ಕಾರ್ಮಿಕ ಇಲಾಖೆ ಫುಡ್ ಕಿಟ್ ವಿತರಣೆಯಲ್ಲಿ ಅವ್ಯವಹಾರ, ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್

ಅವಧಿ ಮುಗಿದ ಫುಡ್ ಕಿಟ್ ವಿತರಣೆ ಪ್ರಶ್ನಿಸಿದ್ದಕ್ಕೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತೆ ಸರಳಾ ಸಾತಪೂತೆ ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಲು ಹೋದಾಗ ‘ಕೈ’ ಮುಖಂಡರು ಮತ್ತು ಪೊಲೀಸರ ಮಧ್ಯೆ ವಾಗ್ವಾದವಾಗಿದೆ.

ಕಾರ್ಮಿಕ ಇಲಾಖೆ ಫುಡ್ ಕಿಟ್ ವಿತರಣೆಯಲ್ಲಿ ಅವ್ಯವಹಾರ, ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್
ದೂರು ನೀಡಲು ಹೋದಾಗ ‘ಕೈ’ ಮುಖಂಡರು ಮತ್ತು ಪೊಲೀಸರ ಮಧ್ಯೆ ವಾಗ್ವಾದ
Updated By: ಆಯೇಷಾ ಬಾನು

Updated on: Sep 21, 2021 | 10:59 AM

ಬೆಳಗಾವಿ: ಕಾರ್ಮಿಕ ಇಲಾಖೆ ಫುಡ್ ಕಿಟ್ ಅಕ್ರಮ ದಾಸ್ತಾನು ಆರೋಪ ಕೇಳಿ ಬಂದಿದೆ. ಫುಡ್ ಕಿಟ್ಗಳನ್ನು ಹಳೆ ಬೆಳಗಾವಿಯ ಸಾಯಿ ಭವನದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗುತ್ತಿದ್ದು ಲಾಕ್‌ಡೌನ್ ವೇಳೆ ಕಾರ್ಮಿಕರಿಗೆ ನೀಡಬೇಕಿದ್ದ ಫುಡ್ ಕಿಟ್ಗಳನ್ನು ಬಿಜೆಪಿ ಕಾರ್ಯಕರ್ತರ ಮನೆಗೆ ರವಾನೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಅವಧಿ ಮುಗಿದ ಫುಡ್ ಕಿಟ್ ವಿತರಣೆ ಪ್ರಶ್ನಿಸಿದ್ದಕ್ಕೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತೆ ಸರಳಾ ಸಾತಪೂತೆ ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಲು ಹೋದಾಗ ‘ಕೈ’ ಮುಖಂಡರು ಮತ್ತು ಪೊಲೀಸರ ಮಧ್ಯೆ ವಾಗ್ವಾದವಾಗಿದೆ. ಪೊಲೀಸರು ರಾಜಿಸಂಧಾನ ಮಾಡಿಸಲು‌ ಯತ್ನಿಸಿದ್ದಾರೆ. ಇದಕ್ಕೆ ಒಪ್ಪದ ಮುಖಂಡರು ವಾಗ್ವಾದ ನಡೆಸಿದ್ದಾರೆ. ಸದ್ಯ ‘ಕೈ’ ಕಾರ್ಯಕರ್ತೆ ದೂರಿನ ಮೇರೆಗೆ ಬಿಜೆಪಿ ಕಾರ್ಯಕರ್ತರ ವಿರುದ್ಧ ಶಹಾಪುರ ಠಾಣೆಯಲ್ಲಿ FIR ದಾಖಲಾಗಿದೆ.

ಕಾರ್ಮಿಕ ಇಲಾಖೆ ಫುಡ್ ಕಿಟ್ ವಿತರಣೆಯಲ್ಲಿ ಅವ್ಯವಹಾರಕ್ಕೆ ಸಂಬಂಧಿಸಿ ಸರ್ಕಾರದ ವಿರುದ್ಧ ಬಿ.ಕೆ.ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ. ಕೊರೊನಾ ವೇಳೆ ಸರ್ಕಾರ ಫುಡ್ ಕಿಟ್ ವಿತರಿಸಬೇಕಾಗಿತ್ತು. ಜನಸಾಮಾನ್ಯರ ಹಣದಿಂದ ಕಿಟ್ ಖರೀದಿಸಿ ವಿತರಿಸಲಾಗಿದೆ. ಫುಡ್ ಕಿಟ್ ದಾಸ್ತಾನು ಮಾಡಿದ ಹಿನ್ನೆಲೆ ಕೆಟ್ಟು ಹೋಗಿದೆ. ಈಗ ರಾಜಕೀಯ ಲಾಭಕ್ಕೆ ಕಿಟ್ ವಿತರಣೆ ಮಾಡಲಾಗುತ್ತಿದೆ. ಬಿಜೆಪಿ ಗೂಂಡಾಗಿರಿ ಮುಂದುವರಿಸಿದ್ರೆ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ ಎಂದು ಬೆಳಗಾವಿಯಲ್ಲಿ ಕಾಂಗ್ರೆಸ್ MLC ಬಿ‌.ಕೆ.ಹರಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Actor Satish Ninasam Help : ದಿನಕ್ಕೆ ಸಾವಿರ ಫುಡ್ ಕಿಟ್ ವಿತರಣೆ ಮಾಡ್ತಿರುವ ನಟ ಸತೀಶ್ ನೀನಾಸಂ!