AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ರಾಮುಲ್ಲಾಖಾನ್​ ಎಂದ ಬಿಜೆಪಿಗೆ ಟಾಂಗ್: ಮಹಮದ್ ಗಡ್ಕರಿ ಶೇಕ್, ಬೊಮ್ಮಾಯುಲ್ಲಾ ಖಾನ್; ನಿಮ್ಮ ಹಲವು ನಾಯಕರಿಗೆ ​​ಈ ಹೆಸರಿಂದ ಕರೆಯಬಹುದಾ?

ಸಿದ್ರಾಮುಲ್ಲಾಖಾನ್ ಎನ್ನುತ್ತಿರುವ ಬಗ್ಗೆ ಕೆಪಿಸಿಸಿ ಟಾಂಗ್ ಕೊಟ್ಟಿದ್ದು ಇವರಿಗೆ "ಜಬ್ಬಾರ್ ಖಾನ್" "ಅಶ್ವಾಖ್ ಇನಾಯತ್ ಖಾನ್" ಎಂದು ಹೆಸರಿಡುತ್ತೀರಾ ಎಂದು ಸಿ.ಟಿ. ರವಿ ಹೆಸರು ಉಲ್ಲೇಖಿಸಿದೆ.

ಸಿದ್ರಾಮುಲ್ಲಾಖಾನ್​ ಎಂದ ಬಿಜೆಪಿಗೆ ಟಾಂಗ್: ಮಹಮದ್ ಗಡ್ಕರಿ ಶೇಕ್, ಬೊಮ್ಮಾಯುಲ್ಲಾ ಖಾನ್; ನಿಮ್ಮ ಹಲವು ನಾಯಕರಿಗೆ ​​ಈ ಹೆಸರಿಂದ ಕರೆಯಬಹುದಾ?
ಸಿಎಂ ಬೊಮ್ಮಾಯಿ
TV9 Web
| Edited By: |

Updated on:Dec 07, 2022 | 7:27 AM

Share

ಬೆಂಗಳೂರು: ಬಿಜೆಪಿ(BJP) ನಾಯಕರ ವಿರುದ್ಧ ಕೆಪಿಸಿಸಿ(KPCC) ಟ್ವೀಟ್ ವಾರ್ ಮುಂದುವರೆದಿದೆ. ಟ್ವೀಟ್​ ಮೂಲಕ ಸಿದ್ರಾಮುಲ್ಲಾಖಾನ್​ ಎಂದ ಬಿಜೆಪಿಗೆ ಕೆಪಿಸಿಸಿ ತಿರುಗೇಟು ನೀಡಿದೆ. ನಿಮ್ಮ ಹಲವು ನಾಯಕರಿಗೆ ​​ಈ ಹೆಸರಿಂದ ಕರೆಯಬಹುದಾ? ಇವರಿಗೆ ಜಬ್ಬಾರ್​ ಖಾನ್​ ಎಂದು ಹೆಸರು ಇಡಬಹುದಾ? ಅಶ್ವಾಖ್​​ ಇನಾಯತ್ ಖಾನ್ ಎಂದು ಕರೆಯಬಹುದೇ?​ ಇವರಿಗೆ ಮಹಮದ್ ಗಡ್ಕರಿ ಶೇಕ್ ಎಂದು ಹೆಸರಿಡುವಿರಾ? ಎಂದು ಟ್ವೀಟ್​ ಮೂಲಕ ಬಿಜೆಪಿ ನಾಯಕರಿಗೆ ಕೆಪಿಸಿಸಿ ತಿರುಗೇಟು ನೀಡಿದೆ.

ಸಿದ್ರಾಮುಲ್ಲಾಖಾನ್ ಎನ್ನುತ್ತಿರುವ ಬಗ್ಗೆ ಕೆಪಿಸಿಸಿ ಟಾಂಗ್ ಕೊಟ್ಟಿದ್ದು ಇವರಿಗೆ “ಜಬ್ಬಾರ್ ಖಾನ್” “ಅಶ್ವಾಖ್ ಇನಾಯತ್ ಖಾನ್” ಎಂದು ಹೆಸರಿಡುತ್ತೀರಾ ಎಂದು ಸಿ.ಟಿ. ರವಿ ಹೆಸರು ಉಲ್ಲೇಖಿಸಿದೆ. ಇವರಿಗೆ ಮಹಮದ್ ಗಡ್ಕರಿ ಶೇಕ್ ಎಂದು ಮರುನಾಮಕರಣ ಮಾಡುವಿರಾ? ಇವರನ್ನು “ಬೊಮ್ಮಾಯುಲ್ಲಾ ಖಾನ್” ಎಂದು ಕರೆಯಬಹುದೇ? ಎಂದು ಬಿಜೆಪಿಯನ್ನು ಟ್ಯಾಂಗ್ ಮಾಡಿದೆ.

ಇದನ್ನೂ ಓದಿ: ಕೈ ನಾಯಕರ ಹಳೇ ಕೇಸ್ ಕೆದಕಿದ ಬಿಜೆಪಿ, ಈ 16 ಪ್ರಶ್ನೆಗಳಿಗೆ ಉತ್ತರಿಸುವಂತೆ ಕಾಂಗ್ರೆಸ್​ಗೆ​ ಸವಾಲ್​

ದೊಣ್ಣೆ ಹಿಡಿದು ಜನರನ್ನು ಬೆದರಿಸುತ್ತಿದ್ದ RSS ಈಗ ಲಾಂಗು ಮಚ್ಚು ಹಿಡಿದು ಸಂಸ್ಕೃತಿ ರಕ್ಷಣೆಗೆ ಮುಂದಾಗಿದೆಯೇ?

ಇನ್ನು ಸದ್ದಿಲ್ಲದೆ ರೌಡಿ ಶೀಟರ್ ಮಾರ್ಕೆಟ್ ವೇಡಿ ಬಿಜೆಪಿ ಸೇರಿ ರೌಡಿ ರಾಜಕಾರಣ ಶುರುಮಾಡಿಯಾಗಿದೆ. ತಮ್ಮ ದುಷ್ಟ ಆಡಳಿತದಿಂದಾಗಿ ಮತದಾರರನ್ನು ಓಲೈಸಿ ಮತ ಪಡೆಯಲು ಅಸಾಧ್ಯ ಎಂದು ಅರಿತ ಬಿಜೆಪಿ ರೌಡಿ ಮೋರ್ಚಾ ಕಟ್ಟಿಕೊಂಡು ಬೆದರಿಸಿ ಮತ ಪಡೆಯಲು ಸಿದ್ಧಗೊಳ್ಳುತ್ತಿದೆ. ರಾಮರಾಜ್ಯ ಮಾಡುತ್ತೇವೆಂದವರು ರೌಡಿ ರಾಜ್ಯ ಮಾಡಲು ಮುಂದಾಗಿದ್ದಾರೆ. ದೊಣ್ಣೆ ಹಿಡಿದು ಜನರನ್ನು ಬೆದರಿಸುತ್ತಿದ್ದ RSS ಈಗ ಲಾಂಗು ಮಚ್ಚು ಹಿಡಿದು ಸಂಸ್ಕೃತಿ ರಕ್ಷಣೆಗೆ ಮುಂದಾಗಿದೆಯೇ? ರೌಡಿ ಮೋರ್ಚಾ ತೆರೆಯುವಂತೆ ಬಿಜೆಪಿಗೆ RSS ಅದೇಶಿಸಿದೆಯೇ? ಈ ಕಾರಣಕ್ಕಾಗಿಯೇ ಬಿಜೆಪಿಯ ವೈಟ್ ಕಾಲರ್ ರೌಡಿಗಳು ಲಜ್ಜೆ ಬಿಟ್ಟು ಅಸಲಿ ರೌಡಿಗಳನ್ನು ಸಮರ್ಥನೆ ಮಾಡುತ್ತಿದ್ದಾರೆಯೇ? ಬಿಜೆಪಿಗರಿಗೂ ರೌಡಿಗಳಿಗೂ ಏನು ಈ ಅನುಬಂಧ? ಎಂದು ಕೆಪಿಸಿಸಿ ಟ್ವೀಟ್ ಪ್ರಹಾರ ಮಾಡಿದೆ.

ಬಿಜೆಪಿ ರೌಡಿ ಮೋರ್ಚಾದ ಲಿಸ್ಟ್ ಬೆಳೆಯುತ್ತಲೇ ಇದೆ, ಒಂಟೆ ರೋಹಿತ್, ಮಾರ್ಕೆಟ್ ವೇಡಿ ಎಂಬ ರೌಡಿ ಶೀಟರ್‌ಗಳೊಂದಿಗೆ ಸಚಿವ ಡಾ ಅಶ್ವತ್ ನಾರಾಯಣ ಅವರ ಗೆಳೆತನ ಜಗಜ್ಜಾಹೀರಾಗಿದೆ. ಮಾರ್ಕೆಟ್ ವೇಡಿ ಈಗಾಗಲೇ ಬಿಜೆಪಿ ಸೇರಿಯೂ ಆಗಿದೆ. ಹೀಗಿದ್ದೂ ರೌಡಿಗಳನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಹೇಳುವ ಬಿಜೆಪಿಗರ ನಾಲಿಗೆಯನ್ನು ಯಾವುದರಿಂದ ತಯಾರಿಸಲಾಗಿದೆ. ಬಿಜೆಪಿಯ ರೌಡಿ ಮೋರ್ಚಾ ಬಹು ದೊಡ್ಡದಾಗಿ ರೂಪುಗೊಳ್ಳುತ್ತಿದೆ, ರೌಡಿಗಳಿಗೆಲ್ಲ ಬಿಜೆಪಿಯೇ ಅಚ್ಚುಮೆಚ್ಚಿನ ಪಕ್ಷವಾಗಿದೆ, ಮತ್ತೊಬ್ಬ ಮಾಜಿ ರೌಡಿ ಶೀಟರ್‌ ಜಗದೀಶ್ ಚೌಧರಿಗೆ ಬಿಜೆಪಿ ಕೆಂಪು ಹಾಸು ಹಾಕಿ ಕರೆಯುತ್ತಿದೆ. ಸೋಲು ಖಚಿತವಾಗುತ್ತಿದ್ದಂತೆಯೇ ಸಮಾಜಘಾತುಕರು, ರೌಡಿಗಳನ್ನಿಟ್ಟುಕೊಂಡು ಚುನಾವಣೆ ಮಾಡಲು ಬಿಜೆಪಿ ಮುಂದಾಗಿರುವುದು ಸತ್ಯ ಎಂದು ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕೆಪಿಸಿಸಿ ವಾಗ್ದಾಳಿ ನಡೆಸಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:27 am, Wed, 7 December 22