ಬೆಳಗಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದರಾ ರಾಜ್ಯ ಪೊಲೀಸರು? ಎಂಇಎಸ್ ಪುಂಡರ ವಿರುದ್ಧ ದೇಶದ್ರೋಹ ಕೇಸ್ ಕೈಬಿಟ್ಟರಾ?
ದೇಶದ್ರೋಹ ಆರೋಪದಡಿ 124(ಎ) ಕಲಂ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಆದ್ರೆ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು ದೇಶದ್ರೋಹ ಸೆಕ್ಷನ್ ಕೈಬಿಟ್ಟಿದ್ದಾರೆ. ಎಂಇಎಸ್ ಪುಂಡರ ವಿರುದ್ಧ ಸದನದಲ್ಲಿ ದೇಶದ್ರೋಹ ಪ್ರಕರಣ ದಾಖಲಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು.
ಬೆಳಗಾವಿ: ಅಧಿವೇಶನ ವೇಳೆ ಎಂಇಎಸ್ ಪುಂಡರಿಂದ ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ 38 ಆರೋಪಿಗಳ ವಿರುದ್ಧ ಪ್ರತ್ಯೇಕ ಠಾಣೆಗಳಲ್ಲಿನ ಕೇಸ್‌ಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಬೆಳಗಾವಿಯ ಮಾರ್ಕೆಟ್, ಖಡೇಬಜಾರ್, ಕ್ಯಾಂಪ್ ಠಾಣೆಯಲ್ಲಿ ಕೇಸ್‌ಗಳು ದಾಖಲಾಗಿವೆ. ಜಾರ್ಜ್ ಶೀಟ್ ಸಲ್ಲಿಕೆ ಬಗ್ಗೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ದೇಶದ್ರೋಹ ಆರೋಪದಡಿ 124(ಎ) ಕಲಂ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಆದ್ರೆ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು ದೇಶದ್ರೋಹ ಸೆಕ್ಷನ್ ಕೈಬಿಟ್ಟಿದ್ದಾರೆ. ಎಂಇಎಸ್ ಪುಂಡರ ವಿರುದ್ಧ ಸದನದಲ್ಲಿ ದೇಶದ್ರೋಹ ಪ್ರಕರಣ ದಾಖಲಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು. ಡಿಸೆಂಬರ್ ನಲ್ಲಿ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದಿದ್ದ ಚಳಿಗಾಲ ಅಧಿವೇಶನದಲ್ಲಿ ಸಿಎಂ ಬೊಮ್ಮಾಯಿ ಸದನದಲ್ಲಿ ಹೇಳಿಕೆ ನೀಡ್ತಿದ್ದಂತೆ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದರು. ಆದ್ರೆ ಚಾರ್ಜ್ ಶೀಟ್ನಲ್ಲಿ ಈ ಅಂಶ ಕೈ ಬಿಡಲಾಗಿದೆ.
ಡಿಸೆಂಬರ್ 17ರಂದು ರಾತ್ರಿ ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಿ ಬೆಂಕಿ ಹಚ್ಚಿ ಪುಂಡರು ಪುಂಡಾಟ ಪ್ರದರ್ಶಿಸಿದ್ದರು. ನಾಡದ್ರೋಹಿಗಳು ಅನಗೋಳದ ಸಂಗೊಳ್ಳಿ ರಾಯಣ್ಣ ಮೂರ್ತಿ ಧ್ವಂಸಗೊಳಿಸಿದ್ದರು. ದೇಶದ್ರೋಹದ ಸೆಕ್ಷನ್ ಅಡಿ ಖಡೇಬಜಾರ್, ಮಾರ್ಕೆಟ್ ಠಾಣೆಗಳಲ್ಲಿ ಕೇಸ್ ದಾಖಲಾಗಿತ್ತು. ಹೀಗಾಗಿ ಸದ್ಯ ಬೆಳಗಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿಯಿತಾ ಪೊಲೀಸ್ ಇಲಾಖೆ? ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ರೂ ಜಾರ್ಜ್ ಶೀಟ್ ಸಲ್ಲಿಕೆ ವೇಳೆ 124(ಎ) ಕಲಂ ವಾಪಸ್ ಪಡೆದಿದ್ದೇಕೆ? ಎಂದು ರಾಜ್ಯ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಳು ಆಕ್ರೋಶ ಹೊರ ಹಾಕಿವೆ.
ಇದನ್ನೂ ಓದಿ: ಕೊರೊನಾ ಬಿಕ್ಕಟ್ಟು ಕಾಡಿದ್ದು ನಿಜ, ಆರ್ಥಿಕ ಶಿಸ್ತು ಮೀರಿಲ್ಲ, ಸಾಲ ಅನಿವಾರ್ಯ: ಬಜೆಟ್ ಸಮರ್ಥಿಸಿಕೊಂಡ ಬೊಮ್ಮಾಯಿ
‘ಜೇಮ್ಸ್’ ಸೆಲೆಬ್ರೇಷನ್ಗೆ ಬ್ರೇಕ್?; ಅಪ್ಪು ಅಭಿಮಾನಿಗಳ ನಿರಾಸೆಗೆ ಕಾರಣವಾಯ್ತು ಸೆಕ್ಷನ್ 144
Published On - 2:49 pm, Wed, 16 March 22