AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಮೃತಪಟ್ಟ ಚಿನ್ನದ ಅಂಗಡಿ ಮಾಲೀಕ: ತಮ್ಮ ನಿಂದಲೇ ಕುಟುಂಬಕ್ಕೆ 4 ಕೋಟಿ ರೂ. ಮೋಸ; ಗ್ರಾಹಕರು ಕಂಗಾಲು

ಅಣ್ಣ ಸಾವನ್ನಪ್ಪಿದ ಬಳಿಕ ಚಿನ್ನದ ಅಂಗಡಿಯಲ್ಲಿನ ಚಿನ್ನ ಮತ್ತು ಹಣ ಲೂಟಿ ಮಾಡಿ ಅರವಿಂದ್ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜುಲೈ ಐದರಂದು ಪುತ್ರಿ ಮತ್ತು ಸಂಬಂಧಿಕರೊಂದಿಗೆ ಚಿನ್ನದ ಅಂಗಡಿಗೆ ಬಂದಿದ್ದ ಅರವಿಂದ್ ಚಿನ್ನ ದೋಚಿದ್ದಾರೆ ಎನ್ನಲಾಗಿದೆ.

ಕೊರೊನಾದಿಂದ ಮೃತಪಟ್ಟ ಚಿನ್ನದ ಅಂಗಡಿ ಮಾಲೀಕ: ತಮ್ಮ ನಿಂದಲೇ ಕುಟುಂಬಕ್ಕೆ 4 ಕೋಟಿ ರೂ. ಮೋಸ; ಗ್ರಾಹಕರು ಕಂಗಾಲು
ಅನಿಲ್​ ಮತ್ತು ಅರವಿಂದ್
TV9 Web
| Edited By: |

Updated on:Sep 17, 2021 | 7:51 AM

Share

ಬೆಳಗಾವಿ: ಕೊವಿಡ್​ನಿಂದ ಮೃತಪಟ್ಟ ಚಿನ್ನದ ಅಂಗಡಿ ಮಾಲೀಕನ ಕುಟುಂಬಕ್ಕೆ ತಮ್ಮನಿಂದಲೇ ಮೋಸವಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಚಿನ್ನದಂಗಡಿಯಲ್ಲಿದ್ದ 4 ಕೋಟಿ ಮೌಲ್ಯದ ಚಿನ್ನ ಮತ್ತು ಹಣದೊಂದಿಗೆ ತಮ್ಮ ಪರಾರಿಯಾಗಿದ್ದು, ಈ ವೇಳೆ ಅಂಗಡಿ ಬಾಗಿಲಿಗೆ ಅಣ್ಣನ ಪುತ್ರಿಯ ಫೋನ್ ನಂಬರ್ ಅಂಟಿಸಿ ಹೋಗಿದ್ದಾರೆ.

ಬೆಳಗಾವಿಯ ಪ್ರತಿಷ್ಠಿತ ಮುತಕೇಕರ್ ಜ್ಯುವೆಲರ್ಸ್‌ ಮಾಲೀಕ ಅನಿಲ್ ಮುತಕೇಕರ್ ಕೊವಿಡ್​ನಿಂದಾಗಿ ಮೃತಪಟ್ಟಿದ್ದಾರೆ. ಆದರೆ ಅನಿಲ್ ತಮ್ಮ ಅರವಿಂದ್​ ಮುತಕೇಕರ್ ಅಂಗಡಿಯಲ್ಲಿದ್ದ ಚಿನ್ನ ಹೊತ್ತು ಪರಾರಿಯಾಗಿದ್ದಾರೆ. ಲಾಕ್‌ಡೌನ್‌ ವೇಳೆ ನಡೆದ ಘಟನೆ ಅನ್‌ಲಾಕ್ ಬಳಿಕ ಬಯಲಾಗಿದ್ದು, ಚಿನ್ನದಂಗಡಿಗೆ ಆಭರಣ ಮಾಡಿಸಲು ಕೊಟ್ಟಿದ್ದ ಗ್ರಾಹಕರು ಸದ್ಯ ಕಂಗಾಲಾಗಿದ್ದಾರೆ.

ಮುತಕೇಕರ್ ಜ್ಯುವೆಲ್ಲರ್ಸ್, ಎಸ್.ವಿ.ಮುತಕೇಕರ್ & ಕಂ. ಹೆಸರಲ್ಲಿ ಎರಡು ಪ್ರತ್ಯೇಕ ಮಳಿಗೆಗಳಿವೆ. ಪಾರ್ಟ್​ನರ್​ಶಿಪ್​ನಲ್ಲಿ ಅನಿಲ್ ಮತ್ತು ಅರವಿಂದ್​ ಚಿನ್ನದ ಅಂಗಡಿ ನಡೆಸುತ್ತಿದ್ದರು. ಜೂನ್ 11ರಂದು ಕೊವಿಡ್​ನಿಂದ ಅನಿಲ್ ಮುತಕೇಕರ್ ಮೃತಪಟ್ಟಿದ್ದಾರೆ.

ಅಣ್ಣ ಸಾವನ್ನಪ್ಪಿದ ಬಳಿಕ ಚಿನ್ನದ ಅಂಗಡಿಯಲ್ಲಿನ ಚಿನ್ನ ಮತ್ತು ಹಣ ಲೂಟಿ ಮಾಡಿ ಅರವಿಂದ್ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜುಲೈ ಐದರಂದು ಪುತ್ರಿ ಮತ್ತು ಸಂಬಂಧಿಕರೊಂದಿಗೆ ಚಿನ್ನದ ಅಂಗಡಿಗೆ ಬಂದಿದ್ದ ಅರವಿಂದ್ ಚಿನ್ನ ದೋಚಿದ್ದಾರೆ ಎನ್ನಲಾಗಿದೆ. ಅಲ್ಲದೆ ಸಂಬಂಧಿಗಳ ಜೊತೆ ಅರವಿಂದ್ ಮುತಕೇಕರ್ ಚಿನ್ನದಂಗಡಿ ನುಗ್ಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸಿಸಿ ಕ್ಯಾಮರಾ ದೃಶ್ಯಾವಳಿ ಸಮೇತ ಖಡೇಬಜಾರ್ ಠಾಣೆಗೆ ಅನಿಲ್ ಮುತಕೇಕರ್ ಪುತ್ರಿ ಸಂಪದಾ ದೂರು ನೀಡಿದ್ದಾರೆ. ಆದರೆ ಆಭರಣ ಮಾಡಿಸಲು ಚಿನ್ನ ನೀಡಿದ ಗ್ರಾಹಕರು ಮಾತ್ರ ಎರಡು ತಿಂಗಳಿಂದ ಪೊಲೀಸ್ ಠಾಣೆಗೆ ಅಲೆದಾಡುವಂತಾಗಿದೆ.

ಇದನ್ನೂ ಓದಿ: ಮೈಸೂರು ಚಿನ್ನದಂಗಡಿ ದರೋಡೆ, ಶೂಟೌಟ್ ಆರೋಪಿಗಳ ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ

ಮಡಿವಾಳ: ವೈದ್ಯ ದಂಪತಿ ಮನೆಯಲ್ಲಿ ಕೆಲಸ ಮಾಡುವವರಿಂದಲೇ ಚಿನ್ನಾಭರಣ ಕಳ್ಳತನ; ಆರೋಪಿ ಅಮ್ಮು ಬಂಧನ

Published On - 7:41 am, Fri, 17 September 21

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?