ಬೆಳಗಾವಿಯಲ್ಲಿ ಪತಿ ಹತ್ಯೆಗೆ 10 ಲಕ್ಷ ರೂ.ಗೆ ಸುಪಾರಿ ನೀಡಿದ್ದ ಪತ್ನಿ! ಮೂವರು ಅರೆಸ್ಟ್
ರಾಜು, ಧರ್ಮೇಂದ್ರ ಮತ್ತು ಶಶಿಕಾಂತ್ ಸೇರಿ ಬೆಳಗಾವಿಯ ಚನ್ನಮ್ಮ ನಗರದಲ್ಲಿ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿದ್ದರು. ಧರ್ಮೇಂದ್ರ ಮತ್ತು ಶಶಿಕಾಂತ್ನನ್ನು ದೂರವಿಟ್ಟು ರಾಜು ಬೇರೆ ಆರು ಪ್ರಾಜೆಕ್ಟ್ ಮಾಡಿದ್ದ.
ಬೆಳಗಾವಿ: ತನ್ನ ಪತಿಯನ್ನು ಕೊಲ್ಲಲು ಎರಡನೇ ಪತ್ನಿ ಸುಪಾರಿ (Supari) ನೀಡಿದ್ದ ಘಟನೆ ಬೆಳಗಾವಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಉದ್ಯಮಿಯಾಗಿದ್ದ (Business Man) ರಾಜು ದೊಡ್ಡಬಣ್ಣವರ್ ಮಾರ್ಚ್ 15ಕ್ಕೆ ಕೊಲೆಯಾಗಿದ್ದಾನೆ. ಪತಿ ಹತ್ಯೆಗೆ ಪತ್ನಿ ಕಿರಣಾ ಗಂಡನ ಪಾರ್ಟ್ನರ್ಗಳಿಗೆ 10 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದಳು. ಈ ಪ್ರಕರಣ ಸಂಬಂಧ ಮೃತನ 2ನೇ ಪತ್ನಿ ಕಿರಣಾ, ಧರ್ಮೇಂದ್ರ, ಶಶಿಕಾಂತ್ನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜು, ಧರ್ಮೇಂದ್ರ ಮತ್ತು ಶಶಿಕಾಂತ್ ಸೇರಿ ಬೆಳಗಾವಿಯ ಚನ್ನಮ್ಮ ನಗರದಲ್ಲಿ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿದ್ದರು. ಧರ್ಮೇಂದ್ರ ಮತ್ತು ಶಶಿಕಾಂತ್ನನ್ನು ದೂರವಿಟ್ಟು ರಾಜು ಬೇರೆ ಆರು ಪ್ರಾಜೆಕ್ಟ್ ಮಾಡಿದ್ದ. ಹತ್ತು ವರ್ಷದ ಹಿಂದೆ ಆರಂಭಿಸಿದ್ದ ಪ್ರಾಜೆಕ್ಟ್ ಮುಗಿಯದ ಹಿನ್ನೆಲೆ ವೈಷಮ್ಯ ಇತ್ತು. ಮತ್ತೊಂದೆಡೆ ಎರಡನೇ ಹೆಂಡತಿ ಕಿರಣಾಗೂ ಪತಿ ರಾಜು ಮೇಲೆ ದ್ವೇಷವಿತ್ತು. ಮೊದಲ ಮದುವೆಯಾದ ಬಗ್ಗೆ ಬಚ್ಚಿಟ್ಟು ತನ್ನ ವಿವಾಹವಾಗಿದ್ದನೆಂಬ ದ್ವೇಷವಿತ್ತು ಎಂಬ ಮಾಹಿತಿ ವಿಚಾರಣೆ ಬಳಿಕ ತಿಳಿದುಬಂದಿದೆ.
ವಿವಾಹವಾಗಿ ಎರಡು ಮಕ್ಕಳಾದ ಬಳಿಕ ರಾಜು ಮೂರನೇ ವಿವಾಹವಾಗಿದ್ದ. ತನ್ನ ಹಾಗೂ ತನ್ನ ಇಬ್ಬರ ಮಕ್ಕಳ ಹೆಸರಲ್ಲಿ ಆಸ್ತಿ ಮಾಡುವಂತೆ ರಾಜುಗೆ ಕಿರಣಾ ಒತ್ತಾಯಿಸಿದ್ದಳು. ಆದರೆ ಯಾವುದೇ ಆಸ್ತಿ ಎರಡನೇ ಹೆಂಡತಿ ಹೆಸರಲ್ಲಿ ಮಾಡದೇ ಇದ್ದಿದ್ದಕ್ಕೆ ಕಿರಣಾಗೆ ಸಿಟ್ಟಿತ್ತು. ಹೀಗಾಗಿ ಪತಿಯ ಬ್ಯುಸಿನೆಸ್ ಪಾರ್ಟ್ನರ್ಗಳ ಜತೆಗೂಡಿ ಗಂಡನ ಹತ್ಯೆಗೆ ಸ್ಕೆಚ್ ಹಾಕಿದ್ದಾಳೆ. ಮಾರ್ಚ್ 15ರಂದು ಬೆಳಗ್ಗೆ 5.30ರ ವೇಳೆ ರಾಜು ಮನೆಯಿಂದ ಕಾರಿನಲ್ಲಿ ತೆರಳಿದ್ದ. ಬೆಳಗ್ಗೆ 6 ಗಂಟೆ ಸುಮಾರಿಗೆ ಕಾರು ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಅಟ್ಯಾಕ್ ಮಾಡಿದ್ದಾರೆ. ಮಾರಕಾಸ್ತ್ರಗಳಿಂದ ಎರಡು ಕಾಲುಗಳ ಮೇಲೆ ಹಲ್ಲೆ ಮಾಡಿದ್ದರು. ತೀವ್ರ ರಕ್ತ ಸ್ರಾವವಾಗಿ ರಾಜು ಸ್ಥಳದಲ್ಲೇ ಮೃತಪಟ್ಟಿದ್ದನು.
ರಕ್ತಚಂದನ ವಶಕ್ಕೆ ಪಡೆದ 6 ತಿಂಗಳ ಬಳಿಕ ಎಫ್‌ಐಆರ್: ರಾಮಮೂರ್ತಿ ನಗರ ಪೊಲೀಸರ ಮೇಲೆ ರಕ್ತಚಂದನ ಮಾರಾಟ ಆರೋಪ ಪ್ರಕರಣಕ್ಕೆ ಸಂಬಂಧಿಸಿ ವಶಪಡಿಸಿಕೊಂಡು ಆರು ತಿಂಗಾಳದರು ಪೊಲೀಸರಿಗೆ ಅದು ರಕ್ತ ಚಂದನ ಅಂತ ಗೊತ್ತಿರಲಿಲ್ಲವಂತೆ. ಆರು ತಿಂಗಳ ಬಳಿಕ ರಕ್ತ ಚಂದನ ಸಿಕ್ಕಿದೆ ಅಂತ ಪೊಲೀಸರು ಎಫ್ಐಆರ್ ಮಾಡಿದ್ದಾರೆ. ಅದು ಇಲಾಖಾ ತನಿಖೆ ನಡೆಯುವಾಗ ಪೊಲೀಸರು ಎಫ್ಐಆರ್ ಹಾಕಿದ್ದಾರೆ. ಕೆಲ ದಿನಗಳ ಹಿಂದೆ ಸಾಮಾಜಿಕ ಕಾರ್ಯಕರ್ತರೊಬ್ಬರು ರಾಮಮೂರ್ತಿನಗರ ಪೊಲೀಸರ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. 80 ಲಕ್ಷ ಮೌಲ್ಯದ ರಕ್ತಚಂದನ ಆಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆ ಇಲಾಖಾ ತನಿಖೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚಿಸಿದ್ದಾರೆ.
ಶಾಲಾ ಬಾಲಕನ ಮೇಲೆ ಕರಡಿ ದಾಳಿ: ಕಾರವಾರ: ಶಾಲಾ ಬಾಲಕನ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಅಜಗಾಂವ ಗ್ರಾಮದ ಬಳಿ ನಡೆದಿದೆ. ಬಾಲಕ ಶಾಲೆ ಮುಗಿಸಿ ಬರುವಾಗ ತಮ್ಮ ಹೊಲದ ಬಳಿ ಬರುತ್ತಿದ್ದ. ಈ ವೇಳೆ ಕರಡಿ ಬಾಲಕನ ಮೇಲೆ ದಿಡೀರ್ ದಾಳಿ ನಡೆಸಿದೆ. ಕರಡಿ ದಾಳಿ ನಡೆಸುತ್ತಿದ್ದಂತೆ ಬಾಲಕನ ಕೂಗಾಟ ಕೇಳಿ ಅಕ್ಕ ಪಕ್ಕದ ಜನ ಬಂದಿದ್ದಾರೆ. ಸಮೀಪದ ಆಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ
ಅಪಘಾತದ ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆ; ವೈ.ಎನ್. ಹೊಸಕೋಟೆ- ಪಾವಗಡ ಮಧ್ಯೆ 9 KSRTC ಬಸ್‌ಗಳ ಸಂಚಾರ ಆರಂಭ
ನ್ಯಾಯಾಲಯ, ಸರ್ಕಾರದ ಆದೇಶ ಉಲ್ಲಂಘನೆ! ವಾಟಾಳ್ ನಾಗರಾಜ್ ವಿರುದ್ಧ ಎಫ್ಐಆರ್ ದಾಖಲು
Published On - 10:33 am, Wed, 23 March 22