ಬೆಳಗಾವಿ: ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಇಂದು (ಡಿ. 29) ಜಿಲ್ಲೆಯ ಹಿಂಡಲಗಾ ಜೈಲಿ (Hindalaga Jail) ಗೆ ಧೀಡಿರ್ ಭೇಟಿ ನೀಡಿದ್ದು, ಪರಿಶೀಲನೆ ಮಾಡಿದ್ದಾರೆ. ಬಳಿಕೆ ಮಾಧ್ಯಮದವರೊಂದಿಗೆ ಮಾತನಾಡಿ, ಕೈದಿಗಳು ಹೇಗಿದ್ದಾರೆ, ನಟೋರಿಯಸ್ ಕೈದಿಗಳನ್ನ ಹೇಗಿಟ್ಟಿದ್ದಾರೆ ಎನ್ನುವುದನ್ನ ಪರಿಶೀಲನೆ ಮಾಡಿರುವೆ. ಇವತ್ತು ಜೈಲಿನಲ್ಲಿ ಮೊಬೈಲ್, ಅಫೀಮು, ಅಮಲು ಪದಾರ್ಥಗಳನ್ನ ಇಟ್ಟುಕೊಳ್ಳಲಾಗುತ್ತುದೆ. ಜೈಲಿನಲ್ಲಿ ರಾಯಲ್ ಟ್ರಿಟಿಮೆಂಟ್ ಪಡೆಯುವುದು ಆಗ್ತಾಯಿತ್ತು. ಹೀಗಾಗಿ ಈಗ ಬಂದೋಬಸ್ತ್ ಮಾಡಿದ್ದೇವೆ. ಇನ್ನು ಆಹಾರ, ಸ್ವಚ್ಛತೆ, ಆಸ್ಪತ್ರೆ ಹೇಗಿದೆ ಅಂತಾ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದರು.
ಪರಪ್ಪನ ಅಗ್ರಹಾರದಲ್ಲಿ 30 ಜನ ವರ್ಗಾವಣೆ ಮಾಡಿದ್ದೇವೆ. 15 ಜನರನ್ನು ಅಮಾನತ್ತು ಮಾಡಲಾಗಿದೆ. ಇನ್ನೂ ತನಿಖೆ ಮುಂದೊರೆದಿದ್ದು, ಅವರಿಗೆ ಯಾವುದೇ ಪ್ರಮೋಷನ್ ಸಿಗುವುದಿಲ್ಲ. ಅಫೀಮು, ಅಮಲು ಪದಾರ್ಥ, ಮೊಬೈಲ್ ಒಳಗಡೆ ಬಿಟ್ಟವರಿಗೆ 5 ವರ್ಷ ಶಿಕ್ಷೆ ಆಗುತ್ತದೆ. ಒಳಗಡೆ ಶಿಕ್ಷೆಯಾದವರು ಈ ಕಾರಣಕ್ಕಾಗಿ ಅವರ ಶಿಕ್ಷೆ ಮತ್ತೆ ಐದು ವರ್ಷ ಹೆಚ್ಚಾಗುತ್ತೆ. ಅಪರಾಧ ಮಾಡಿದವರಿಗೆ ಜೈಲಿಗೆ ಹಾಕಲಾಗುವುದು. ಜೈಲಿನಲ್ಲಿ ಇದ್ದವರಿಗೂ ಶಿಕ್ಷೆ ಆಗುವಂತೆ ಮಾಡಿದ್ದೇವೆ.
ಇದನ್ನೂ ಓದಿ: ಬೆಳಗಾವಿ: ವಿಧಾನಸಭೆಯಲ್ಲಿ 2022-23ನೇ ಸಾಲಿನ ಪೂರಕ ಬಜೆಟ್ ಮಂಡಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಹಿಂಡಲಗಾ ಜೈಲಿನಲ್ಲಿ 844 ಜನ ಕೈದಿಗಳು ಇದ್ದಾರೆ. 817 ಪುರುಷ, 27 ಮಹಿಳಾ ಕೈದಿಗಳು ಇದ್ದಾರೆ. ಇತ್ತೀಚಿಗೆ ಜೈಲು ಕೈದಿಗಳಿಗೆ ಕನಿಷ್ಠ ವೇತನವನ್ನ ಹೆಚ್ಚು ಮಾಡಿದ್ದೇವೆ. ಮೊದಲು 280 ರೂಪಾಯಿ ಗರಿಷ್ಠ ವಿತ್ತು. ಈಗ 600 ರಿಂದ 650ರವರೆಗೂ ಸಂಬಳವನ್ನ ಹೆಚ್ಚಿಸಿದ್ದೇವೆ. ಹೊರಗಡೆ ಇದ್ದವರಿಗೆ ಸಂಬಳ ಕಡಿಮೆ. ಹೊರಗಡೆ ಇದ್ದವರಿಗೆ ಸಂಬಳ ಜಾಸ್ತಿ ಅಂತಾ ಟೀಕೆ ಮಾಡುತ್ತಾರೆ.
ಎಲ್ಲಿರಿಗೂ ಕೊಡಲ್ಲ ಶಿಕ್ಷೆಯಾದವರಿಗೆ, ಸ್ಕಿಲ್ ಡೆವಲಪರ್ಗೆ ಸಂಬಳ ಕೊಡುತ್ತಿದ್ದೇವೆ. ಅವರ ಕುಟುಂಬಕ್ಕೆ ಹಣ ಕೊಡಬೇಕು, ಶಿಕ್ಷೆ ಮುಗಿದ ಬಳಿಕ ಅವರ ಜೀವನಕ್ಕೆ ಆಗಲಿ ಅಂತಾ ಕೊಡ್ತಾಯಿದ್ದೇವೆ. ರಾಜ್ಯದಲ್ಲಿ 3000 ಕೈದಿಗಳಿಗೆ ಅಕ್ಷರ ಜ್ಞಾನ ಕೊಡುವ ಕೆಲಸ ಆಗಿದೆ. ಜೈಲು ಸುಧಾರಣೆಗಾಗಿ ಒಂದು ವ್ಯವಸ್ಥೆ ಮಾಡಿದ್ದೇವೆ. ಜೈಲಿನಲ್ಲಿ ಇರುವ ಮಾನವ ಸಂಪನ್ಮೂಲವನ್ನ ರಾಷ್ಟ್ರೀಯ ಸಂಪನ್ಮೂಲ ಮಾಡಲು ಒತ್ತುಕೊಟ್ಟಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ವೀರ್ ಸಾವರ್ಕರ್ ಫೋಟೋ ಅನಾವರಣಗೊಳಿಸಿದ ಸಚಿವ ಬಿ.ಸಿ. ನಾಗೇಶ್
ಸಾವರ್ಕರ್ ಬೆಳಗಾವಿ ಹಿಂಡಲಗಾ ಜೈಲಲ್ಲಿ 100 ದಿನ ವಿಚಾರಣಾಧೀನ ಕೈದಿಯಾಗಿ ಸೆರೆವಾಸದಲ್ಲಿದ್ದರು. ವೀರ್ ಸಾವರ್ಕರ್ ಅವರು 1950ರ ಏಪ್ರಿಲ್ 4ರಂದು ಬೆಳಗಾವಿ ಹಿಂಡಲಗಾ ಜೈಲು ಸೇರಿದ್ದರು. ಪಾಕಿಸ್ತಾನ ಪ್ರಧಾನಿ ಲಿಯಾಕತ್ ಅಲಿ ಖಾನ್ ಭಾರತ ಭೇಟಿ ವಿರೋಧಿಸಿದ್ದರು. ಈ ಕಾರಣಕ್ಕಾಗಿ ಪೊಲೀಸರು ಸಾವರ್ಕರ್ ಅವರನ್ನು ಜೈಲಿಗೆ ಕಳುಹಿಸಿದ್ದರು. 100 ದಿನ ಜೈಲು ವಾಸದ ಬಳಿಕ ಮುಂಬೈ ಕೋರ್ಟ್ ಗೆ ಸಾವರ್ಕರ್ ಪುತ್ರ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ನಂತರ ಜುಲೈ 13, 1950ರಂದು ಅಧಿಕಾರಿಗಳು ಬಿಡುಗಡೆಗೊಳಿಸಿದ್ದರು. ಬಳಿಕ ಸಾವರ್ಕರ್ ಅವರನ್ನು ಅದ್ಧೂರಿಯಾಗಿ ಸ್ಥಳೀಯ ನಾಯಕರು ಬರಮಾಡಿಕೊಂಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.