ಕ್ರೂಸರ್ ವಾಹನ ಪಲ್ಟಿ, ಮೂವರು ಮಹಿಳೆಯರು ದಾರುಣ ಸಾವು

ಮಹಾರಾಷ್ಟ್ರದ ಜತ್ತ ಬಳಿ ಕ್ರೂಸರ್ ವಾಹನ ಪಲ್ಟಿಯಾಗಿ ಬೆಳಗಾವಿ(Belagavi) ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಮೂವರು ಮಹಿಳೆಯರು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಈ ವೇಳೆ ಮೂವರು ಕೊನೆಯುಸಿರೆಳೆದರೆ, ಹಲವರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕ್ರೂಸರ್ ವಾಹನ ಪಲ್ಟಿ, ಮೂವರು ಮಹಿಳೆಯರು ದಾರುಣ ಸಾವು
ಕ್ರೂಸರ್ ವಾಹನ ಪಲ್ಟಿಯಾಗಿ ಬೆಳಗಾವಿಯ ಮೂವರು ಸಾವು
Follow us
Sahadev Mane
| Updated By: ಕಿರಣ್ ಹನುಮಂತ್​ ಮಾದಾರ್

Updated on:May 11, 2024 | 4:39 PM

ಬೆಳಗಾವಿ, ಮೇ.11: ಕ್ರೂಸರ್ ವಾಹನ ಪಲ್ಟಿಯಾಗಿ ಬೆಳಗಾವಿ(Belagavi) ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಮೂವರು ಮಹಿಳೆಯರು ಸಾವನ್ನಪ್ಪಿದ ದಾರುಣ ಘಟನೆ ಮಹಾರಾಷ್ಟ್ರದ ಜತ್ತ ಬಳಿ ನಡೆದಿದೆ. ಮಹಾದೇವಿ ಚೌಗಲಾ, ಗೀತಾ ದೊಡಮನಿ ಹಾಗೂ ಕಸ್ತೂರಿ, ಅಪಘಾತದಲ್ಲಿ ಸಾವನ್ನಪ್ಪಿದ ರ್ದುದೈವಿಗಳು. ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ಹೋಗುವಾಗ ಕ್ರೂಸರ್​​​  ಟೈರ್ ಬ್ಲಾಸ್ಟ್​ ಆಗಿ ಪಲ್ಟಿಯಾಗಿದೆ. ಈ ವೇಳೆ ಮೂವರು ಕೊನೆಯುಸಿರೆಳೆದರೆ, ಹಲವರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಜಯಪುರ ನಗರದಲ್ಲಿ ಸರಣಿ ಮನೆಗಳ್ಳತನ

ವಿಜಯಪುರ: ನಗರದ ಅಲಕುಂಟೆ, ಕಿತ್ತೂರು ರಾಣಿ ಚೆನ್ನಮ್ಮ ನಗರದಲ್ಲಿ ಸರಣಿ ಮನೆಗಳ್ಳತನವಾಗಿದ್ದು, ಮನೆಯಲ್ಲಿದ್ದ ಚಿನ್ನಾಭರಣ, ಹಣವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಮುದಕಪ್ಪ, ಶಶಿಕಲಾ ಹಿರೇಮಠ, ರಾಜು ಚೌವ್ಹಾಣ, ಬಸವರಾಜ ಜುಳಜುಳಿಕರ, ವೀರೇಶ್​ ಮೂರ್ತಿ, ರಮೇಶ್​ ಬಿರಾದಾರ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಬೇಸಿಗೆ ಕಾರಣ ಮನೆಯ ಮಾಳಿಗೆ ಮೇಲೆ ಮಲಗಿದ್ದಾಗ ಕೃತ್ಯ ಎಸಗಲಾಗಿದ್ದು, ವಿಜಯಪುರದ ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ಆಂಬ್ಯುಲೆನ್ಸ್ ಡ್ರೈವರ್ ಅವಾಂತರ; ಮೂರು ಕಾರು, ಒಂದು ಬೈಕ್ ನಡುವೆ ಸರಣಿ ಅಪಘಾತ

ದನದ ಕೊಟ್ಟಿಗೆಗೆ ಬೆಂಕಿ, ಎರಡು ಎತ್ತುಗಳು ಸುಟ್ಟು ಕರಕಲು

ತುಮಕೂರು: ಚಿಕ್ಕನಾಯಕನಹಳ್ಳಿ ಪಟ್ಟಣದ ಮಾರ್ಕೆಟ್ ಬಳಿ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡು 2 ಎತ್ತುಗಳು ಸಾವನ್ನಪ್ಪಿದೆ. ರೈತ ನರಸಿಂಹಮೂರ್ತಿಗೆ ಸೇರಿದ ದನದ ಕೊಟ್ಟಿಗೆ ಇದಾಗಿದ್ದು, ಕಿಡಿಗೇಡಿಗಳು ಕೊಟ್ಟಿಗೆಗೆ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ವಿಷಯ ತಿಳದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:43 pm, Sat, 11 May 24