ನಾಲ್ವರು ಮಕ್ಕಳಿಗೆ ವಿಷವುಣಿಸಿ ತಂದೆ ಆತ್ಮಹತ್ಯೆ; ಬೆಳಗಾವಿಯಲ್ಲಿ ಹೃದಯ ವಿದ್ರಾವಕ ಘಟನೆ
Belagavi News: ಬೋರಗಲ್ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಜುಲೈ 6 ರಂದು ಗೋಪಾಲ್ ಪತ್ನಿ ಜಯಾ ಬ್ಲಾಕ್ ಫಂಗಸ್ ಗೆ ಬಲಿಯಾಗಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿದ್ದಾರೆ.
ಬೆಳಗಾವಿ: ನಾಲ್ವರು ಮಕ್ಕಳಿಗೆ ವಿಷವುಣಿಸಿ ತಂದೆ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬೆಳಗಾವಿ ತಾಲೂಕಿನ ಬೋರಗಲ್ ಗ್ರಾಮದಲ್ಲಿ ನಡೆದಿದೆ. ಮಕ್ಕಳಾದ ಸೌಮ್ಯಾ ಹಾದಿಮನಿ (19), ಶ್ವೇತಾಹಾದಿಮನಿ (16), ಸಾಕ್ಷಿ ಹಾದಿಮನಿ (11), ಸೃಜನ ಹಾದಿಮನಿಗೆ (8) ವಿಷವುಣಿಸಿ ತಂದೆ ಗೋಪಾಲ ಹಾದಿಮನಿ(46) ಆತ್ಮಹತ್ಯೆಗೆ ಸಾವನ್ನಪ್ಪಿದ್ದಾರೆ. ಬ್ಲಾಕ್ ಫಂಗಸ್ನಿಂದ ಪತ್ನಿ ಸಾವನ್ನಪ್ಪಿದ್ದರು. ಇದರಿಂದ ಮನನೊಂದು ನಾಲ್ವರ ಮಕ್ಕಳ ಜತೆ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬೋರಗಲ್ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಜುಲೈ 6 ರಂದು ಗೋಪಾಲ್ ಪತ್ನಿ ಜಯಾ ಬ್ಲಾಕ್ ಫಂಗಸ್ ಗೆ ಬಲಿಯಾಗಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಒಂದೇ ಕುಟುಂಬದ ಐದು ಜನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಲಭ್ಯವಾಗಿದೆ. ನೀರಿನಲ್ಲಿ ಬೆರಸಿ ವಿಷ ಸೇವಿಸಿದ ಐದು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿಯೇ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಪೊಲೀಸರು, ವಿಷದ ಬಾಟಲಿಗಾಗಿ ಶೋಧ ನಡೆಸುತ್ತಿದ್ದಾರೆ. ಮೃತ ದುರ್ದೈವಿ ಗೋಪಾಲ್ ಹಾದಿಮನಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು ಎಂದು ಹೇಳಲಾಗಿದೆ. ಇಬ್ಬರು ಮಕ್ಕಳು ಸಂಕೇಶ್ವರ ಪಟ್ಟಣದಲ್ಲಿರುವ ಕಾಲೇಜಿಗೆ ಹೋಗುತ್ತಿದ್ದರು. ಇನ್ನೂಳಿದ ಇಬ್ಬರು ಮಕ್ಕಳು ಗ್ರಾಮದಲ್ಲೇ ಶಾಲೆಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.
ಡೆತ್‌ನೋಟ್ ಪತ್ತೆ ನಾಲ್ವರು ಮಕ್ಕಳಿಗೆ ವಿಷವುಣಿಸಿ ತಂದೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಡೆತ್ ನೋಟ್ ಪತ್ತೆಯಾಗಿದೆ. ಡೆತ್‌ನೋಟ್ ಜತೆ 20 ಸಾವಿರ ಹಣ ಕೂಡ ದೊರಕಿದೆ. 20 ಸಾವಿರ ಹಣವನ್ನು ಅಂತ್ಯಕ್ರಿಯೆಗೆ ಬಳಸುವಂತೆ ಡೆತ್ ನೋಟ್ನಲ್ಲಿ ಮನವಿ ಮಾಡಲಾಗಿದೆ. ಅಂತ್ಯಕ್ರಿಯೆ ಮಾಡಿದವರಿಗೆ ಧನ್ಯವಾದ ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಹೆಂಡತಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಆತ್ಮಹತ್ಯೆಗೆ ಶರಣು!
ಇದನ್ನೂ ಓದಿ: ಪ್ರೇಮ ವೈಫಲ್ಯ: ಮಧ್ಯ ಪ್ರದೇಶದಲ್ಲಿ ಉದ್ಯೋಗದಲ್ಲಿದ್ದ ಕೊಡಗು ಮೂಲದ ಯುವಕ ಆತ್ಮಹತ್ಯೆ
Published On - 2:18 pm, Sat, 23 October 21