ಬೆಳಗಾವಿ ನಗರದಲ್ಲಿ ನೀರಿಗಾಗಿ ಹಾಹಾಕಾರ! ಅಧಿಕಾರಿಗಳ ವಿರುದ್ಧ ಜನರ ಹಿಡಿಶಾಪ
ಬೆಳಗಾವಿ ನಗರಕ್ಕೆ ಎರಡು ಡ್ಯಾಂಗಳಿಂದ ನೀರು ಸಪ್ಲೈ ಆಗುತ್ತದೆ. ಬರ ಬಂದರೂ ಮೂರು ವರ್ಷ ಸಾಕಾಗುವಷ್ಟು ನೀರು ಡ್ಯಾಂಗಳಲ್ಲಿ ಇರುತ್ತದೆ. ರಕ್ಕಸಕ್ಕೊಪ್ಪ ಡ್ಯಾಂ ಮತ್ತು ಹಿಡಕಲ್ ಡ್ಯಾಂ ನಿಂದ ನೀರು ಸಪ್ಲೈ ಆಗುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ಇಲ್ಲಿ ನೀರಿದೆ.
ಬೆಳಗಾವಿ: ರಾಜ್ಯದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಗರಗಳ ಪೈಕಿ ಬೆಳಗಾವಿ (Belagavi) ಕೂಡ ಒಂದು. ಸುಮಾರು ಹದಿನೈದು ಲಕ್ಷ ಜನರು ನಗರದಲ್ಲಿ ವಾಸ ಮಾಡುತ್ತಿದ್ದು, ಮೂಲಭೂತ ಸೌಕರ್ಯಗಳು ಸೇರಿದಂತೆ ಎಲ್ಲವೂ ಇಲ್ಲಿನ ಜನರಿಗೆ ಸರ್ಕಾರ ನೀಡುತ್ತಿದೆ. ಚಳಿಗಾಲ ಅಧಿವೇಶನ (Winter Session) ಕೂಡ ಇಲ್ಲಿ ನಡೆಯುವ ಕಾರಣಕ್ಕೆ ಅಭಿವೃದ್ಧಿ ವಿಚಾರಕ್ಕೆ ಇನ್ನಷ್ಟು ಒತ್ತು ಮಾತ್ರ ಸಿಗುತ್ತಿದೆ. ಆದರೆ ಸ್ಮಾರ್ಟ್ ಸಿಟಿ ಕುಂದಾನಗರಿ ಬೆಳಗಾವಿಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅರೇ ಬೇಸಿಗೆ ಕಾರಣ ಡ್ಯಾಂಗಳಲ್ಲಿ ನೀರು ಕಡಿಮೆಯಾಗಿ ಈ ಪರಿಸ್ಥಿತಿ ನಿರ್ಮಾಣ ಆಗಿಲ್ಲ. ಬದಲಿಗೆ ಅಧಿಕಾರಿಗಳು, ಪಾಲಿಕೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಜನ ನೀರಿಗಾಗಿ ಪರದಾಟ ನಡೆಸುವಂತಾಗಿದೆ.
ಹತ್ತು ದಿನಕ್ಕೊಮ್ಮೆ ನೀರು; ಜನ ಕಂಗಾಲು: ಬೆಳಗಾವಿ ನಗರಕ್ಕೆ ಎರಡು ಡ್ಯಾಂಗಳಿಂದ ನೀರು ಸಪ್ಲೈ ಆಗುತ್ತದೆ. ಬರ ಬಂದರೂ ಮೂರು ವರ್ಷ ಸಾಕಾಗುವಷ್ಟು ನೀರು ಡ್ಯಾಂಗಳಲ್ಲಿ ಇರುತ್ತದೆ. ರಕ್ಕಸಕ್ಕೊಪ್ಪ ಡ್ಯಾಂ ಮತ್ತು ಹಿಡಕಲ್ ಡ್ಯಾಂ ನಿಂದ ನೀರು ಸಪ್ಲೈ ಆಗುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ಇಲ್ಲಿ ನೀರಿದೆ. ಆದರೆ ಪೈಪ್ ಲೈನ್ ವ್ಯವಸ್ಥೆ ಹಾಳಾಗಿ ಈ ರೀತಿ ಸ್ಥಿತಿ ಎದುರಾಗಿದೆ. ಇದರಿಂದ ಬೆಳಗಾವಿ ನಗರದ ಬಹುತೇಕ ವಾರ್ಡ್ಗಳಲ್ಲಿ ಹತ್ತು ದಿನಕ್ಕೊಮ್ಮೆ ನೀರು ಬರುತ್ತಿದೆ. ಈ ಕಾರಣಕ್ಕೆ ನಗರದ ಜನ ಕಂಗಾಲಾಗಿದ್ದು, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಕಳೆದ ಹತ್ತು ದಿನಗಳಿಂದ ಈ ಸಮಸ್ಯೆ ಎದುರಾಗಿದ್ದು, ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಸ್ಪಂದನೆ ಮಾತ್ರ ಸಿಗುತ್ತಿಲ್ಲ. ಕೆಲವರು ಹಣ ಕೊಟ್ಟು ಟ್ಯಾಂಕರ್ನಲ್ಲಿ ನೀರು ಬಿಡಿಸಿಕೊಂಡರೆ ಬಡ ವರ್ಗದ ಜನರು ನೀರು ಬರುವವರೆಗೂ ಜಾತಕ ಪಕ್ಷಿಯಂತೆ ಕಾಯಬೇಕಾಗಿದೆ. ಹತ್ತು ದಿನಕ್ಕೊಮ್ಮೆ ನೀರು ಬಂದರೂ ಅದು ಕೂಡ ಕಲುಷಿತವಾಗಿರುತ್ತದೆ. ಅನಿವಾರ್ಯವಾಗಿ ಆ ನೀರನ್ನೆ ಕಾಯಿಸಿ ಕುಡಿಯವೇಕಾಗಿದೆ ಅಂತ ಜನರು ಆಕ್ರೋಶ ಹೊರಹಾಕಿದ್ದಾರೆ.
ನೀರು ಪೂರೈಕೆ ಮಾಡದಿದ್ದರೆ ಮರಕ್ಕೆ ಕಟ್ಟಿ ಬಡೆಯುತ್ತೇನೆ- ಶಾಸಕ ಅನಿಲ್ ಬೆನಕೆ: ನೀರಿನ ಸಮಸ್ಯೆ ಕುರಿತು ಎಚ್ಚೆತ್ತುಕೊಂಡಿರುವ ಶಾಸಕ ಅನಿಲ್ ಬೆನಕೆ, ಇಂದು ಅಧಿಕಾರಿಗಳ ಜತೆಗೆ ಮಹಾನಗರ ಪಾಲಿಕೆಯಲ್ಲಿ ಸಭೆ ನಡೆಸಿದರು. ನೀರು ಪೂರೈಕೆ ಮಾಡುವ ಎಲ್ ಆ್ಯಂಡ್ ಟಿ ಕಂಪನಿಯ ಅಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಸಿಬ್ಬಂದಿಗಳು ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳು ಕೆಲವು ಕಡೆ ಪೈಪ್ ಲೈನ್ ಸಮಸ್ಯೆ ಆಗಿದ್ದು, ತಡವಾಗಿ ನೀರು ಪೂರೈಕೆ ಆಗುತ್ತಿದೆ. ಕೆಲವು ಕಡೆ ಹೆಸ್ಕಾಂನಿಂದ ಸಮಸ್ಯೆಯಾಗುತ್ತಿದೆ. ಹೀಗಾಗಿ ಸರಿಯಾಗಿ ನೀರು ಪೂರೈಕೆ ಮಾಡಲು ಆಗುತ್ತಿಲ್ಲ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಶಾಸಕ ಅನಿಲ್ ಬೆನಕೆ ವಾರದಲ್ಲಿ ಎಲ್ಲ ಸಮಸ್ಯೆ ಬಗೆ ಹರಿಸಿ ಮೊದಲಿನಂತೆ ನೀರು ಪೂರೈಕೆ ಮಾಡಿ ಇಲ್ಲವಾದ್ದರೆ ಮರಕ್ಕೆ ಕಟ್ಟಿ ನಿಮ್ಮನ್ನ ಬಡಿಯುತ್ತೇನೆ ಎಂದು ಗದರಿದ್ದಾರೆ.
ಮಹಾನಗರ ಪಾಲಿಕೆಯಿಂದ ಟ್ಯಾಂಕರ್ ಮೂಲಕ ನೀರು ಸಪ್ಲೈ: ಹತ್ತು ದಿನಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿರುವ ಬಡಾವಣೆ ಜನರ ಗೋಳು ಕೇಳದ ಪಾಲಿಕೆ ಅಧಿಕಾರಿಗಳು ಇದೀಗ ಶಾಸಕ ಅನಿಲ್ ಬೆನಕೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದಾರೆ. ಪ್ರತಿ ವಾರ್ಡ್ಗೂ ನೀರಿನ ಟ್ಯಾಂಕರ್ ಮೂಲಕ ನೀರು ಸಪ್ಲೈ ಮಾಡುವ ಕೆಲಸ ಮಾಡುತ್ತಿದ್ದಾರೆ.
ವರದಿ: ಸಹದೇವ ಮಾನೆ
ಇದನ್ನೂ ಓದಿ
ವಿಧಾನಸಭೆ: ಶಾಂತಿಯ ತೋಟವನ್ನು ಹಾಳು ಮಾಡಬೇಡಿ, ಕನ್ನಡಿಗರೇ ದಾರಿ ತಪ್ಪಬೇಡಿ: ಹೆಚ್ಡಿ ಕುಮಾರಸ್ವಾಮಿ ಮನವಿ