ಬೆಳಗಾವಿ ಜನಪ್ರತಿನಿಧಿಗಳು ಫುಲ್ ಸೈಲೆಂಟ್! ಆದರೆ ಶಿವಾಜಿ ಪುತ್ಥಳಿಗೆ ಎಂಇಎಸ್ ಕಾರ್ಯಕರ್ತೆಯರಿಂದ ಕ್ಷೀರಾಭಿಷೇಕ!

ಬೆಳಗಾವಿ ಜನಪ್ರತಿನಿಧಿಗಳು ಫುಲ್ ಸೈಲೆಂಟ್! ಆದರೆ ಶಿವಾಜಿ ಪುತ್ಥಳಿಗೆ ಎಂಇಎಸ್ ಕಾರ್ಯಕರ್ತೆಯರಿಂದ ಕ್ಷೀರಾಭಿಷೇಕ!
ಬೆಳಗಾವಿ ನಗರದಾದ್ಯಂತ ಹೈಅಲರ್ಟ್ ನಡುವೆ ಶಿವಾಜಿ ಪುತ್ಥಳಿಗೆ ಕ್ಷೀರಾಭಿಷೇಕ ಮಾಡಿದ ಎಂಇಎಸ್ ಕಾರ್ಯಕರ್ತೆಯರು!

ಬೆಳಗಾವಿಯ ಮಾಜಿ ಮೇಯರ್ ಸರಿತಾ ಪಾಟೀಲ್ ನೇತೃತ್ವದಲ್ಲಿ ಶಿವಾಜಿ ಗಾರ್ಡನ್​ಗೆ ನುಗ್ಗಿದ ಎಂಇಎಸ್​ ಕಾರ್ಯಕರ್ತೆಯರು ಪೊಲೀಸರು ತಡೆದರೂ ಲೆಕ್ಕಿಸದೆ ಶಿವಾಜಿ ಪುತ್ಥಳಿಗೆ ಕ್ಷೀರಾಭಿಷೇಕ ಮಾಡಿದ್ದಾರೆ. ಪೊಲೀಸರ ವಿರೋಧದ ನಡುವೆಯೂ ಶಿವಾಜಿ ಪುತ್ಥಳಿ ಬಳಿ ಮಹಿಳೆಯರು ತೆರಳಿ, ತಮ್ಮ ಕೆಲಸ ಕಾರ್ಯ ಮಾಡಿಕೊಂಡು ಬಂದಿದ್ದಾರೆ.

TV9kannada Web Team

| Edited By: sadhu srinath

Dec 18, 2021 | 1:35 PM


ಬೆಳಗಾವಿ: ರಾಜ್ಯ ವಿಧಾನ ಮಂಡಳದ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿರುವಾಗ ಎಂಇಎಸ್ ಮತ್ತು ಶಿವಸೇನೆ ಪುಂಡರು ರಾಜ್ಯ ಸರ್ಕಾರಕಕ್ಕೆ ಸವಾಲು ಹಾಕುವಂತೆ ಶುಕ್ರವಾರ ರಾತ್ರಿ ಅಟ್ಟಹಾಸ ಮೆರೆದಿದ್ದಾರೆ. ಇಡೀ ಸರ್ಕಾರವೇ ಬೆಳಗಾವಿಯಲ್ಲಿ ಬೀಡು ಬಿಟ್ಟಿದ್ದರೂ ಮಹಾರಾಷ್ಟ್ರ ಕಿರಾತಕರು ಮತ್ತೆ ಪುಂಡಾಟ ಮೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ನಗರದಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ. ಬೆಳಗಾವಿಯ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಯಾರೂ ಗುಂಪು ಸೇರದಂತೆ ಪೊಲೀಸರಿಂದ ನಿಗಾ ವಹಿಸಲಾಗಿದೆ. ಇನ್ನು ಅತ್ತ ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡರು ಅಟ್ಟಹಾಸ ಮೆರೆಯುತ್ತಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಿರಜ್ ಪಟ್ಟಣದಲ್ಲಿ ಕರ್ನಾಟಕ ರಾಜ್ಯದ ಕಾರುಗಳ ಮೇಲೆ ಕಟ್ಟಿಗೆಯಿಂದ ಹೊಡೆದು, ಕಲ್ಲು ತೂರಿದ್ದಾರೆ. ಕನ್ನಡಿಗರ ಹೊಟೆಲ್ ಕೂಡ ಬಂದ್ ಮಾಡಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಶಿವಸೇನೆ ಪುಂಡರು.

ಈ ಮಧ್ಯೆ, ಬೆಳಗಾವಿಯ ಶಿವಾಜಿ ಗಾರ್ಡನ್ ಬಳಿ ಎಂಇಎಸ್ ಪುಂಡರು ನಿಷೇಧಾಜ್ಞೆ ನಡುವೆಯೂ ಜಮಾಯಿಸುತ್ತಿದ್ದಾರೆ. ಪೊಲೀಸರ ಜೊತೆ ವಾಗ್ವಾದಕ್ಕಿಳಿದ ಎಂಇಎಸ್ ಪುಂಡರು ಶಿವಾಜಿ ಪ್ರತಿಮೆ ಬಳಿ ಬಿಡಬೇಕೆಂದು ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಬೆಳಗಾವಿಯ ಮಾಜಿ ಮೇಯರ್ ಸರಿತಾ ಪಾಟೀಲ್ ನೇತೃತ್ವದಲ್ಲಿ ಶಿವಾಜಿ ಗಾರ್ಡನ್​ಗೆ ನುಗ್ಗಿದ ಎಂಇಎಸ್​ ಕಾರ್ಯಕರ್ತೆಯರು ಪೊಲೀಸರು ತಡೆದರೂ ಲೆಕ್ಕಿಸದೆ ಶಿವಾಜಿ ಪುತ್ಥಳಿಗೆ ಕ್ಷೀರಾಭಿಷೇಕ ಮಾಡಿದ್ದಾರೆ. ಪೊಲೀಸರ ವಿರೋಧದ ನಡುವೆಯೂ ಶಿವಾಜಿ ಪುತ್ಥಳಿ ಬಳಿ ಮಹಿಳೆಯರು ತೆರಳಿ, ತಮ್ಮ ಕೆಲಸ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಆದರೆ ಶಿವಾಜಿ ಪುತ್ಥಳಿಗೆ ಪೂಜೆ ಸಲ್ಲಿಸುತ್ತಿದ್ದಂತೆ ಅವರನೆಲ್ಲಾ ಮಹಿಳಾ ಪೊಲೀಸರು ವಾಪಾಸ್ ಕಳುಹಿಸುತ್ತಿದ್ದಾರೆ.

ಈ ನಡುವೆ ಬೆಳಗಾವಿ ಶಿವಾಜಿ ಗಾರ್ಡನ್ ಬಳಿಗೆ ಬಿಜೆಪಿ ಕಾರ್ಯಕರ್ತರು ಸಹ ಆಗಮಿಸಿದ್ದು, ಗಾರ್ಡನ್ ಒಳಗೆ ಹೋಗಲು ಯತ್ನಿಸಿದ್ದಾರೆ. ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಕಿರಣ್ ಜಾಧವ್ ಸೇರಿದಂತೆ ಕೆಲವು ಬಿಜೆಪಿ ಕಾರ್ಯಕರ್ತರು ಗೇಟ್ ಮುಂದೆ ನಿಂತು ಒಳಗೆ ಬಿಡುವಂತೆ ಪೊಲೀಸರ ಜತೆಗೆ ವಾಗ್ವಾದ ನಡೆಸಿದ್ದಾರೆ.

ಎಂಇಎಸ್​ ಮುಖಂಡ ಶುಭಂ ಶಳಕೆ ಸೇರಿದಂತೆ 27 ಜನ ಜೈಲುಪಾಲು
ಬೆಳಗಾವಿಯಲ್ಲಿ ಪೊಲೀಸ್​ ವಾಹನಕ್ಕೆ ಬೆಂಕಿ ಹಚ್ಚಿ ಪುಂಡಾಟ ಮೆರೆದಿದ್ದ ಎಂಇಎಸ್​ ಸಂಘಟನೆಯ 27 ಆರೋಪಿಗಳನ್ನು ಜೈಲಿಗಟ್ಟಲಾಗಿದೆ. ಬೆಳಗಾವಿಯಲ್ಲಿ ಕಲ್ಲು ತೂರಿ ಪುಂಡಾಟ ಮೆರೆದಿದ್ದ ಆರೋಪದ ಮೇಲೆ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಎಂಇಎಸ್​ ಮುಖಂಡ ಶುಭಂ ಶಳಕೆ ಸೇರಿದಂತೆ 27 ಜನ ಜೈಲುಪಾಲಾಗಿದ್ದಾರೆ. ಎಂಇಎಸ್​ನ 27 ಪುಂಡರನ್ನು ಹಿಂಡಲಗಾ ಸೆಂಟ್ರಲ್​ ಜೈಲಿಗೆ ಶಿಫ್ಟ್​ ಮಾಡಲಾಗಿದೆ. ಹಿಂಡಲಗಾ ಸೆಂಟ್ರಲ್ ಜೈಲಿನ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹೆಚ್ಚುವರಿಯಾಗಿ ಒಂದು DAR, KSRP ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.

ಬೆಳಗಾವಿ ಪ್ರಭಾವೀ ಜನಪ್ರತಿನಿಧಿಗಳು ಫುಲ್ ಸೈಲೆಂಟ್ ಮೋಡ್​​ನಲ್ಲಿ:
ಬೆಳಗಾವಿ ಹೊತ್ತಿ ಉರಿಯುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಸೈಲೆಂಟ್ ಆಗಿದ್ದಾರೆ. ಬೆಳಗಾವಿಯಲ್ಲಿ 13 ಜನ ಬಿಜೆಪಿ ಶಾಸಕರು, ಏಳು ಕಾಂಗ್ರೆಸ್ ಶಾಸಕರು, ಮೂವರು ಸಂಸದರು, ಎರಡು ಎಂಎಲ್‌ಸಿ, ಒಂದು ರಾಜ್ಯ ಸಭಾ ಸದಸ್ಯರಿದ್ರೂ ಇವರು ಯಾರೂ ನಿನ್ನೆಯ ಘಟನೆ ಬಗ್ಗೆ ತುಟಿ ಬಿಚ್ಚಿಲ್ಲ. ಈವರೆಗೂ ಕೇವಲ ಇಬ್ಬರು ನಾಯಕರು ಮಾತ್ರ ಘಟನೆ ಕುರಿತು ಹೇಳಿಕೆ ನೀಡಿದ್ದಾರೆ. ನಗರದ ಇಬ್ಬರು ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ಕೇವಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸೈಲೆಂಟ್ ಮೋಡ್​​ನಲ್ಲಿದ್ದಾರೆ!

ಇನ್ನು ಸಚಿವ ಉಮೇಶ್ ಕತ್ತಿ, ಸಚಿವೆ ಶಶಿಕಲಾ ಜೊಲ್ಲೆ ಈವರೆಗೂ ಸೈಲೆಂಟ್ ಮೈಂಟೇನ್​ ಮಾಡಿದ್ದಾರೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕೂಡ ಬಾಯ್ಬಿಟ್ಟಿಲ್ಲ. ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ‌, ಅಂಜಲಿ ನಿಂಬಾಳ್ಕರ್, ಮಹಾಂತೇಶ್ ಕೌಜಲಗಿ, ಮಹಾಂತೇಶ್ ದೊಡ್ಡಗೌಡರ್, ಆನಂದ ಮಾಮನಿ, ಮಹಾದೇವಪ್ಪ ಯಾದವಾಡ, ಶ್ರೀಮಂತ ಪಾಟೀಲ್, ಮಹೇಶ್ ಕುಮಟಳ್ಳಿ, ಪಿ.ರಾಜೀವ್, ದುರ್ಯೋಧನ ಐಹೊಳೆ, ಗಣೇಶ್ ಹುಕ್ಕೇರಿ ತುಟಿ ಬಿಚ್ಚದ ಇತರೆ ನಾಯಕರು. ಇತ್ತ ಶಾಸಕ ರಮೇಶ್ ಜಾರಕಿಹೊಳಿ‌ ಕೂಡ ಸೈಲೆಂಟ್, ಸೈಲೆಂಟ್. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಕೂಡ ಥಂಡಾ ಹೊಡೆದಿದ್ದಾರೆ. ವೋಟ್ ಪಾಲಿಟಿಕ್ಸ್ ಗಾಗಿ ಈ ಜನಪ್ರತಿನಿಧಿಗಳು ಎಂಇಎಸ್ ಪುಂಡಾಟಿಕೆ ವಿರುದ್ಧ ತುಟಿ ಬಿಚ್ಚಿಲ್ಲ ಎಂದು ಭಾವಿಸಲಾಗಿದೆ.

MES Highdrama In Belagavi: ಪೊಲೀಸರು ತಡೆದರೂ ಲೆಕ್ಕಿಸದೆ ಶಿವಾಜಿ ಪುತ್ಥಳಿಗೆ ಹಾಲಿನ ಅಭಿಷೇಕ|Tv9Kannada

Stone Pelting In Belagavi: MES ಪುಂಡಾಟದ ವಿರುದ್ಧ ಮಾಜಿ ಸಿಎಂ HDK ಸರಣಿ ಟ್ವೀಟ್|Tv9Kannada

ಇದನ್ನೂ ಓದಿ:
ಬೆಂಗಳೂರಿನಲ್ಲಿ ಶಿವಾಜಿ ಪುತ್ಥಳಿಗೆ ಕಪ್ಪು ಮಸಿ: ಬೆಳಗಾವಿಯಲ್ಲಿ ಪುಂಡರ ಅಟ್ಟಹಾಸ, ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೆ ನಮ್ಮ ಸರ್ಕಾರ ಬಿಡಲ್ಲ- ಗೃಹ ಸಚಿವ ಜ್ಞಾನೇಂದ್ರ

Follow us on

Related Stories

Most Read Stories

Click on your DTH Provider to Add TV9 Kannada