ಗಿಂಬಳದ ಹಿಂದೆ ಬಿದ್ದಿದ್ದ ಸರ್ಕಾರಿ ನೌಕರ ಬಿಲ್ಡಪ್ ಕೊಟ್ಟು ಮದುವೆಗೆ ಸಜ್ಜಾಗಿದ್ದ, ವರದಕ್ಷಿಣೆ ದಾಹವೂ ಸೇರಿಕೊಂಡಾಗ… ಏನಾಯ್ತು ನೋಡಿ
ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಆತ ಸರ್ಕಾರಿ ನೌಕರಿಯಲ್ಲಿದ್ದ, ದೊಡ್ಡ ದೊಡ್ಡ ಬಿಲ್ಡಪ್ ಕೊಟ್ಟು ಮದುವೆಗೆ ಸಜ್ಜಾದ. ಮೊದಲಿನ ಮಾತುಕತೆಯಂತೆ 50 ಗ್ರಾಂ ಚಿನ್ನ, 1 ಲಕ್ಷ ವರೋಪಚಾರ ನೀಡುಬೇಕು ಅಂದಿದ್ದ. ಆದ್ರೇ ಮದುವೆ ಹಿಂದಿನ ದಿನ ಏಕಾಏಕಿ 100 ಗ್ರಾಂ ಚಿನ್ನ, 20 ಲಕ್ಷ ಹಣ ಬೇಕು ಇಲ್ಲವಾದ್ರೇ ಮದುವೆ ಆಗಲ್ಲಾ ಅಂತಾ ಹೇಳಿದ್ದಾನೆ.
ಆತ ಸರ್ಕಾರಿ ನೌಕರಿಯಲ್ಲಿದ್ದ (government servant), ಜನರ ಸೇವೆ ಮಾಡಬೇಕಿದ್ದವ ಗಿಂಬಳದ ಹಿಂದೆ ಬಿದ್ದಿದ್ದ. ದೊಡ್ಡ ದೊಡ್ಡ ಬಿಲ್ಡಪ್ ಕೊಟ್ಟು ಮದುವೆ ಆಗಲು ಸಜ್ಜಾಗಿದ್ದ. ಐದು ತಿಂಗಳ ಹಿಂದೆ ಖಾನಾಪುರ ಮೂಲದ ಯುವತಿ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಇದಾದ ಬಳಿಕ ಪದೇ ಪದೇ ಹಣ ಬೇಕು ಅಂತಾ ಹುಡುಗಿ ಮನೆಯವರನ್ನ ಪೀಡಿಸತೊಡಗಿದ್ದ ( dowry). ಹೇಗೋ ಹಣ ಕೊಟ್ಟ ಸಹಿಸಿಕೊಂಡಿದ್ದ ವಧುವಿನ ಕುಟುಂಬಸ್ಥರು ಅದ್ದೂರಿ ಮದುವೆ ಮಾಡ್ತಿರ್ತಾರೆ. ಆದ್ರೇ ಹಣದಾಹಿ ವರನ ಕೃತ್ಯದಿಂದ ಇದೀಗ ಮದುವೆ ಮುರಿದು ಬಿದ್ದಿದೆ. ಕಿರಾತಕ ವರ ಜೈಲು ಸೇರಿದ್ದಾನೆ, ಅಷ್ಟಕ್ಕೂ ಮದುವೆ ಹಿಂದಿನ ದಿನ ಆಗಿದ್ದೇನೂ ಅಂತೀರಾ ಈ ಸ್ಟೋರಿ ನೋಡಿ.
ಸಂಭ್ರಮ ಇರಬೇಕಿದ್ದ ಮನೆಯಲ್ಲಿ ಮೌನ ತುಂಬಿದೆ, ಮಗಳ ಮುಂದಿನ ಭವಿಷ್ಯ ಎನೂ ಅಂತಾ ತಂದೆ ಚಿಂತೆಯಾದ್ರೇ, ಮಗಳಿಗೆ ಇನ್ಯಾರು ಮದುವೆ ಆಗ್ತಾರೆ ಅಂತಾ ತಾಯಿ ಒಳಗೊಳಗೆ ಸಂಕಟ ಪಡ್ತಿದ್ದಾಳೆ, ಮದುವೆ ಸಂಭ್ರಮ ಇರಬೇಕಿದ್ದ ಕಲ್ಯಾಣ ಮಂಟಪದಲ್ಲಿ ವರನನ್ನ ಹಿಡಿದು ತಂದು ಗೂಸಾ ನೀಡ್ತಿದ್ದಾರೆ. ನೋಡ ನೋಡ್ತಿದ್ದಂತೆ ಮದುವೆ ನಿಂತು ಹೋಗಿದೆ ಕಿರಾತಕ ವರ ಹಿಂಡಲಗಾ ಜೈಲು ಸೇರಿದ್ದಾನೆ. ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ (Khanapura of Belgaum).
ಹೌದು ಇಲ್ಲಿ ಎಲ್ಲವೂ ಅಂದುಕೊಂಡಂತಾಗಿದ್ರೇ ಇಂದು ವಧು ವರ ಸೇರಿಕೊಂಡು ಮನೆ ದೇವರಿಗೆ ಹೋಗಬೇಕಿತ್ತು. ಆದ್ರೇ ಇಲ್ಲಿ ಆಗಿದ್ದೆ ಬೇರೆ ಹಣದಾಹಾಕ್ಕೆ ಆಗಬೇಕಿದ್ದ ಮದುವೆ ನಿಂತು ಹೋಗಿದೆ, ಡಿಸೆಂಬರ್ 30ರಂದು ಹಳದಿ ಕಾರ್ಯಕ್ರಮ ಮಾರನೇ ದಿನ ಮದುವೆ ಆಗಬೇಕಿತ್ತು. ಆದ್ರೇ ವರದಕ್ಷಿಣೆಗಾಗಿ ಪಟ್ಟು ಹಿಡಿದು ಆಗಬೇಕಿದ್ದ ಮದುವೆ ನಿಂತು ಹೋಗಿ ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಇದೀಗ ವರ ಸಚ್ಚಿನ್ ಪಾಟೀಲ್ ಜೈಲು ಸೇರಿದ್ದಾನೆ. ಹಳೆ ಹುಬ್ಬಳ್ಳಿ ನಿವಾಸಿಯಾಗಿರುವ ಸಚಿನ್ ಕೆಲ ವರ್ಷಗಳಿಂದ ಬೆಳಗಾವಿಯ ಡಿಸಿ ಕಚೇರಿಯಲ್ಲಿ ಎಸ್ ಡಿ ಎ ಆಗಿ ಕೆಲಸ ಮಾಡುತ್ತಿದ್ದ. ಐದು ತಿಂಗಳ ಹಿಂದೆ ಇಷ್ಟಪಟ್ಟು ಖಾನಾಪುರದ ಯುವತಿಯನ್ನ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಇದಾದ ಬಳಿಕ ಮೊನ್ನೆ ಮದುವೆ ನಿಶ್ಚಯವಾಗಿದೆ.
ಮೊದಲಿನ ಮಾತುಕತೆಯಂತೆ 50 ಗ್ರಾಂ ಚಿನ್ನ, ಒಂದು ಲಕ್ಷ ವರೋಪಚಾರ ನೀಡುಬೇಕು ಅಂತಾ ಹೇಳಿರುತ್ತಾರೆ. ಆದ್ರೇ ಮದುವೆ ಹಿಂದಿನ ದಿನ ಏಕಾಏಕಿ ನೂರು ಗ್ರಾಂ ಚಿನ್ನ ಇಪ್ಪತ್ತು ಲಕ್ಷ ರೂಪಾಯಿ ಹಣ ಬೇಕು ಇಲ್ಲವಾದ್ರೇ ಮದುವೆ ಆಗಲ್ಲಾ ಅಂತಾ ಹೇಳಿದ್ದಾನೆ. ಈ ವೇಳೆ ಬೆಳಗ್ಗೆ ವರೆಗೂ ಐದು ಲಕ್ಷ ಕೊಡ್ತೇನಿ ಅಂತಾ ವಧುವಿನ ತಂದೆ ಹೇಳಿದ್ದಾರೆ. ಇಷ್ಟಾದ್ರೂ ಪಟ್ಟು ಬಿಡದೆ ಡ್ರೆಸ್ ಬದಲಿಸಿ ಹೊರ ಹೋಗಲು ಮುಂದಾಗಿದ್ದಾನೆ. ಆಗ ಧರ್ಮದೇಟು ನೀಡಿ ಸಚಿನ್ ಕರೆದುಕೊಂಡು ಬಂದು ಕೊನೆಯದಾಗಿ ಕೇಳಿದ್ದಾರೆ. ಆತ ಮದುವೆಗೆ ಒಪ್ಪದಿದ್ದಾಗ ಖಾನಾಪುರ ಪೊಲೀಸರನ್ನ ಕರೆಯಿಸಿ ವರ ದೂರು ನೀಡಿದ್ದಾಳೆ. ಅದರಂತೆ ಇದೀಗ ಆತನನ್ನ ಬಂಧಿಸಿ ಖಾನಾಪುರ ಪೊಲೀಸರು ಹಿಂಡಲಗಾ ಜೈಲಿಗೆ ಕಳ್ಸಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿದೆ ಅಯೋಧ್ಯೆ ರಾಮ ಮಂದಿರದ ಮೂಲ ಮೂರ್ತಿಗಳು; ಈ ಆಶ್ರಮದಲ್ಲಿರುವ ಶಾಸನ ಹೇಳುತ್ತೆ ಸತ್ಯ ಕಥೆ
ಇನ್ನೂ ಬರೀ ಮದುವೆ ಹಿಂದಿನ ದಿನವಷ್ಟೇ ಹಣ ಕೇಳಿಲ್ಲ ಈ ಸಚಿನ್. ನಿಶ್ಚಿತಾರ್ಥ ಆದ ದಿನದಿಂದಲೂ ತಾಯಿಗೆ ಹುಷಾರಿಲ್ಲ, ಗೆಳೆಯನಿಗೆ ಅಪಘಾತ ಆಗಿದೆ, ಮನೆ ಬದಲಾವಣೆ ಮಾಡ್ತಿದ್ದು, ಪ್ರಮೋಷನ್ ಇದೆ ಅದಕ್ಕೆ ಹಣ ಬೇಕು ಹೀಗೆ ನಾನಾ ರೀತಿ ಸುಳ್ಳು ಹೇಳಿ ಮದುವೆ ವರೆಗೂ ಸುಮಾರು ಹತ್ತು ಲಕ್ಷದ ವರೆಗೂ ಹಣ ವಸೂಲಿ ಮಾಡಿದ್ದಾನೆ. ಹೀಗೆ ಮದುವೆ ಹೆಸರಿನಲ್ಲಿ ಯುವತಿ ಕುಟುಂಬಸ್ಥರಿಗೆ ಕಿರುಕುಳ ನೀಡಿ, ವರದಕ್ಷಿಣೆ ಕೇಳಿದವ ಜೈಲು ಸೇರಿದ್ದಾನೆ. ಇತ್ತ ಮದುವೆ ಮುನ್ನ ಫ್ರಿಡ್ಜ್, ವಾಷಿಂಗ್ ಮಷಿನ್ ಸಚಿನ್ ಮನೆಗೆ ಕಳ್ಸಿದ್ದನ್ನ ಇಂದು ಮನೆಗೆ ವಾಪಾಸ್ ತಂದಿದ್ದಾರೆ. ಇತ್ತ ಮೂರು ದಿನದಿಂದ ಯುವತಿ ಮಾತ್ರ ಮನೆ ಬಿಟ್ಟು ಹೊರ ಬರುತ್ತಿಲ್ಲ.
ಸದ್ಯ ಯುವತಿಯ ಮನೆಯಲ್ಲಿ ಮುಂದೆ ಹೇಗಪ್ಪ ಅನ್ನೋ ಚಿಂತೆ ಶುರುವಾಗಿದ್ರೇ, ಇತ್ತ ಮದುವೆಗೆ ಬಂದವರು ಸರ್ಕಾರಿ ನೌಕರನ ಹಣದಾಸೆ ಕಂಡು ಹೌಹಾರಿದ್ದಾರೆ. ಹುಡಗಿ ಮದುವೆ ಅರ್ಧಕ್ಕೆ ನಿಂತಿದ್ದಕ್ಕೆ ಆತನ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಲು ಓಡಾಡಿದ್ದ ಯುವತಿಯ ತಂದೆ ಶಾಕ್ ನಲ್ಲಿದ್ದಾರೆ. ಅದೇನೆ ಇರಲಿ ವರದಕ್ಷಿಣೆ ಪೀಡಗು ಹೋಗಲಿ ಅಂತಾ ಸಾಕಷ್ಟು ಕಾನೂನು ಮಾಡಿದ್ರೂ ಇಂತಹ ಪಾಪಿಗಳು ಇನ್ನು ಅದರಿಂದ ಹೊರ ಬರದಿರುವುದು ವಿಪರ್ಯಾಸದ ಸಂಗತಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ