AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರ ಲಾರಿಗಳ ಮೇಲೆ ಕರವೇ ಕಲ್ಲು ತೂರಾಟ: ನಾರಾಯಣಗೌಡ ಬಣದ ಕಾರ್ಯಕರ್ತರ ವಿರುದ್ಧ FIR

ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರ ವಿರುದ್ಧ ಬೆಳಗಾವಿ ತಾಲೂಕಿನ ‌ಹಿರೇಬಾಗೇವಾಡಿ ಠಾಣೆಯಲ್ಲಿ FIR ದಾಖಲಾಗಿದೆ.

ಮಹಾರಾಷ್ಟ್ರ ಲಾರಿಗಳ ಮೇಲೆ ಕರವೇ ಕಲ್ಲು ತೂರಾಟ: ನಾರಾಯಣಗೌಡ ಬಣದ ಕಾರ್ಯಕರ್ತರ ವಿರುದ್ಧ FIR
ಕರವೇ ಪ್ರತಿಭಟನೆ
TV9 Web
| Updated By: ಆಯೇಷಾ ಬಾನು|

Updated on:Dec 07, 2022 | 8:02 AM

Share

ಬೆಳಗಾವಿ: ಮಹಾರಾಷ್ಟ್ರ ಲಾರಿಗಳ ಮೇಲೆ ಕರವೇ ಕಾರ್ಯಕರ್ತರು ಕಲ್ಲು ತೂರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರ ವಿರುದ್ಧ ಬೆಳಗಾವಿ ತಾಲೂಕಿನ ‌ಹಿರೇಬಾಗೇವಾಡಿ ಠಾಣೆಯಲ್ಲಿ FIR ದಾಖಲಾಗಿದೆ. 8 ರಿಂದ 12 ಕರವೇ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ನಿನ್ನೆ ಬೆಳಗಾವಿ ಪ್ರವೇಶಕ್ಕೆ ಅವಕಾಶ ನೀಡದಿದ್ದಕ್ಕೆ ಕರವೇ ಆಕ್ರೋಶ ವ್ಯಕ್ತಪಡಿಸಿತ್ತು. ಹಿರೇಬಾಗೇವಾಡಿ ಟೋಲ್‌ಗೇಟ್ ಬಳಿ ಕಲ್ಲು ತೋರಾಟ ನಡೆಸಲಾಗಿತ್ತು. ಮಹಾರಾಷ್ಟ್ರ ನೋಂದಣಿಯ ಲಾರಿಯ ಮೇಲೆ ಕಲ್ಲು ತೂರಿ ಗಾಜು ಪುಡಿ ಪುಡಿ ಮಾಡಲಾಗಿತ್ತು. ಕೆಲವು ವಾಹನಗಳ ನಂಬರ್ ಪ್ಲೇಟ್ ಕಿತ್ತು, ಮಸಿ ಬಳಿದು ಗುಂಪು ಕಟ್ಟಿಕೊಂಡು ಗಲಾಟೆ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಕೃತ್ಯ ಎಸಗಿ ತಕ್ಷಣವೇ ಗುಂಪಿನಲ್ಲಿ ಓಡಿ ಹೋಗಿದಕ್ಕೆ ಗುರುತು ಪತ್ತೆಯಾಗದೆ ಬಂಧನ ಸಾಧ್ಯವಾಗಿಲ್ಲ. ಆದ್ರೆ ಐಪಿಸಿ ಸೆಕ್ಷನ್ 143, 147, 341, 427, 149 ಅಡಿ 12 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಹಿರೇಬಾಗೇವಾಡಿ ಠಾಣೆಯಲ್ಲಿ ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಬಂದೇ ಬರುವೆ ಬೆಳಗಾವಿಗೆ ಎಂದ ಮಹಾ ಸಚಿವ ದೇಸಾಯಿ: ರೊಚ್ಚಿಗೆದ್ದ ಕನ್ನಡಿಗರಿಂದ ಮಹಾರಾಷ್ಟ್ರ ಲಾರಿಗಳು ಗ್ಲಾಸ್​ ಪೀಸ್​, ಪೀಸ್

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಂದು ಕರವೇ ಪ್ರತಿಭಟನೆ

ಪದೇಪದೆ ಗಡಿ ಬಗ್ಗೆ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ವಿರುದ್ಧ ಕರವೇ ಆಕ್ರೋಶಗೊಂಡಿದೆ. ಗಡಿ, ಭಾಷೆ ವಿಚಾರದಲ್ಲಿ ಕನ್ನಡಿಗರನ್ನು ಕೆಣಕುತ್ತಿರುವ ಎಂಇಎಸ್​​, ಮಹಾರಾಷ್ಟ್ರ ರಾಜಕಾರಣಿಗಳ ನಡೆ ಖಂಡಿಸಿ ಇಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಬಣದಿಂದ ಪ್ರತಿಭಟನೆ ನಡೆಯಲಿದೆ.

ಇದನ್ನೂ ಓದಿ: ಸಿದ್ರಾಮುಲ್ಲಾಖಾನ್​ ಎಂದ ಬಿಜೆಪಿಗೆ ಟಾಂಗ್: ಮಹಮದ್ ಗಡ್ಕರಿ ಶೇಕ್, ಬೊಮ್ಮಾಯುಲ್ಲಾ ಖಾನ್; ನಿಮ್ಮ ಹಲವು ನಾಯಕರಿಗೆ ​​ಈ ಹೆಸರಿಂದ ಕರೆಯಬಹುದಾ?

ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ರಾಜ್ಯ ಸರ್ಕಾರ ಬೆಂಬಲ ನೀಡುತ್ತಿಲ್ಲ

ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ರಾಜ್ಯ ಸರ್ಕಾರ ಬೆಂಬಲ ಸೂಚಿಸುತ್ತಿಲ್ಲ. ಕರ್ನಾಟಕದಲ್ಲಿರುವ ಮಹಾರಾಷ್ಟ್ರಿಗರ ಬೆಂಬಲಕ್ಕೆ ಮಹಾರಾಷ್ಟ್ರ ಸಚಿವರು ಬರ್ತಾರೆ. ಆದ್ರೆ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಬೆಂಬಲಕ್ಕೆ ಯಾವ ಸಚಿವರು ಬರ್ತಿಲ್ಲಾ. ಯಾವೊಬ್ಪ ಸಚಿವರು ತಮ್ಮ ಹೋರಾಟಕ್ಕೆ ಸ್ಪಂಧಿಸುತ್ತಿಲ್ಲಾ ಅಂತ ರಾಜ್ಯ ಸರ್ಕಾರದ ಧೋರಣೆಗೆ ಕನ್ನಡಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನ ಅನೇಕ ಕನ್ನಡಿಗ ಭಾಷಿಕ ಗ್ರಾಮದ ಜನರ ಬೇಸರ ಇದು. ಹನ್ನೊಂದು ಗ್ರಾಮ ಪಂಚಾಯತ್​ಗಳು ತಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಅಂತ ಠರಾವು ಪಾಸು ಮಾಡಿದ್ದವು. ಆದ್ರು ಕನ್ನಡಿಗರ ಬೆಂಬಲಕ್ಕೆ ರಾಜ್ಯ ಸರ್ಕಾರ ನಿಂತಿಲ್ಲ. ಹೀಗಾಗಿ ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಬೇಸರ ಹೊರ ಹಾಕಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:01 am, Wed, 7 December 22