AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ವೀರ್‌ ಸಾವರ್ಕರ್‌ ಫೋಟೋ ಅನಾವರಣಗೊಳಿಸಿದ ಸಚಿವ ಬಿ.ಸಿ. ನಾಗೇಶ್

Veer Savarkar: ಸಾವರ್ಕರ್ ಬೆಳಗಾವಿ ಹಿಂಡಲಗಾ ಜೈಲಲ್ಲಿ 100 ದಿನ ವಿಚಾರಣಾಧೀನ ಕೈದಿಯಾಗಿ ಸೆರೆವಾಸದಲ್ಲಿದ್ದರು. ವೀರ್ ಸಾವರ್ಕರ್ ಅವರು 1950ರ ಏಪ್ರಿಲ್ 4ರಂದು ಬೆಳಗಾವಿ ಹಿಂಡಲಗಾ ಜೈಲು ಸೇರಿದ್ದರು.

ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ವೀರ್‌ ಸಾವರ್ಕರ್‌ ಫೋಟೋ ಅನಾವರಣಗೊಳಿಸಿದ ಸಚಿವ ಬಿ.ಸಿ. ನಾಗೇಶ್
ಹಿಂಡಲಗಾ ಜೈಲಿನಲ್ಲಿ ವೀರ್‌ ಸಾವರ್ಕರ್‌ ಫೋಟೋ ಅನಾವರಣ
Follow us
TV9 Web
| Updated By: ಆಯೇಷಾ ಬಾನು

Updated on:Dec 29, 2022 | 12:27 PM

ಬೆಳಗಾವಿ: ವೀರ್‌ ಸಾವರ್ಕರ್‌(Veer Savarkar) ಫೋಟೋ ಬಳಕೆ ವಿಚಾರ ರಾಜ್ಯದಲ್ಲಿ ಗೊಂದಲ, ಗಲಾಟೆ, ಹೋರಾಟಕ್ಕೆ ಕಾರಣವಾಗಿತ್ತು. ಅಲ್ಲದೆ ಇತ್ತೀಚೆಗೆ ಆಡಳಿತರೂಢ ಬಿಜೆಪಿ ಸರ್ಕಾರ ಬೆಳಗಾವಿಯ ಸುವರ್ಣಸೌಧದಲ್ಲಿ ಸಾವರ್ಕರ್‌ ಫೋಟೋ ಅನಾವರಣ ಮಾಡಿತ್ತು. ಈ ಬಗ್ಗೆ ಪರೋಕ್ಷವಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಸದ್ಯ ಈಗ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿಯೂ(Belagavi Hindalga Jail) ಕೂಡ ಸಾವರ್ಕರ್‌ ಭಾವಚಿತ್ರವನ್ನು ಅಳವಡಿಕೆ ಮಾಡಲಾಗಿದೆ.

ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಫೋಟೋ ಅನಾವರಣಗೊಳಿಸಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಕೂಡ ಉಪಸ್ಥಿತರಿದ್ದರು. ವೀರ್ ಸಾವರ್ಕರ್ ಬೆಳಗಾವಿ ಹಿಂಡಲಗಾ ಜೈಲಲ್ಲಿ 100 ದಿನ ವಿಚಾರಣಾಧೀನ ಕೈದಿಯಾಗಿ ಸೆರೆವಾಸದಲ್ಲಿದ್ದರು. 1950ರ ಜುಲೈ 13ರಂದು ಬೆಳಗಾವಿ ಹಿಂಡಲಗಾ ಜೈಲಿನಿಂದ ರಿಲೀಸ್ ಆಗಿದ್ದರು.

ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಸೆರೆವಾಸ

ಸಾವರ್ಕರ್ ಬೆಳಗಾವಿ ಹಿಂಡಲಗಾ ಜೈಲಲ್ಲಿ 100 ದಿನ ವಿಚಾರಣಾಧೀನ ಕೈದಿಯಾಗಿ ಸೆರೆವಾಸದಲ್ಲಿದ್ದರು. ವೀರ್ ಸಾವರ್ಕರ್ ಅವರು 1950ರ ಏಪ್ರಿಲ್ 4ರಂದು ಬೆಳಗಾವಿ ಹಿಂಡಲಗಾ ಜೈಲು ಸೇರಿದ್ದರು. ಪಾಕಿಸ್ತಾನ ಪ್ರಧಾನಿ ಲಿಯಾಕತ್ ಅಲಿ ಖಾನ್ ಭಾರತ ಭೇಟಿ‌ ವಿರೋಧಿಸಿದ್ದರು. ಈ ಕಾರಣಕ್ಕಾಗಿ ಪೊಲೀಸರು ಸಾವರ್ಕರ್ ಅವರನ್ನು ಜೈಲಿಗೆ ಕಳುಹಿಸಿದ್ದರು. 100 ದಿನ ಜೈಲು ವಾಸದ ಬಳಿಕ ಮುಂಬೈ ಕೋರ್ಟ್ ಗೆ ಸಾವರ್ಕರ್ ಪುತ್ರ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ನಂತರ ಜುಲೈ 13, 1950ರಂದು ಅಧಿಕಾರಿಗಳು ಬಿಡುಗಡೆಗೊಳಿಸಿದ್ದರು. ಬಳಿಕ ಸಾವರ್ಕರ್‌ ಅವರನ್ನು ಅದ್ಧೂರಿಯಾಗಿ ಸ್ಥಳೀಯ ನಾಯಕರು ಬರಮಾಡಿಕೊಂಡಿದ್ದರು.

ಇದನ್ನೂ ಓದಿ: V D Savarkar portrait: ಸಿದ್ದರಾಮಯ್ಯನವರೇ, ಸಾವರ್ಕರ್ ಬದಲು ದಾವೂದ್ ಇಬ್ರಾಹಿಂ ಫೋಟೋ ಹಾಕಿದರೆ ನಿಮಗೆ ಸಮಾಧಾನ ಆಗುತ್ತಾ? ಕೇಂದ್ರ ಸಚಿವ ಜೋಶಿ ಖಡಕ್ ಪ್ರಶ್ನೆ

1950ರ ಏಪ್ರಿಲ್ 4 ರಿಂದ ಜುಲೈ 13 ವರೆಗೆ ವಿಚಾರಣಾದೀನ ಖೈದಿಯಾಗಿ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಇದ್ದ ಕಾರಣಕ್ಕೆ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಕೆ ಮಾಡಲಾಗುತ್ತಿದೆ.

ಇನ್ನು ಈ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಫೋಟೋ ಅಳವಡಿಕೆ ತುಂಬಾ ಸಂತೋಷವನ್ನ ಕೊಟ್ಟಿದೆ, ಸಮಾಧಾನವನ್ನ ಕೊಟ್ಟಿದೆ. ಪುಟ್ಟ ಕೊಠಡಿಯಲ್ಲಿ 100 ದಿನ ಸಾರ್ವಕರ್ ಕಳೆದಿದ್ದಾರೆ. 12/8 ಅಡಿ ಜಾಗದ ಸೆಲ್ ನಲ್ಲಿ ಸಾವರ್ಕರ್ ಇದ್ದರೂ. ದೇಶಕ್ಕೆ ಆಗುವ ಅವಮಾನ ತಡೆಯದೆ ಅವತ್ತು ಪಾಕಿಸ್ತಾನಿ ಪ್ರಧಾನಿ ಹೇಳಿಕೆ ವಿರೋಧಿಸಿದಕ್ಕೆ ಜೈಲಿಗೆ ಕಳ್ಸಿದ್ರೂ. ಸ್ವಾಭಿಮಾನಿ, ಶ್ರೇಷ್ಠ ರಾಷ್ಟ್ರಭಕ್ತ ಸಾರ್ವಕರ್. ಅವರು ಇದ್ದಂತಹ ಜಾಗವನ್ನ ನೋಡಿ, ಅವರ ತ್ಯಾಗ ನಮಗೆ ನೆನಪಿಗೆ ಬಂತು. ಅವರಿದ್ದ ಸೆಲ್ ಗೆ ಹೋಗಿ ಫೋಟೋಗೆ ಹೂವು ಹಾಕಿ ಬಂದಿದ್ದೇವೆ ಎಂದರು.

ಶಾಲಾ ಕಾಲೇಜುಗಳಲ್ಲಿ ಸಾವರ್ಕರ್ ಪೋಟೋ

ಇನ್ನು ಇದೇ ವೇಳೆ ಶಾಲಾ ಕಾಲೇಜುಗಳಲ್ಲಿ ಸಾವರ್ಕರ್ ಪೋಟೋ ಅಳವಡಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಕಡೆಯಿಂದ ಆ ರೀತಿಯ ಯಾವುದೇ ಸರ್ಕ್ಯೂಲರ್ ಇಲ್ಲ. ಎಲ್ಲ ಶಾಲಾ ಕಾಲೇಜಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಜೀವನ, ತ್ಯಾಗ ಮಕ್ಕಳಿಗೆ ಗೊತ್ತಾಗಬೇಕು. ಒಂದು ರಾತ್ರಿ ಉಪವಾಸ ಮಾಡಿದಕ್ಕೆ ಬ್ರಿಟಿಷರು ಸ್ವಾತಂತ್ರ್ಯ ಕೊಟ್ಟು ಹೋದ್ರು ಅಂತಾ ತಿಳಿದುಕೊಂಡಿದ್ದಾರೆ ಕೆಲವರು. ಆದರೆ ಸ್ವಾತಂತ್ರ್ಯ ಹೋರಾಟಕ್ಕೆ ಲಕ್ಷಾಂತರ ಜನರ ತ್ಯಾಗ, ಬಲಿದಾನವಿದೆ. ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಕ್ಕಳಿಗೆ ಗೊತ್ತಿರಬೇಕು. ಅದು ಗೊತ್ತಿದ್ದರೆ ಮಾತ್ರ ಸ್ವಾತಂತ್ರ್ಯ ಉಳಿಸಿಕೊಳ್ಳಲು ಸಾಧ್ಯ. ಹೀಗಾಗಿ ಯಾವುದೇ ಮೇಷ್ಟ್ರು, ಯಾವುದೇ ಸ್ವಾತಂತ್ರ್ಯ ಹೋರಾಟಗಾರನ ಪೋಟೋ ಶಾಲೆಯಲ್ಲಿ ಹಾಕಿದ್ರೆ ಸಂತೋಷ ಪಡುತ್ತೇನೆ. ಸಾವರ್ಕರ್ ಪೋಟೋ ಹಾಕಿದ್ರು ನಾನು ಸಂತೋಷ ಪಡುತ್ತೇನೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:27 pm, Thu, 29 December 22