ವಿಚ್ಛೇದನ ಕೋರಿದ್ದ ಹೆಂಡತಿಯನ್ನು ಜನಜಂಗುಳಿಯ ಮಧ್ಯೆಯೇ ಹತ್ಯೆ ಮಾಡಿದ ಪತಿ ಮಂಜೂರ್

ಕೋರ್ಟ್‌ನಿಂದ ವಾಪಸಾಗುತ್ತಿದ್ದಾಗ ಮಾರಕಾಸ್ತ್ರಗಳಿಂದ ಹೀನಾ ಕೌಸರ್ ಮೇಲೆ ಪತಿ ಮಂಜೂರ್ ಇಲಾಹಿ ಹಲ್ಲೆ ಮಾಡಿದ್ದಾನೆ. ಗಾಯಗೊಂಡ ಕೌಸರ್ ಬಿಮ್ಸ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ವಿಚ್ಛೇದನ ಕೋರಿದ್ದ ಹೆಂಡತಿಯನ್ನು ಜನಜಂಗುಳಿಯ ಮಧ್ಯೆಯೇ ಹತ್ಯೆ ಮಾಡಿದ ಪತಿ ಮಂಜೂರ್
ಪ್ರಾತಿನಿಧಿಕ ಚಿತ್ರ
Edited By:

Updated on: Mar 25, 2022 | 3:58 PM

ಬೆಳಗಾವಿ: ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಪತ್ನಿಯನ್ನು ಪತಿಯೇ(Husband) ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಕೋಟೆ ಕೆರೆ ಬಳಿ ನಡೆದಿದೆ. ಹೀನಾ ಕೌಸರ್(24) ಕೊಲೆಯಾದ(Murder) ದುರ್ದೈವಿ. 4 ವರ್ಷಗಳ ಹಿಂದೆ ಮಂಜೂರ್ (34) ಜೊತೆ ಹೀನಾ ಕೌಸರ್ ವಿವಾಹವಾಗಿದ್ದರು. ಆದರೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ 8 ತಿಂಗಳ ಹಿಂದೆ ವಿಚ್ಛೇದನ ಕೋರಿ ಹೀನಾ ಕೌಸರ್ ಅರ್ಜಿ ಸಲ್ಲಿಸಿದ್ದರು. ಆದರೆ ವಿಚ್ಛೇದನ ನೀಡದಂತೆ ಮಂಜೂರ್ ಇಲಾಹಿ ಕೇಳಿಕೊಂಡಿದ್ದ. ಇದಕ್ಕೆ ಒಪ್ಪದಿದ್ದಕ್ಕೆ ಜನನಿಬಿಡ ಪ್ರದೇಶದಲ್ಲೇ ಹೆಂಡತಿಯನ್ನು(Wife) ಹತ್ಯೆ ಮಾಡಿದ್ದಾನೆ.

ಕೋರ್ಟ್‌ನಿಂದ ವಾಪಸಾಗುತ್ತಿದ್ದಾಗ ಮಾರಕಾಸ್ತ್ರಗಳಿಂದ ಹೀನಾ ಕೌಸರ್ ಮೇಲೆ ಪತಿ ಮಂಜೂರ್ ಇಲಾಹಿ ಹಲ್ಲೆ ಮಾಡಿದ್ದಾನೆ. ಗಾಯಗೊಂಡ ಕೌಸರ್ ಬಿಮ್ಸ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಸೇರಿ ಪೊಲೀಸರ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಸದ್ಯ ಆರೋಪಿ ಪತಿ ಮಂಜೂರ್ ಇಲಾಹಿಯನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಕೆಲಸದಿಂದ ತೆಗೆದು ಹಾಕಿದ ಕೋಪಕ್ಕೆ ಹೆಚ್​ಆರ್​ ಕೊಲೆಗೆ ಯತ್ನ

ಕೆಲಸದಿಂದ ತೆಗೆದುಹಾಕಿದ ಕೋಪಕ್ಕೆ ಹೆಚ್‌ಆರ್ ಕೊಲೆಗೆ ಮುಂದಾಗಿದ್ದ ಆರೋಪಿ ಹಾಗೂ ಆತನ ಗ್ಯಾಂಗ್​ನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಧು, ಅಲೆಗ್ಸಾಂಡರ್, ಚಿನ್ನರಾಜು, ಇಮ್ರಾನ್ ಪಾಷಾ ಬಂಧಿತ ಆರೋಪಿಗಳು. ಇದೇ ತಿಂಗಳು ಎಂಟನೆ ತಾರೀಖು ರಾಜಶೇಖರ್​ನ್ನ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗಳು, ಸಾಸ್ ಮೋಸ್ ಹೆಚ್. ಇ. ಟಿ ಟೆಕ್ನಾಲಜೀಸ್ ಎಂಬ ರಕ್ಷಣಾ ಸಾಮಾಗ್ರಿ ತಯಾರಿಕಾ ಕಂಪನಿಯಲ್ಲಿ  ರಾಜಶೇಖರ್ ಎಚ್​.ಆರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ಕಂಪನಿಯ ವೈಟ್ ಫೀಲ್ಡ್ ವಿಭಾಗದಲ್ಲಿ ಮಧು ಕೆಲಸ ಮಾಡುತ್ತಿದ್ದ.  ಆದರೆ ಕಂಪನಿಯ ನಿಯಮಗಳ ಉಲ್ಲಂಘನೆ ಮಾಡಿದ್ದಕ್ಕೆ ಮಧುನನ್ನ ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದೇ ಕಾರಣಕ್ಕೆ ಸ್ನೇಹಿತರೊಟ್ಟಿಗೆ ಸೇರಿ ರಾಜಶೇಖರ್ ಕೊಲೆ ಮಾಡಲು ಯತ್ನಿಸಲಾಗಿದೆ.

ಕಾರು ಅಡ್ಡಗಟ್ಟಿ ಕೊಲೆ ಮಾಡಲು ಆರೋಪಿಗಳು ಯತ್ನಿಸಿದ್ದು, ಆದರೆ ಚಾಲಕನ ಜಾಗೃತೆಯಿಂದ ತಪ್ಪಿಸಿಕೊಂಡು ರಾಜಶೇಖರ್ ನೇರವಾಗಿ ಬಾಗಲೂರು ಠಾಣೆ ತಲುಪಿದ್ದಾರೆ. ನಂತರ ರಾಜಶೇಖರ್ ಮನೆ ಬಳಿಯು ಆರೋಪಿಗಳು ಕಾಯುತಿದ್ದು, ಆದರೆ ಅಷ್ಟರಲ್ಲಿ ರಾಜಶೇಖರ್ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ: ಅರಿಶಿನಕುಂಟೆಯ ಶಾಂತಿನಗರದಲ್ಲಿ ನಾಗೇಶ್ ಎಂಬುವವರ ಮನೆ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನವಾಗಿರುವಂತಹ ಘಟನೆ ನಡೆದಿದೆ. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

ಕೆಲಸದಿಂದ ತೆಗೆದು ಹಾಕಿದ ಕೋಪಕ್ಕೆ ಹೆಚ್​ಆರ್​ ಕೊಲೆಗೆ ಯತ್ನ; ಆರೋಪಿ ಮತ್ತು ಆತನ ಗ್ಯಾಂಗ್​ ಅರೆಸ್ಟ್

ಬೆಳಗಾವಿಯಲ್ಲಿ ಪತಿ ಹತ್ಯೆಗೆ 10 ಲಕ್ಷ ರೂ.ಗೆ ಸುಪಾರಿ ನೀಡಿದ್ದ ಪತ್ನಿ! ಮೂವರು ಅರೆಸ್ಟ್

Published On - 3:52 pm, Fri, 25 March 22