ಮಹಿಳೆ ಜೊತೆ ಅಸಭ್ಯ ವರ್ತನೆ,ಪಿಎಸ್ಐ ಅಮಾನತು; ಠಾಣೆಯ ಸಿಪಿಐ, ಸಿಬ್ಬಂದಿ ವಿರುದ್ಧ ಸಿಡಿದೆದ್ದ ಸಸ್ಪೆಂಡೆಡ್ ಪಿಎಸ್ಐ

ಹುಕ್ಕೇರಿಯಲ್ಲಿ ಚಿನ್ನಾಭರಣ ಖರೀದಿಗೆ ಹಣ ಬೇಕು ವಾಪಸ್ ಕೊಡುತ್ತೇನೆ ಎಂದು ಪಡೆದಿದ್ದಳು. ಇದಾದ ಬಳಿಕ ಆ ಮಹಿಳೆಯ ಮತ್ತು ನನ್ನ ಮಧ್ಯೆ ಮುನಿಸು ಬಂತು, ಆಗ ಎಸ್‌ಪಿಗೆ ದೂರು ನೀಡುತ್ತೇನೆ ಎಂದಳು. ಡಿ.19ರ ರಾತ್ರಿ ಸಂಕೇಶ್ವರ ಸಿಪಿಐ ಶಿವಶರಣ ಅವಜಿ ಆ ಮಹಿಳೆ ಬಳಿ ಅರ್ಜಿ ಪಡೆಯುವ ಮಾಹಿತಿ ಬಂತು, ಆಕೆಯ ಬಳಿ ಸಿಪಿಐ ಶಿವಶರಣ ಅವಜಿ ಅರ್ಜಿ ಪಡೆದು ಅದನ್ನು ಎಸ್‌ಪಿ ಸಾಹೇಬ್ರಿಗೆ ಕಳಿಸಿದರು. ಎಸ್‌ಪಿ ಸಾಹೇಬ್ರು ಒಂದೇ ದಿನದಲ್ಲಿ ಅಮಾನತು ಮಾಡಿದ್ದಾರೆ ಎಂದು ಸಸ್ಪೆಂಡ್​ ಪಿಎಸ್​ಐ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳೆ ಜೊತೆ ಅಸಭ್ಯ ವರ್ತನೆ,ಪಿಎಸ್ಐ ಅಮಾನತು; ಠಾಣೆಯ ಸಿಪಿಐ, ಸಿಬ್ಬಂದಿ ವಿರುದ್ಧ ಸಿಡಿದೆದ್ದ ಸಸ್ಪೆಂಡೆಡ್ ಪಿಎಸ್ಐ
ಸಸ್ಪೆಂಡ್​ ಪಿಎಸ್​ಐ
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Dec 25, 2023 | 4:13 PM

ಬೆಳಗಾವಿ, ಡಿ.25: ಮಹಿಳೆ ಜೊತೆ ಅಸಭ್ಯ ವರ್ತನೆ ಆರೋಪದಡಿ ಜಿಲ್ಲೆಯ ಹುಕ್ಕೇರಿ(Hukkeri)ತಾಲೂಕಿನ ಸಂಕೇಶ್ವರ ಪಟ್ಟಣ ಠಾಣೆಯ ಪಿಎಸ್ಐ ಅಮಾನತು ಮಾಡಲಾಗಿತ್ತು. ಈ ಹಿನ್ನಲೆ ಸಿಡಿದೆದ್ದ ಸಸ್ಪೆಂಡೆಡ್ ಪಿಎಸ್ಐ(Suspended PSI)ನರಸಿಂಹರಾಜು ತಮ್ಮ ಠಾಣೆಯ ಸಿಪಿಐ ಹಾಗೂ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ.  ಸಂಕೇಶ್ವರ ಠಾಣೆ ಸಿಪಿಐ ಮತ್ತು ಕೆಲ ಸಿಬ್ಬಂದಿ ವಿರುದ್ಧ ಪಿಎಸ್ಐ ಗಂಭೀರ ಆರೋಪ ಮಾಡಿದ್ದಾರೆ. ನನ್ನ ವಿರುದ್ದ ಮಹಿಳೆ, ಸಿಪಿಐ, ಕೆಲ ಪೊಲೀಸ್ ಸಿಬ್ಬಂದಿ ಸೇರಿ ಷಡ್ಯಂತ್ರ ಮಾಡಿದ್ದಾರೆ ಎಂದಿದ್ದಾರೆ.

ತಂಗಿಯೆಂದು ಆ ಮಹಿಳೆಗೆ ಸಹಾಯ ಮಾಡಿದ್ದೆ ಎಂದ ಪಿಎಸ್​ಐ

ಸಂಕೇಶ್ವರದಲ್ಲಿ ಅಮಾನತುಗೊಂಡ ಪಿಎಸ್ಐ ನರಸಿಂಹರಾಜು ದಿಢೀರ್ ಸುದ್ದಿಗೋಷ್ಠಿ ನಡೆಸಿ, ‘ನಾಲ್ಕು ತಿಂಗಳ ಹಿಂದೆ ಅಕ್ಕ-ಪಕ್ಕದವರ ಜಗಳ ಸಂಬಂಧ ಮಹಿಳೆ ದೂರು ನೀಡಿದ್ದಳು. ಈ ವೇಳೆ ಆಕೆಯ ನಂಬರ್ ಪಡೆದು ನನ್ನ ನಂಬರ್ ನೀಡಿದ್ದೆ. ತನ್ನ ಮಗನಿಗೆ ಹೃದಯಸಂಬಂಧಿ ಕಾಯಿಲೆ ಇದೆ ಎಂದು ಸಹಾಯಕ್ಕೆ ಮನವಿ ಮಾಡಿದ್ದಳು. ತಂಗಿಯಾಗಿ, ಸ್ನೇಹಿತೆಯಾಗಿ ಒಳ್ಳೆಯ ಬಾಂಧವ್ಯದಿಂದ ಇದ್ದು, ಗೂಗಲ್ ಪೇ  ಮೂಲಕ ಸಣ್ಣಪುಟ್ಟ ಹಣದ ಸಹಾಯ ಮಾಡಿದ್ದೇನೆ.

ಇದನ್ನೂ ಓದಿ:ಚೆಕ್​ಪೋಸ್ಟ್ ಬಳಿ ಅಮಾಯಕರಿಗೆ ಕಿರುಕುಳ, ಹಣ ವಸೂಲಿ.. ರಾಯಲ್ಪಾಡು ಪೊಲೀಸ್ ಠಾಣೆ ಪಿಎಸ್ಐ ಅಮಾನತು

ಹುಕ್ಕೇರಿಯಲ್ಲಿ ಚಿನ್ನಾಭರಣ ಖರೀದಿಗೆ ಹಣ ಬೇಕು ವಾಪಸ್ ಕೊಡುತ್ತೇನೆ ಎಂದು ಪಡೆದಿದ್ದಳು. ಇದಾದ ಬಳಿಕ ಆ ಮಹಿಳೆಯ ಮತ್ತು ನನ್ನ ಮಧ್ಯೆ ಮುನಿಸು ಬಂತು, ಆಗ ಎಸ್‌ಪಿಗೆ ದೂರು ನೀಡುತ್ತೇನೆ ಎಂದಳು. ಡಿ.19ರ ರಾತ್ರಿ ಸಂಕೇಶ್ವರ ಸಿಪಿಐ ಶಿವಶರಣ ಅವಜಿ ಆ ಮಹಿಳೆ ಬಳಿ ಅರ್ಜಿ ಪಡೆಯುವ ಮಾಹಿತಿ ಬಂತು, ಆಕೆಯ ಬಳಿ ಸಿಪಿಐ ಶಿವಶರಣ ಅವಜಿ ಅರ್ಜಿ ಪಡೆದು ಅದನ್ನು ಎಸ್‌ಪಿ ಸಾಹೇಬ್ರಿಗೆ ಕಳಿಸಿದರು. ಎಸ್‌ಪಿ ಸಾಹೇಬ್ರು ಒಂದೇ ದಿನದಲ್ಲಿ ಅಮಾನತು ಮಾಡಿದ್ದಾರೆ. ಆಕೆ ಪೊಲೀಸ್ ಠಾಣೆಗೆ ಬಂದಿಲ್ಲ, ಅವರ ಮನೆಗೆ ಹೋಗಿ ಸಿಪಿಐ ದೂರು ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಪಿಐ ಹಾಗೂ ನಮ್ಮ ಮಧ್ಯೆ ವೈಮನಸ್ಸು

ಸಂಕೇಶ್ವರ ಠಾಣೆ ಸಿಬ್ಬಂದಿ ಉಪಯೋಗಕ್ಕೆ ಲ್ಯಾಪ್ ಟಾಪ್ ಸೇರಿ ಇತರ ಉಪಕರಣ ಬೇಕಾಗಿ ಸ್ಥಳೀಯ ಫ್ಯಾಕ್ಟರಿಗೆ ರಿಕ್ವೆಸ್ಟ್ ಕೊಟ್ಟಿದೇವು, ಆಗ ಸಿಪಿಐ ಮೂರು ಲಕ್ಷ ರೂ ವೆಚ್ಚದಲ್ಲಿ ತಮ್ಮ ಛೇಂಬರ್ ನವೀಕರಣ ಮಾಡಿ ಎಸಿ ಹಾಕಿಸಿಕೊಂಡರು. ಇದನ್ನು ಪ್ರಶ್ನಿಸಿದ್ದಕ್ಕೆ ಸಿಪಿಐ ಹಾಗೂ ನಮ್ಮ ಮಧ್ಯೆ ವೈಮನಸ್ಸು ಬಂತು. ಈ ಉದ್ದೇಶಕ್ಕಾಗಿ ಮಹಿಳೆ ಬಳಿ ದೂರು ಪಡೆದು ಅಮಾನತು ಮಾಡಿಸಿದ್ದಾರೆ ಎಂದು ಸಿಪಿಐ ವಿರುದ್ದ ಗಂಭೀರ ಆರೋಪ ಮಾಡಿಸಿದ್ದಾರೆ.

ಇದನ್ನೂ ಓದಿ: ಪಿಎಸ್ಐ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಕಲಬುರಗಿ 11 ಪೊಲೀಸ್ ಸಿಬ್ಬಂದಿ ಅಮಾನತು!

ಕೆಲ ಪೊಲೀಸ್ ಸಿಬ್ಬಂದಿ ಕಾಣದ ಕೈಗಳು ಇದರಲ್ಲಿ ಕೆಲಸ ಮಾಡಿವೆ

ಇನ್ನು ದೂರು ನೀಡಿದ ಮಹಿಳೆ ಹಾಗೂ ನನ್ನನ್ನು ಕರೆಯಿಸಿ ವಿಚಾರಣೆ ನಡೆಸದೇ ಅಮಾನತು ಮಾಡಿದ್ದಾರೆ. ಮೇಲ್ವರ್ಗದ ಸಿಪಿಐ ಕೆಳವರ್ಗದ ಪಿಎಸ್ಐ ಓಡಿಸಬೇಕೆಂಬ ಉದ್ದೇಶದಿಂದ ಹೀಗೆ ಮಾಡಿದ್ದಾರೆ. ಕೆಲ ಪೊಲೀಸ್ ಸಿಬ್ಬಂದಿ ಕಾಣದ ಕೈಗಳು ಇದರಲ್ಲಿ ಕೆಲಸ ಮಾಡಿವೆ. ಇಬ್ಬರನ್ನೂ ಕರೆಯಿಸಿ ಸಿಪಿಐ ವಿಚಾರಣೆ ಮಾಡಬಹುದಿತ್ತು. ಗೌಪ್ಯವಾಗಿ ವರದಿ ಸಲ್ಲಿಸಿದ್ದಾರೆ, ಎಸ್‌ಪಿ ಆಗಲಿ ಸಿಪಿಐ ಆಗಲಿ ಸ್ಪಷ್ಟನೆ ಕೇಳಿಲ್ಲ. ಮುಂದೆ ಯಾವ ಸಿಬ್ಬಂದಿಗೂ ಈ ರೀತಿ ಆಗಬಾರದು ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:12 pm, Mon, 25 December 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್