ಗರಿಗೆದರಿದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ; ಕೊನೆ ಕ್ಷಣದ ಲೆಕ್ಕಾಚಾರ ಹೇಗಿದೆ?
ಪಾಲಿಕೆಯಲ್ಲಿ ಪಕ್ಷಗಳ ಸಂಖ್ಯಾ ಬಲ ಹೀಗಿದೆ: ಬಿಜೆಪಿ ಸದಸ್ಯರು 22, ಸಂಸದ 1, ಶಾಸಕರ ಸಂಖ್ಯೆ 2, ಕಾಂಗ್ರೆಸ್ ಸದಸ್ಯರು 19, ಶಾಸಕರ ಸಂಖ್ಯೆ 1, ಜೆಡಿಎಸ್ ಸದಸ್ಯರು 17, ಶಾಸಕ 1, ಎಂಎಲ್‌ಸಿ 3, ಪಕ್ಷೇತರ ಸದಸ್ಯರು 5, ಬಿಎಸ್‌ಪಿ ಸದಸ್ಯ 1. ಇನ್ನು ಈಗಾಗಲೇ ಇಬ್ಬರು ಪಕ್ಷೇತರರು ಜೆಡಿಎಸ್ ಸೇರ್ಪಡೆಗೊಂಡಿದ್ದು, ಒಬ್ಬ ಪಕ್ಷೇತರ ಸದಸ್ಯ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ (Mysuru City Corporation Mayor Election) ಇಂದು (ಆಗಸ್ಟ್ 25) ನಡೆಯಲಿದ್ದು, ಪಾಲಿಕೆ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ಮತದಾನ ಪ್ರಕ್ರಿಯೆ ಜರುಗಲಿದೆ. ಕಾಂಗ್ರೆಸ್, JDS ಮೈತ್ರಿಯ ಮೂಲಕ ಕಳೆದ ಫೆಬ್ರವರಿಯಲ್ಲಿ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿದ್ದ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾದ ಹಿನ್ನೆಲೆ ಚುನಾವಣೆ ಏರ್ಪಡಿಸಲಾಗಿದೆ.
ಒಟ್ಟು 65 ಪಾಲಿಕೆ ಸದಸ್ಯರ ಪೈಕಿ ಒಬ್ಬರ ಸದಸ್ಯತ್ವ ರದ್ದಾಗಿರುವುದರಿಂದ 64 ಸದಸ್ಯರು ಪ್ರಸ್ತುತ ಇದ್ದು, 72 ಜನ ಮತ ಚಲಾಯಿಸಲಿದ್ದಾರೆ. ಆ ಪೈಕಿ ಶಾಸಕರು, ಸಂಸದರು, ಪರಿಷತ್ ಸದಸ್ಯರು ಸೇರಿ 8 ಮತ ಇರಲಿದೆ. ಚುನಾವಣೆಯ ಕಾರಣ ಪಾಲಿಕೆ ಕಚೇರಿಯ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಇದ್ದು, ಪಾಸ್ ಇದ್ದರೆ ಮಾತ್ರ ಕಚೇರಿಯೊಳಗೆ ಹೋಗಲು ಅನುಮತಿ ನೀಡಲಾಗುತ್ತಿದೆ. ಪಾಲಿಕೆ ಕಚೇರಿ ಸಂಪರ್ಕಿಸುವ ರಸ್ತೆಗಳಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಭದ್ರತೆಗಾಗಿ 12 ಜನರ ಕಮಾಂಡೋ ಪಡೆ, ಸಿಆರ್ ತುಕಡಿ, 6 ಪೊಲೀಸ್ ಇನ್ಸ್‌ಪೆಕ್ಟರ್‌ಗಳು, 8 ಸಬ್‌ಇನ್ಸ್‌ಪೆಕ್ಟರ್‌ಗಳು, 9 ಎಎಸ್‌ಐ, 70 ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ.
ಪಾಲಿಕೆಯಲ್ಲಿ ಪಕ್ಷಗಳ ಸಂಖ್ಯಾ ಬಲ ಹೀಗಿದೆ: ಬಿಜೆಪಿ ಸದಸ್ಯರು 22, ಸಂಸದ 1, ಶಾಸಕರ ಸಂಖ್ಯೆ 2, ಕಾಂಗ್ರೆಸ್ ಸದಸ್ಯರು 19, ಶಾಸಕರ ಸಂಖ್ಯೆ 1, ಜೆಡಿಎಸ್ ಸದಸ್ಯರು 17, ಶಾಸಕ 1, ಎಂಎಲ್‌ಸಿ 3, ಪಕ್ಷೇತರ ಸದಸ್ಯರು 5, ಬಿಎಸ್‌ಪಿ ಸದಸ್ಯ 1. ಇನ್ನು ಈಗಾಗಲೇ ಇಬ್ಬರು ಪಕ್ಷೇತರರು ಜೆಡಿಎಸ್ ಸೇರ್ಪಡೆಗೊಂಡಿದ್ದು, ಒಬ್ಬ ಪಕ್ಷೇತರ ಸದಸ್ಯ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಶಾಸಕರು: ಜೆಡಿಎಸ್ ಪಕ್ಷದಿಂದ ಜಿ ಟಿ ದೇವೇಗೌಡ, ಕಾಂಗ್ರೆಸ್ ಪಕ್ಷದಿಂದ ತನ್ವೀರ್ ಸೇಠ್, ಬಿಜೆಪಿ ಪಕ್ಷದಿಂದ ಎಲ್ ನಾಗೇಂದ್ರ ಹಾಗೂ ಎಸ್ ಎ ರಾಮದಾಸ್. ವಿಧಾನಪರಿಷತ್ ಸದಸ್ಯರು: ಜೆಡಿಎಸ್ ಪಕ್ಷದಿಂದ ಮರಿತಿಬ್ಬೇಗೌಡ, ಸಂದೇಶ್ ನಾಗರಾಜ್, ಕೆ ಟಿ ಶ್ರೀಕಂಠೆಗೌಡ. ಸಂಸದರು: ಬಿಜೆಪಿ ಪಕ್ಷದಿಂದ ಪ್ರತಾಪ್ ಸಿಂಹ ಈ ಚುನಾವಣೆಯ ಭಾಗವಾಗಲಿದ್ದಾರೆ.
ಪಾಲಿಕೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಪಾಲಿಕೆಯ ಸುತ್ತ ಪೊಲೀಸರ ಸರ್ಪಗಾವಲು ಏರ್ಪಡಿಸಲಾಗಿದೆ. ಈ ಬಾರಿ ಕಾಂಗ್ರೆಸ್, ಜೆಡಿಎಸ್ ನಡುವೆ ಮೈತ್ರಿ ಅನುಮಾನವಿದ್ದು, ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗುವ ಸಾಧ್ಯತೆ ಇಲ್ಲ. ಆದರೆ, ಪಾಲಿಕೆಯಲ್ಲಿ ಅತಿ ಹೆಚ್ಚು ಸ್ಥಾನವನ್ನು ಬಿಜೆಪಿ ಹೊಂದಿರುವ ಕಾರಣ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಮೈತ್ರಿ ಸಾಧಿಸದೇ ಇದ್ದಲ್ಲಿ ಬಿಜೆಪಿಗೆ ಮೇಯರ್ ಸ್ಥಾನ ಲಭಿಸಲಿದೆ.
ಒಂದೊಮ್ಮೆ ಜೆಡಿಎಸ್ ಕಾಂಗ್ರೆಸ್ ಮೈತ್ರಿಯಾಗದೇ ಬಿಜೆಪಿಗೆ ಮೇಯರ್ ಸ್ಥಾನ ಸಿಕ್ಕಿದ್ದೇ ಆದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಮೇಯರ್ ಗದ್ದುಗೆ ಹಿಡಿದಂತಾಗುತ್ತದೆ. ಒಟ್ಟಾರೆಯಾಗಿ ಇಲ್ಲಿ ಯಾವುದೇ ಮ್ಯಾಜಿಕ್ ನಂಬರ್ ಅವಶ್ಯಕತೆ ಇಲ್ಲವಾದರೂ ಮೈತ್ರಿಯ ಕಾರಣದಿಂದ ಏನಾದರೂ ಲೆಕ್ಕಾಚಾರ ಅದಲು ಬದಲು ಆಗಬಹುದಾ ಎಂಬ ಕುತೂಹಲ ಇದೆ.
ಇದನ್ನೂ ಓದಿ: ಮೈಸೂರು: ಆಟೋ ಡ್ರೈವರ್ ಪತ್ನಿಗೆ ಟಿಕೆಟ್ ನೀಡಿದ ಬಿಜೆಪಿ
(Mysuru City Corporation Mayor Election Updates BJP JDS Congress fight)