಗಮಿಸಿದ್ದ ಸಂಬಂಧಿಗಳು ದಂಗಾಗಿದ್ದಾರೆ. ವಿಷಯ ತಿಳಿದ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಜಿ ಸೈನಿಕನ ವಿರುದ್ದ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬಾಗಲಕೋಟೆ: ನಕಲಿ ಅಂಕಪಟ್ಟಿ ನೀಡಿ ಉದ್ಯೋಗ ಪಡೆಯಲು ಯತ್ನ
ನಕಲಿ ಅಂಕಪಟ್ಟಿ ನೀಡಿ ಉದ್ಯೋಗ ಪಡೆಯಲು ಯತ್ನ ಆರೋಪ ಕೇಳಿಬಂದಿದೆ. ಪ್ರಥಮ ದರ್ಜೆ ಹುದ್ದೆ ಪಡೆಯಲು ಯತ್ನ ಆರೋಪ ಕೇಳಿಬಂದಿದ್ದು ಸಿದ್ದಲಿಂಗೇಶ ಗಂಗಾಧರ ಬುದ್ನಿ ವಿರುದ್ಧ ದೂರು ದಾಖಲು ಮಾಡಲಾಗಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರವಾಸೋದ್ಯಮ ಇಲಾಖೆ ಡಿಡಿ ವಿಷ್ಣುವರ್ಧನ ರೆಡ್ಡಿ ದೂರು ನೀಡಿದ್ದಾರೆ. ಸೇವೆಯಲ್ಲಿರುವಾಗಲೇ ನೌಕರ ಗಂಗಾಧರ ಬುದ್ನಿ ನಿಧನ ಹೊಂದಿದ್ದರು. ಅನುಕಂಪದ ಅಧಾರದ ಮೇಲೆ ಕೆಲಸ ನೀಡಲು ಪ್ರಸ್ತಾವನೆ ಮಾಡಲಾಗಿತ್ತು. ಮೊದಲು ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಪ್ರಸ್ತಾವನೆ ಮಾಡಲಾಗಿತ್ತು. ಸಿದ್ದಲಿಂಗೇಶ ಗಂಗಾಧರ ಬುದ್ನಿ ದಾಖಲೆಗಳೊಂದಿಗೆ ಮನವಿ ಮಾಡಿದ್ದರು. ಬಾಗಲಕೋಟೆ ಉಪನಿರ್ದೇಶಕರ ಕಚೇರಿಗೆ ದಾಖಲೆ ಸಲ್ಲಿಸಿದ್ದರು. ಆನಂತರ ಪದವಿ ಪ್ರಮಾಣ ಪತ್ರ ನೀಡಿದ್ದ ಸಿದ್ದಲಿಂಗೇಶ ಬುದ್ನಿ, ಪ್ರಥಮ ದರ್ಜೆ ಹುದ್ದೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದ. ದಾಖಲಾತಿ ಪರಿಶೀಲನೆ ವೇಳೆ ನಕಲಿ ಅಂಕಪಟ್ಟಿ ನೀಡಿಕೆ ಪತ್ತೆ ಆಗಿದೆ. ಇಲಾಖೆಗೆ ವಂಚಿಸಿರುವ ಆರೋಪದಡಿ ಕಾನೂನು ಕ್ರಮಕ್ಕೆ ದೂರು ನೀಡಲಾಗಿದೆ.
ಬೆಸ್ಕಾಂ ಇಇ ಲಕ್ಷ್ಮೀಶ್ ಎಸಿಬಿ ಬಲೆಗೆ; ಎಸಿಬಿ ಶೋಧಕಾರ್ಯ
ಬೆಸ್ಕಾಂ ಇಇ ಲಕ್ಷ್ಮೀಶ್ ಎಸಿಬಿ ಬಲೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೆಸ್ಕಾಂ EE ಲಕ್ಷ್ಮೀಶ್ ಫ್ಲ್ಯಾಟ್ನಲ್ಲಿ ಎಸಿಬಿಯಿಂದ ಶೋಧಕಾರ್ಯ ನಡೆಸಲಾಗಿದೆ. ಬಿನ್ನಿಮಿಲ್ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್ ಒಂದರಲ್ಲಿ ದಾಳಿ ನಡೆಸಿದ ಎಸಿಬಿ ದಾಖಲೆ ಪರಿಶೀಲನೆ ನಡೆಸುತ್ತಿದೆ. ಸದ್ಯ ಇಇ ಲಕ್ಷ್ಮೀಶ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದ ಲಕ್ಷ್ಮೀಶ, ಜೈಲಿನಲ್ಲಿದ್ದಾರೆ. ಬೆಂಗಳೂರು ಉತ್ತರ ವಲಯ ಬೆಸ್ಕಾಂ ಇಇ ಲಕ್ಷ್ಮೀಶ್ ಹಣ ಸ್ವೀಕರಿಸುವಾಗ ಬಂಧಿಸಲಾಗಿತ್ತು.
ಇದನ್ನೂ ಓದಿ: Crime News: ಕೋಕಾ ಪ್ರಕರಣ; ಭೂಗತ ಪಾತಕಿ ಬನ್ನಂಜೆ ರಾಜಾ ಭವಿಷ್ಯ ಇಂದು ನಿರ್ಧಾರ
ಇದನ್ನೂ ಓದಿ: ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಪ್ರಭಾಕರ್ ಭಟ್ ಅತಿಥಿ: CFI ಪ್ರತಿಭಟನೆ, ಇಬ್ಬರು ಪೊಲೀಸರ ವಶಕ್ಕೆ
Published On - 11:44 am, Wed, 30 March 22