ಬೆಳಗಾವಿ, ಆ.18: ಬೆಳಗಾವಿ ಜಿಲ್ಲೆಯ ಹುಕ್ಕೇರಿ(Hukkeri) ತಾಲೂಕಿನ ಅಮ್ಮಣಗಿ ಗ್ರಾಮದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕರು, ಸುಮಾರು ಏಳನೂರು ವರ್ಷಗಳಿಂದ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ತಾಲೂಕು ಆಡಳಿತ ಅವರನ್ನು ಬದಲಾಯಿಸಲು ಹೊರಟಿದೆ. ಈ ಮೂಲಕ ಅರ್ಚಕರ ಹಕ್ಕು ಕಸಿದುಕೊಳ್ಳುವ ಕೆಲಸ ಮಾಡ್ತಿದ್ದು, ಇದೀಗ ತಮ್ಮನ್ನ ತೆಗೆದು ಬೇರೆ ಅರ್ಚಕರನ್ನ ಕರೆತರಲು ಮುಂದಾಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಅರ್ಚಕರು ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲೇರಿದ್ದಾರೆ.
ಇಲ್ಲಿ ನಾಲ್ಕು ನೂರು ಜನ ಇದ್ದು, ಎಲ್ಲರೂ ದೇವಸ್ಥಾನದ ಮೇಲೆ ಅವಲಂಭನೆಯಾಗಿದ್ದಾರೆ. ಹೀಗಿರುವಾಗ ಬೇರೆಯವರನ್ನ ತಂದರೆ ಬೀದಿಗೆ ಬೀಳುವ ಆತಂಕ ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ತಮ್ಮ ಹಕ್ಕುಗಳನ್ನ ಕಸಿದುಕೊಳ್ಳುವ ಕೆಲಸ ಮಾಡಬಾರದು, ದೇವಸ್ಥಾನವನ್ನ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡರು ತಾವೇ ಹಿಂದಿನಂತೆ ಪೂಜೆ ಪುರಸ್ಕಾರ ಮಾಡುವುದಾಗಿ ಹೇಳ್ತಿದ್ದಾರೆ.
ಇದನ್ನೂ ಓದಿ:ಅರ್ಚಕರ ಮಧ್ಯೆ ಜಗಳ: ಕ್ಯಾಮೇನಹಳ್ಳಿ ಆಂಜನೇಯ ದೇಗುಲಕ್ಕೆ ಬೀಗ, ಜಾತ್ರೆಗೆ ಅಡ್ಡಿ
ಅಮ್ಮಣಗಿ ಗ್ರಾಮದಲ್ಲಿನ ದೇವಸ್ಥಾನದಲ್ಲಿ 1876ದಿಂದ ಅರ್ಚಕರು, ಹಿರೇಮಠ ಎರಡು ಮನೆತನ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಇತ್ತಿಚೇಗೆ ಭಕ್ತರ ಸಂಖ್ಯೆ ಹೆಚ್ಚಿಗೆಯಾಗಿ ಇದರಿಂದ ಬರುತ್ತಿರುವ ಆದಾಯ ಕೂಡ ದುಪ್ಪಟ್ಟಾಗಿದ್ದು, ಆ ಆದಾಯ ಅರ್ಚಕರು ಮಾತ್ರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ, ಹಿರಮೇಠದವರು ತಾಲೂಕು ಅಧಿಕಾರಿಗಳು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಆ ಮನವಿ ಮೇರೆಗೆ ಮುಜರಾಯಿ ಇಲಾಖೆಗೆ ದೇವಸ್ಥಾನ ಸೇರ್ಪಡಿಸಿದ್ದು, ಇದೀಗ ಬಂದ ಆದಾಯ ಸರ್ಕಾರಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಇದಕ್ಕೆ ಅರ್ಚಕರು ವಿರೋಧ ಮಾಡ್ತಿದ್ದು, ಇಡೀ ಕುಟುಂಗಳೇ ಅದರ ಮೇಲೆ ಅವಲಬನೆ ಆಗಿದ್ದು, ಒಮ್ಮೆಲೆ ಈ ರೀತಿ ಮಾಡಿದರೆ ಎಲ್ಲಿಗೆ ಹೋಗಬೇಕು ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಹುಕ್ಕೇರಿ ತಹಶೀಲ್ದಾರ್ ಮಂಜುಳಾ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿ ಅರ್ಚಕರ ಮನವೊಲಿಸುವ ಕೆಲಸ ಮಾಡಿದ್ದು, ಯಾವುದೇ ಕಾರಣಕ್ಕೂ ಹಿಂದೆ ನಡೆದುಕೊಂಡ ಬಂದ ಸಂಪ್ರದಾಯ ಮುರಿಯುವುದಿಲ್ಲ. ಜೊತೆಗೆ ಬಂದ ಆದಾಯ ತಮಗೆ ಸೇರಬೇಕು ಎಂದು ಅರ್ಚಕರು ಪಟ್ಟು ಹಿಡಿದಿದ್ದಾರಂತೆ. ಅವರಿಗೆ ಬೇಕಾದ ಎಲ್ಲ ಸೌಲಭ್ಯ ಕೊಟ್ಟು ಯಥಾ ಪ್ರಕಾರ ಪೂಜೆಗೂ ಅವಕಾಶ ಮಾಡಿ ಕೊಡುವುದಾಗಿ ಭರವಸೆ ನೀಡಿದರೂ ಅರ್ಚಕರು ಮಾತ್ರ ಪಟ್ಟು ಸಡಿಲಿಸುತ್ತಿಲ್ಲವಂತೆ. ಇದರಿಂದ ಈಗ ಬೇರೆ ಅರ್ಚಕರನ್ನ ತರುವ ಕೆಲಸಕ್ಕೆ ತಾಲೂಕು ಆಡಳಿತ ಮುಂದಾಗಿದೆ.
ಮೊನ್ನೆ ಪಲ್ಲಕ್ಕಿ ಉತ್ಸವಕ್ಕೂ ಅರ್ಚಕರು ಅಡ್ಡಿ ಪಡಿಸಿ ಪಲ್ಲಕ್ಕಿಯನ್ನ ಕೊಡದೇ ಬೀಗ ಹಾಕಿಟ್ಟುಕೊಂಡಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಇದೀಗ ಒಂದು ಕಡೆ ಅರ್ಚಕರು ಇನ್ನೊಂದು ಕಡೆ ಊರಿನ ಹಿರಿಯರಾಗಿದ್ದು. ಹೀಗಾಗಿ ತಾಲೂಕು ಆಡಳಿತ ಇಡೀ ದೇವಸ್ಥಾನ ತಮ್ಮ ಬಳಿ ತೆಗೆದುಕೊಂಡು ಸಿಬ್ಬಂದಿ ನೇಮಿಸಿ ನೋಡಿಕೊಂಡು ಹೋಗುತ್ತಿದ್ದಾರೆ.
ಸದ್ಯ ಇಬ್ಬರ ಜಗಳದಲ್ಲಿ ತಾಲೂಕು ಆಡಳಿತ ಎಂಟ್ರಿಯಾಗಿದ್ದು, ಆದರೆ ಇವರ ಕಿತ್ತಾಟ ಮಾತ್ರ ಮಲ್ಲಿಕಾರ್ಜುನ ದೇವರಿಗೆ ತಟ್ಟುತ್ತಿದೆ. ಅರ್ಚಕರು ತಮ್ಮ ಕುಟುಂಬಗಳು ಬೀದಿಗೆ ಬರುತ್ತದೆ ಅಂತಿದ್ರೆ, ಇತ್ತ ಅವರ ಬೆನ್ನಿಗೆ ನಾವಿದ್ದೇವೆ. ಆದರೆ ಆದಾಯಕ್ಕೆ ಕೈ ಹಾಕಬಾರದು ಎಂದು ತಾಲೂಕು ಆಡಳಿತ ಹೇಳುತ್ತಿದೆ. ಇದು ಸದ್ಯ ಗ್ರಾಮಸ್ಥರಿಗೂ ತಲೆ ನೋವಾಗಿ ಪರಿಣಮಿಸಿದ್ದು, ಮಲ್ಲಿಕಾರ್ಜುನ ದೇವರೇ ನೀನೇ ಇದಕ್ಕೊಂದು ಪರಿಹಾರ ಒದಗಿಸಪ್ಪಾ ಎಂದು ಕೇಳಿಕೊಳ್ಳುವ ಸ್ಥಿತಿ ಎರಡು ಕಡೆಯಲ್ಲೂ ನಿರ್ಮಾಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ