ಹೆಬ್ಬಾಳ್ಕರ್ ವರ್ಸಸ್ ಜಾರಕಿಹೊಳಿ ಮೇಲ್ಮನೆ‌ ಫೈಟ್? ಥೂ…ಥೂ ಎಂದು ಹಾವು ತುಳಿದವರಂತೆ ಹೌಹಾರಿದ ರಮೇಶ್ ಜಾರಕಿಹೊಳಿ

ಜಾರಕಿಹೊಳಿ ಕುಟುಂಬ ವರ್ಸಸ್ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ಫೈಟ್ ಅಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಹ ಹೇಳಿದ್ದಾರೆ. ಸೋದರರ ಸವಾಲ್, ರಾಜಕೀಯ ಸವಾಲ್ ಇದ್ದೇ ಇರುತ್ತೆ. ಬಿಜೆಪಿಯಿಂದ ಇಬ್ಬರು ಸ್ಪರ್ಧೆ, ಚಾಲೆಂಜ್ ಇರೋದು ಅವರಿಗೇ. ನಮ್ಮಲ್ಲಿ ಗೊಂದಲ ಇಲ್ಲ, ಒಂದೇ ಮತ, ಒಂದೇ ಅಭ್ಯರ್ಥಿ ಕಣದಲ್ಲಿದ್ದಾರೆ ಎಂದು ಬೆಳಗಾವಿಯಲ್ಲಿ ‘ಕೈ’ ನಾಯಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಹೆಬ್ಬಾಳ್ಕರ್ ವರ್ಸಸ್ ಜಾರಕಿಹೊಳಿ ಮೇಲ್ಮನೆ‌ ಫೈಟ್? ಥೂ...ಥೂ ಎಂದು ಹಾವು ತುಳಿದವರಂತೆ ಹೌಹಾರಿದ ರಮೇಶ್ ಜಾರಕಿಹೊಳಿ
ಲಕ್ಷ್ಮಿ ಹೆಬ್ಬಾಳ್ಕರ್ (ಎಡ) , ರಮೇಶ್ ಜಾರಕಿಹೊಳಿ (ಬಲ)


ಬೆಳಗಾವಿ: ಮುಂದಿನ ತಿಂಗಳು (ಡಿ.10) ರಾಜ್ಯ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬೆಳಗಾಗಿ ಮಟ್ಟಿಗೆ ಈ ಚುನಾವಣೆ ಲಕ್ಷ್ಮೀ ಹೆಬ್ಬಾಳ್ಕರ್ ವರ್ಸಸ್ ಜಾರಕಿಹೊಳಿ‌ ನಡುವಣ ಫೈಟ್ ಅಂತಾ ಜನಜನಿತವಾಗಿದೆ.ಈ ಬಗ್ಗೆ ಮಾಧ್ಯಮದವರು ರಮೇಶ್ ಜಾರಕಿಹೊಳಿ‌ ಅವರ ಗಮನ ಸೆಳೆದಾಗ ಥೂ…ಥೂ ಎಂದು ರಮೇಶ್ ಅವರು ಹಾವು ತುಳಿದವರಂತೆ ಹೌಹಾರಿದ್ದಾರೆ! ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಹೆಸರು ಹೇಳುತ್ತಿದ್ದಂತೆಯೇ ಸಿಡಿಮಿಡಿಗೊಂಡ ರಮೇಶ್ ಜಾರಕಿಹೊಳಿ ಥೂ ಥೂ ಎಂದು ಮುಖ ಗಂಟು ಹಾಕಿಕೊಂಡರು. ಇಂದು ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಪರ ನಾಮಪತ್ರ ಸಲ್ಲಿಕೆ ವೇಳೆ ರಮೇಶ್‌ ಜಾರಕಿಹೊಳಿ ಉಪಸ್ಥಿತರಿದ್ದರು. ಆ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ‌ ಆಕ್ರೋಶ ಹೊರಹಾಕಿದರು.

ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠಗೆ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ರಮೇಶ್ ಜಾರಕಿಹೊಳಿ ಮನವಿ ಮಾಡಿಕೊಂಡರು. ನಾವು ಕಾಂಗ್ರೆಸ್ ಅಭ್ಯರ್ಥಿಯನ್ನ ಸೋಲಿಸಬೇಕಿದೆ. ಎರಡನೇ ಮತವನ್ನ ಬಿಜೆಪಿಯ (ಪಕ್ಷೇತರ ಅಭ್ಯರ್ಥಿಯಾಗಿ) ಲಖನ್ ಜಾರಕಿಹೊಳಿ‌ಗೆ ನೀಡುವಂತೆ ವರಿಷ್ಠರ ಭೇಟಿ ಮಾಡುತ್ತೇನೆ. ದೆಹಲಿಗೆ ತೆರಳಿ ವರಿಷ್ಠರ ಭೇಟಿಯಾಗಿ ಮನವೊಲಿಸುತ್ತೇನೆ ಎಂದೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಇದೇ ವೇಳೆ ಹೇಳಿದರು.

ಇದೇ ವೇಳೆ ಜಾರಕಿಹೊಳಿ ಕುಟುಂಬ ವರ್ಸಸ್ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ಫೈಟ್ ಅಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಹ ಹೇಳಿದ್ದಾರೆ. ಸೋದರರ ಸವಾಲ್, ರಾಜಕೀಯ ಸವಾಲ್ ಇದ್ದೇ ಇರುತ್ತೆ. ರಮೇಶ್​ ಜಾರಕಿಹೊಳಿ ಎಂದಿಗೂ ಸೀರಿಯಸ್ ಆಗೇ ಇರ್ತಾರೆ. ರಮೇಶ್ ಥಂಡಾ ಇರೋದು ನಾವು, ನೀವು ಎಂದೂ ನೋಡಿಲ್ಲ. ಬಿಜೆಪಿಯಿಂದ ಇಬ್ಬರು ಸ್ಪರ್ಧೆ, ಚಾಲೆಂಜ್ ಇರೋದು ಅವರಿಗೇ. ನಮ್ಮಲ್ಲಿ ಗೊಂದಲ ಇಲ್ಲ, ಒಂದೇ ಮತ, ಒಂದೇ ಅಭ್ಯರ್ಥಿ ಕಣದಲ್ಲಿದ್ದಾರೆ ಎಂದು ಬೆಳಗಾವಿಯಲ್ಲಿ ‘ಕೈ’ ನಾಯಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಪರಿಷತ್​ ಚುನಾವಣೆಯನ್ನ ಪಕ್ಷದ ಮೇಲೆ ಮಾಡುತ್ತಿದ್ದೇವೆ. ಕುಟುಂಬಕ್ಕಿಂತ ಪಕ್ಷ ಮುಖ್ಯ ಎಂದ ಸತೀಶ್ ಜಾರಕಿಹೊಳಿ‌ ರಮೇಶ್ ಮತ್ತು ಲಖನ್ ಜಾರಕಿಹೊಳಿ‌ ನನ್ನನ್ನು ಸೋಲಿಸಿದ್ದಾರೆ. ಮೊನ್ನೆಯ ಲೋಕಸಭಾ ಉಪಚುವಾವಣೆಯಲ್ಲಿ ನನ್ನನ್ನು ಸೋಲಿಸಿದ್ದಾರೆ. ಆ ನೋವು ನಮಗೆ ಹಾಗೂ ನಮ್ಮ ಕಾರ್ಯಕರ್ತರಿಗೂ ಇದೆ. ಲಖನ್ ಜಾರಕಿಹೊಳಿ ಚುನಾವಣೆಗೆ ಸ್ಪರ್ಧಿಸೋದು ಡೌಟ್​. ಒಳ್ಳೆಯ ಅವಕಾಶ ಕೊಡ್ತೇವೆ ಅಂದ್ರೆ ವಾಪಸ್ ಪಡೀತಾರೆ. ಲಖನ್ ಜಾರಕಿಹೊಳಿ ಜತೆಗೆ ಮಾತನಾಡುವ ಪ್ರಶ್ನೆಯೇ ಇಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

Lakshmi Hebbalkar ಬಗ್ಗೆ ಪ್ರಶ್ನೆ ಕೇಳ್ತಿದ್ದಂತೆ ಮಾಜಿ ಸಚಿವ ಸಿಡಿಮಿಡಿ |Tv9Kannada

Click on your DTH Provider to Add TV9 Kannada