Karnataka Rain: ತುಂಬಿ ಹರಿಯುತ್ತಿದ್ದಾಳೆ ವೇದಗಂಗಾ.. ನದಿಯಲ್ಲಿ ಸಿಲುಕಿದ್ದ ಓಮ್ನೀ, ರಕ್ಷಣೆಗೆ ಪೊಲೀಸರ ಹರ ಸಾಹಸ

ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ 18 ಸೆಂ.ಮೀ. ಮಳೆಯಾಗಿದೆ. ಕಣಕುಂಬಿ, ಅಮಗಾಂವ, ಜಾಮಗಾಂವನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಯಿಂದ ಕಳಸಾ ಹಳ್ಳ ತುಂಬಿ ಹರಿಯುತ್ತಿದೆ

Karnataka Rain: ತುಂಬಿ ಹರಿಯುತ್ತಿದ್ದಾಳೆ ವೇದಗಂಗಾ.. ನದಿಯಲ್ಲಿ ಸಿಲುಕಿದ್ದ ಓಮ್ನೀ, ರಕ್ಷಣೆಗೆ ಪೊಲೀಸರ ಹರ ಸಾಹಸ
ನದಿ ನೀರಿನಲ್ಲಿ ಸಿಲುಕಿಕೊಂಡ ಓಮ್ನಿ ತರಲು ಹರ ಸಾಹಸ


ಬೆಳಗಾವಿ: ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಮುಂದುವರೆದಿದೆ. ಭಾರಿ ಮಳೆಯಿಂದ ವೇದಗಂಗಾ ನದಿ ತುಂಬಿ ಹರಿಯುತ್ತಿದ್ದು ನೀರಿನಲ್ಲಿ ಸಿಲುಕಿದ ಓಮ್ನಿ ಹೊರತರಲು ಓಮಿನಿ ಮಾಲೀಕರು ಹರಸಾಹಸ ಪಟ್ಟ ಘಟನೆ ನಡೆದಿದೆ.

ರಭಸವಾಗಿ ನೀರು ಹರಿಯುತ್ತಿದ್ದರು ಓಮಿನಿ ಕಾರ್ ತರಲು ಇಬ್ಬರು ವ್ಯಕ್ತಿಗಳು ತಮ್ಮ ಜೀವದ ಬಗ್ಗೆಯೂ ಚಿಂತಿಸದೆ ಹರಸಾಹಸ ಪಟ್ಟಿದ್ದಾರೆ. ಯಮಗರಣಿ ಗ್ರಾಮದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ರಸ್ತೆ ಮೇಲೆ ಏಕಾಏಕಿ ವೇದಗಂಗಾ ನದಿ ನೀರು ಹರಿದು ಬಂದಿದೆ. ಈ ವೇಳೆ ಹುನ್ನೂರ ಗ್ರಾಮದಿಂದ ನಿಪ್ಪಾಣಿಗೆ ಹೊರಟಿದ್ದ ಓಮಿನಿ ಕಾರು ಸಿಲುಕಿಕೊಂಡಿದೆ. ಸದ್ಯ ಪೊಲೀಸರು ಹನ್ನೊಂದು ಜನರನ್ನು ರಕ್ಷಣೆ ಮಾಡಿ ಕರೆತಂದಿದ್ದಾರೆ. ಆದ್ರೆ ಕಾರ್ ಮಾಲೀಕ, ಮತ್ತೋರ್ವ ವ್ಯಕ್ತಿ ಈಗ ಲಾರಿ ತಂದು ಹಗ್ಗ ಕಟ್ಟಿಕೊಂಡು ಓಮಿನಿ ಕಾರು ತರಲು ಮುಂದಾಗಿದ್ದಾರೆ. ರಭಸವಾಗಿ ಹರಿಯುತ್ತಿರುವ ನದಿಯಲ್ಲಿ ಇಳಿದು ಕಾರು ತರಲು ಹೋದವರನ್ನ ನಿಪ್ಪಾಣಿ ಪಿಎಸ್ಐ ಕೃಷ್ಣವೇಣಿ ತಡೆದಿದ್ದಾರೆ.

ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ 18 ಸೆಂ.ಮೀ. ಮಳೆಯಾಗಿದೆ. ಕಣಕುಂಬಿ, ಅಮಗಾಂವ, ಜಾಮಗಾಂವನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಯಿಂದ ಕಳಸಾ ಹಳ್ಳ ತುಂಬಿ ಹರಿಯುತ್ತಿದೆ. ಖಾನಾಪುರ ತಾಲೂಕಿನ ಹಲವು ಸೇತುವೆಗಳು ಜಲಾವೃತಗೊಂಡಿವೆ. ಮಲಪ್ರಭಾ ನದಿ ದಡದಲ್ಲಿರುವ ಹಬ್ಬಾನಟ್ಟಿಯ ಆಂಜನೇಯ ದೇವಸ್ಥಾನ ಜಲಾವೃತವಾಗಿದೆ.

ಹಿರಣ್ಯಕೇಶಿ ನದಿ ಅಪಾಯದ ಮಟ್ಟ ಮೀರಿ‌ ಹರಿಯುತ್ತಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿರುವ ಶಂಕರಲಿಂಗ ದೇವಸ್ಥಾನ ಜಲಾವೃತಗೊಂಡಿದೆ. ದೇವಸ್ಥಾನ ಪಕ್ಕದಲ್ಲಿರುವ ಹತ್ತಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು ಮನೆಗಳು ಮುಳುಗಿವೆ.

Bgm rain

ಮಳೆ ನೀರಿಗೆ ತುಂಬಿ ಹರಿಯುತ್ತಿರುವ ರಸ್ತೆಗಳು

ಇದನ್ನೂ ಓದಿ: ಕರ್ನಾಟಕದಲ್ಲಿ ತಗ್ಗದ ಮಳೆ ಅಬ್ಬರ; ವರುಣನ ರೌದ್ರನರ್ತನಕ್ಕೆ ಹಲವೆಡೆ ರೆಡ್, ಆರೆಂಜ್ ಅಲರ್ಟ್​ ಘೋಷಣೆ

Click on your DTH Provider to Add TV9 Kannada