ನನಗೊಬ್ಬನಿಗೆ ಅಲ್ಲ ಬಹಳ ಜನರಿಗೆ ಸಿದ್ದರಾಮಯ್ಯ ಬಗ್ಗೆ ಅನುಭವ ಆಗಿದೆ; ಆ ವ್ಯಕ್ತಿಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ -ಹೆಚ್ಡಿ ಕುಮಾರಸ್ವಾಮಿ

| Updated By: ಆಯೇಷಾ ಬಾನು

Updated on: Jun 05, 2022 | 2:43 PM

ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ರಂತಹ ಹಿರಿಯ ನಾಯಕರನ್ನ ದೂರ ಇಟ್ಟು ಸಿದ್ದರಾಮಯ್ಯಗೆ ನಾಯಕತ್ವ ನೀಡಿ 5 ವರ್ಷ ಸಿಎಂ ಮಾಡಿದ್ದರು. ಇನ್ನೇನೂ ಬಹಳ ದೂರ ಇಲ್ಲ, ಈ ವ್ಯಕ್ತಿಯನ್ನು ನಂಬಿ ಕಾಂಗ್ರೆಸ್ ತನ್ನ ದುಡಿಮೆ ಧಾರೆ ಎರೆದಿದೆ. ಐದು ವರ್ಷ ಮುಖ್ಯಮಂತ್ರಿ ಆಗಲು ಅವಕಾಶ ಕೊಟ್ಟಿದೆ.

ನನಗೊಬ್ಬನಿಗೆ ಅಲ್ಲ ಬಹಳ ಜನರಿಗೆ ಸಿದ್ದರಾಮಯ್ಯ ಬಗ್ಗೆ ಅನುಭವ ಆಗಿದೆ; ಆ ವ್ಯಕ್ತಿಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ -ಹೆಚ್ಡಿ ಕುಮಾರಸ್ವಾಮಿ
ಜೆಡಿಎಸ್ ನಾಯಕ ಎಚ್​ಡಿ ಕುಮಾರಸ್ವಾಮಿ
Follow us on

ಬೆಳಗಾವಿ: ಉಂಡಮನೆಗೆ ಎರಡು ಬಗೆಯೋದು ಸಿದ್ದರಾಮಯ್ಯರಿಂದ(Siddaramaiah) ಕಲೀಬೇಕು ಎಂಬ ಬಿಜೆಪಿ ಟ್ವೀಟ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(HD Kumaraswamy) ಪ್ರತಿಕ್ರಿಯೆ ನೀಡಿದ್ದಾರೆ. ನನಗೊಬ್ಬನಿಗೆ ಅಲ್ಲ ಬಹಳ ಜನರಿಗೆ ಅದರ ಬಗ್ಗೆ ಅನುಭವ ಆಗಿದೆ. ಸಿದ್ದರಾಮಯ್ಯ ನಡವಳಿಕೆ ಬಗ್ಗೆ ಬಹಳಷ್ಟು ಜನರಿಗೆ ಅನುಭವ ಆಗಿದೆ. ಮುಂದಿನ ದಿನಗಳಲ್ಲಿ ಇದರ ಅನುಭವ ಮತ್ತಷ್ಟು ಜನರಿಗೆ ಆಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ರಂತಹ ಹಿರಿಯ ನಾಯಕರನ್ನ ದೂರ ಇಟ್ಟು ಸಿದ್ದರಾಮಯ್ಯಗೆ ನಾಯಕತ್ವ ನೀಡಿ 5 ವರ್ಷ ಸಿಎಂ ಮಾಡಿದ್ದರು. ಇನ್ನೇನೂ ಬಹಳ ದೂರ ಇಲ್ಲ, ಈ ವ್ಯಕ್ತಿಯನ್ನು ನಂಬಿ ಕಾಂಗ್ರೆಸ್ ತನ್ನ ದುಡಿಮೆ ಧಾರೆ ಎರೆದಿದೆ. ಐದು ವರ್ಷ ಮುಖ್ಯಮಂತ್ರಿ ಆಗಲು ಅವಕಾಶ ಕೊಟ್ಟಿದೆ. ಕರ್ನಾಟಕದಲ್ಲಿ ಬೇರೆ ಯಾರೂ ಕಾಂಗ್ರೆಸ್ ಪಕ್ಷ ಮುಗಿಸಬೇಕಿಲ್ಲ. ನಾವಾಗಲಿ, ಬಿಜೆಪಿಯವರಾಗಲಿ ಕಾಂಗ್ರೆಸ್ ಮುಗಿಸಬೇಕಾಗಿಲ್ಲ. ಆ ವ್ಯಕ್ತಿಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ. ಅವರಲ್ಲೇನು ನಾಯಕರನ್ನಾಗಿ ಮಾಡಿಟ್ಟುಕೊಂಡಿದ್ದಾರೆ ಅವರೇ ಮುಗಿಸುತ್ತಾರೆ. ನಾವು ನೀವ್ಯಾಕೆ ತಲೆಕೆಡಿಸಿಕೊಳ್ಳೋದು ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಆರ್​ಎಸ್​ಎಸ್​ ತಂಟೆಗೆ ಬಂದರೆ ಹುಷಾರ್; ಸಿದ್ದರಾಮಯ್ಯಗೆ ಕಂದಾಯ ಸಚಿವ ಆರ್ ಅಶೋಕ್ ಎಚ್ಚರಿಕೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜೆಡಿಎಸ್ ಮತ ಒಡೆಯುವ ಕೆಲಸ ನಡೆದಿದೆ
ಇನ್ನು ಮತ್ತೊಂದು ಕಡೆ ಜೂನ್ 10ರಂದು ರಾಜ್ಯಸಭೆ ಚುನಾವಣೆ ವಿಚಾರಕ್ಕೆ ಸಂಬಂಧಿಸಿ ಜೆಡಿಎಸ್ ಮತ ಒಡೆಯುವ ಕೆಲಸ ನಡೆದಿದೆ. ಮತ ಒಡೆಯುವುದರಲ್ಲಿ ಅವರು ಪರಿಣಿತರಿದ್ದಾರೆ. 2 ಪಕ್ಷದಲ್ಲೂ JDS ಮತ ಒಡೆಯುವ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ. ನಾನು ಇದಕ್ಕೆ ತಲೆಕೆಡಿಸಿಕೊಂಡಿಲ್ಲ ಆರಾಮಾಗಿದ್ದೇನೆ. ನಮ್ಮ ಕೆಲ ಶಾಸಕರಲ್ಲಿ ಭಿನ್ನಾಭಿಪ್ರಾಯ ಇರೋದು ನಿಜ. ಅದೆಲ್ಲ ಹೊರತುಪಡಿಸಿ ನಮ್ಮ ಅಭ್ಯರ್ಥಿಗೆ ಮತ ಕೊಡ್ತಾರೆ. ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಕೊಡುವ ವಿಶ್ವಾಸವಿದೆ ಎಂದರು.

ಪಠ್ಯ ಪುಸ್ತಕದಲ್ಲಿ ಬಸವಣ್ಣನವರಿಗೆ ಅವಮಾನ ಮಾಡಲಾಗಿದೆ. ಕೇಂದ್ರದ ಗೈಡ್ಲೈನ್ಸ್ ಮೂಲಕ ಈ ಪಾಲಿಸಿ ತಂದ್ರಾ ಇವರು? ಮಕ್ಕಳನ್ನು ಶಾಲೆಗೆ ಕಳಿಸಲು ಆತಂಕಪಡುವ ಸ್ಥಿತಿ ತಂದಿದ್ದೀರಿ ಎಂದು ಬಾಗಲಕೋಟೆಯಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಸರ್ಕಾರದ ವಿರುದ್ದ ಗರಂ ಆದ್ರು. ಇದನ್ನೂ ಓದಿ: WhatsApp: ಇನ್ನುಂದೆ ವಾಟ್ಸ್​ಆ್ಯಪ್ ಚಾಟ್ ಡಿಲೀಟ್ ಆದ್ರೆ ಟೆನ್ಶನ್ ಬೇಡ: ರಿಕವರಿ ಮಾಡಬಹುದು, ಹೇಗೆ ನೋಡಿ

Published On - 2:43 pm, Sun, 5 June 22