AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಚಿನ್ನದಂಗಡಿ ದರೋಡೆ, ಶೂಟೌಟ್ ಆರೋಪಿಗಳ ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ

ಶಸ್ತ್ರಸಜ್ಜಿತ ದರೋಡೆಕೋರರು ಪತ್ತೆಯಾದರೆ ಮೈಸೂರು ನಗರ ಪೊಲೀಸರನ್ನು ಸದರಿ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಲು ತಿಳಿಸಲಾಗಿದೆ: 9480802203, 9480802264, 9480802200.

ಮೈಸೂರು ಚಿನ್ನದಂಗಡಿ ದರೋಡೆ, ಶೂಟೌಟ್ ಆರೋಪಿಗಳ ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ
ದರೋಡೆಕೋರರ ಫೋಟೋ ಹಂಚಿಕೊಂಡ ಮೈಸೂರು ಪೊಲೀಸರು
TV9 Web
| Updated By: guruganesh bhat|

Updated on:Aug 24, 2021 | 6:29 PM

Share

ಮೈಸೂರು: ನಿನ್ನೆ ಅರಮನೆ ನಗರಿಯ ಜನತೆಯನ್ನು ಬೆಚ್ಚಿಬೀಳಿಸಿದ್ದ ದರೋಡೆ ಶೂಟ್‌ಔಟ್ ಪ್ರಕರಣದ ಆರೋಪಿಗಳ ಸುಳಿವು ನೀಡಿದವರಿಗೆ ₹5 ಲಕ್ಷ ಬಹುಮಾನ ನೀಡುವುದಾಗಿ ಮೈಸೂರು ಕಮಿಷನರ್ ಚಂದ್ರಗುಪ್ತ ಘೋಷಿಸಿದ್ದಾರೆ. ಮಾಹಿತಿ ನೀಡಿದವರ ವಿವರ ಗೌಪ್ಯವಾಗಿಡುವ ಭರವಸೆ ನೀಡಿರುವ ಅವರು, ಹೆಚ್ಚಿನ ಮಾಹಿತಿಗೆ 9480802200 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ. ಆರೋಪಿಗಳ ಮತ್ತಷ್ಟು ಸಿಸಿ ಕ್ಯಾಮೆರಾ ಪೋಟೋ ಬಿಡುಗಡೆ ಮಾಡಲಾಗಿದೆ. ತನಿಖೆಗೆ 25 ಪೊಲೀಸ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. 80 ಪೊಲೀಸರು ತನಿಖೆಯಲ್ಲಿ ಭಾಗಿಯಾಗಲಿದ್ದಾರೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳ ರಚನೆ ಮಾಡಲಾಗಿದೆ. ಇದರ ಜೊತೆಗೆ ಸಾರ್ವಜನಿಕರ ಸಹಕಾರಕ್ಕೆ ಮನವಿ ಮಾಡಲಾಗಿದೆ. ಇಲಾಖೆಯಿಂದ ರೂ. 5 ಲಕ್ಷ ನಗದು ಬಹುಮಾನವನ್ನು ಘೋಷಿಸಲಾಗಿದ್ದು, ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿಡುವ ಭರವಸೆ ನೀಡಲಾಗಿದೆ.

ನಾಲ್ವರು ದುಷ್ಕರ್ಮಿಗಳು ಒಳ ನುಗ್ಗಿ ಮಾಲೀಕನಿಗೆ ಥಳಿಸಿದ್ದಾರೆ. ಬಳಿಕ ಕೈ ಕಾಲು ಕಟ್ಟಿ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಬಳಿಕ ಅಂಗಡಿಯ ಬಾಗಿಲು ತೆಗೆದು ಓಡಿ ಹೋಗಿದ್ದಾರೆ. ಈ ವೇಳೆ‌ ಅಡ್ಡ ಬಂದವರ ಮೇಲೆ ಗುಂಡು ಹಾಯಿಸಿದ್ದಾರೆ. ಕಿವಿ ಓಲೆ ಖರೀದಿಸಲು ಬಂದಿದ್ದ ದಡದಹಳ್ಳಿ ಚಂದ್ರುಗೆ ಗುಂಡು ತಗಲಿ ಸಾವನ್ನಪ್ಪಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಮೈಸೂರಿನಲ್ಲಿ ತಲ್ಲಣ ಮೂಡಿಸಿರುವ ಶಸ್ತ್ರಸಜ್ಜಿತ ದರೋಡೆಕೋರರ ಕೃತ್ಯ ದೊಡ್ಡ ಮಟ್ಟದಲ್ಲೇ ಸುದ್ದಿ ಮಾಡುತ್ತಿದ್ದು, ಅಮಾಯಕ ಯುವಕನೋರ್ವ ಬಲಿಯಾಗಿರುವುದಕ್ಕೆ ಜನ ಕಂಬನಿ ಮಿಡಿದಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣುವಂತೆ ನೀಲಿ ಅಂಗಿ ಧರಿಸಿ ಆಭರಣ ಮಳಿಗೆ ಹೊಕ್ಕಿರುವ ಕಳ್ಳರು ಕೈಗೆ ಸಿಕ್ಕಿದ್ದನ್ನೆಲ್ಲಾ ದೋಚಿದ್ದಾರೆ. ಆದರೆ, ಹೊರಗೆ ಬರುತ್ತಿದ್ದಂತೆಯೇ ಒಬ್ಬಾತ ಅಂಗಿ ಬಿಚ್ಚಿದ್ದು ಅಲ್ಲೇ ಎಸೆದು ಪರಾರಿಯಾಗಿದ್ದಾನೆ. ಇದೀಗ ಇವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ಮಾಹಿತಿ ಕಲೆಹಾಕಲು ಸಾರ್ವಜನಿಕರಲ್ಲೂ ಸಹಾಯ ಕೇಳಿದ್ದಾರೆ. ಶಸ್ತ್ರಸಜ್ಜಿತ ದರೋಡೆಕೋರರು ಪತ್ತೆಯಾದರೆ ಮೈಸೂರು ನಗರ ಪೊಲೀಸರನ್ನು ಸದರಿ ದೂರವಾಣಿ ಸಂಖ್ಯೆ ಮೂಲಕ ಸಂಪರ್ಕಿಸಲು ತಿಳಿಸಲಾಗಿದೆ: 9480802200.

ಮೈಸೂರು ತಾಲ್ಲೂಕಿನ ದಡದಹಳ್ಳಿ ಗ್ರಾಮದ ಚಂದ್ರು (23) ಈ ಘಟನೆಯಲ್ಲಿ ದುರ್ಮರಣಕ್ಕೀಡಾಗಿದ್ದು, ಗಾರೆ ಕೆಲಸ ಮಾಡುತ್ತಿದ್ದ ಅವರು ತನ್ನ ಚಿಕ್ಕಪ್ಪನ ಮಗ ರಂಗಸ್ವಾಮಿ ಜತೆ ಓಲೆ ಖರೀದಿಸಲು ಬಂದಿದ್ದರು ಎಂದು ತಿಳಿದುಬಂದಿದೆ. ವಿದ್ಯಾರಣ್ಯಪುರಂನಲ್ಲಿರುವ ಅಮೃತ್ ಗೋಲ್ಡ್ ಅಂಡ್ ಸಿಲ್ವರ್‌ ಪ್ಯಾಲೇಸ್​ಗೆ ನುಗ್ಗಿದ್ದ ಕಳ್ಳರು ಕಳ್ಳತನ ನಡೆಸುತ್ತಿದ್ದರು. ಚಂದ್ರು ಬರುವ ಮುನ್ನವೇ ಅಂಗಡಿ ಒಳಗೆ ಇದ್ದ ದರೋಡೆಕೋರರು ಬಾಗಿಲು ಹಾಕಿದ್ದ ಕಾರಣ ಚಂದ್ರು ಹೊರಗೆ ನಿಂತಿದ್ದರು. ದರೋಡೆಕೋರರು ಕಳ್ಳತನ ಮಾಡಿ ಶಟರ್ ತೆಗೆದಾಗ ಚಂದ್ರು ಅಂಗಡಿ ಕಡೆ ಹೆಜ್ಜೆ ಹಾಕಿದ್ದು, ತಪ್ಪಿಸಿಕೊಳ್ಳುವಾಗ ಅಡ್ಡ ಬಂದ ಕಾರಣ ಆತ ನಮ್ಮನ್ನು ಹಿಡಿಯಬಹುದು ಎಂದು ಹೆದರಿದ ಕಳ್ಳರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ನೇರವಾಗಿ ಚಂದ್ರು ತಲೆಗೆ ಹೊಕ್ಕು ಅವರು ಮೃತಪಟ್ಟಿದ್ದಾರೆ ಎನ್ನುವುದು ಗೊತ್ತಾಗಿದೆ. ದರೋಡೆಕೋರನ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದರೋಡೆಕೋರರ ಪತ್ತೆಗಾಗಿ ಡಿಸಿಪಿ ಗೀತಾ ಪ್ರಸನ್ನ ನೇತೃತ್ವದಲ್ಲಿ ಪೊಲೀಸರ ವಿಶೇಷ ತಂಡ ರಚನೆಯಾಗಿದೆ.

(Mysuru Police Anounce 5 lakh reward for informing the accused of gold shop robbery and shootout)

Published On - 6:21 pm, Tue, 24 August 21