
ಬೆಂಗಳೂರು, (ಸೆಪ್ಟೆಂಬರ್ 25): ಬೆಳಗಾವಿಯಲ್ಲಿ 2000 ಹೆಚ್ಚು ಮತದಾರರ ಜನರ ಹೆಸರು ಡಿಲೀಟ್ ಮಾಡಲು ಪತ್ರ ನೀಡಿದ್ದಾರೆ. ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಆರೋಪಕ್ಕೆ ಇದೀಗ ಶಾಸಕಯ ಅಭಯ್ ಪಾಟೀಲ್ ಸ್ಪಷ್ಟನೆ ನೀಡುವ ಮೂಲಕ ಹರಿಪ್ರಸಾದ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಭಯ್ ಪಾಟೀಲ್, ಬಿ.ಕೆ.ಹರಿಪ್ರಸಾದ್ ಅವರಿಗೆ ಕನ್ನಡ ಓದಲು ಬರುವುದಿಲ್ಲ. ಬಿಎಲ್ 2 ನೀಡಿರುವ ವರದಿ ಪರಿಶೀಲನೆಗೆ ಹೇಳಿದ್ದೇನೆ. ನಾನು ಹೆಸರು ಡಿಲೀಟ್ ಮಾಡಲು ಪತ್ರವನ್ನು ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಹರಿಪ್ರಸಾದ್ ಮಂತ್ರಿ ಆಗದಿದ್ದಕ್ಕೆ ಡಿಸ್ಟರ್ಬ್ ಆಗಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್ ಅವರದ್ದು ಹೆಚ್ಚು ಪ್ರಚಾರ ಆಗ್ತಿದೆ ನಾನೂ ಪ್ರಚಾರ ಪಡೆಯಬೇಕೆಂದು ಹೀಗೆ ಮಾಡ್ತಿದ್ದಾರೆ. ಈ ಪತ್ರ ನೋಡಿದ್ರೆ ಹುಚ್ಚರು ಯಾರೆಂದು ಗೊತ್ತಾಗುತ್ತೆ. ಪರಿಶೀಲನೆಗೂ, ಡಿಲೀಟ್ಗೂ ಅರ್ಥ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ಇಂತಹವರನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.ಬೋಗಸ್ ಇರುವ ಹೆಸರು ಡಿಲೀಟ್ ಮಾಡಲು ಹೇಳಿದ್ದೇನೆ. ನನ್ನ ಕ್ಷೇತ್ರದಲ್ಲಿ ಒಂದೇ ಬೂತ್ನಲ್ಲಿ ಸತ್ತವರ ಹೆಸರಿನಲ್ಲಿ ಎಸ್ಐಆರ್ ಆಗಿದೆ. 2700 ಬಿಎಲ್ಎ 2ಗಳು ಕೊಟ್ಟಿದ್ದ ವರದಿ ರಿಸೀವ್ಡ್ ಕೊಡ್ತಿಲ್ಲ. ಮುಖ್ಯ ಚುನಾವಣಾ ಅಧಿಕಾರಿಯನ್ನು ಖುದ್ದು ಭೇಟಿಯಾಗುತ್ತೇನೆ. ಮುಂದಿನ ವಾರ ದೆಹಲಿಗೆ ಹೋಗಿ ದಾಖಲೆ ಒದಗಿಸುತ್ತೇನೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತೇನೆ. ಹರಿಪ್ರಸಾದ್ ರೀತಿ ಕೆಳಮಟ್ಟಕ್ಕೆ ಹೋಗಲು ನನಗೆ ಆಗಲ್ಲ. ಹರಿಪ್ರಸಾದ್ ರೀತಿ ನಾನು ಚಿಲ್ಲರೆ ಲೆವೆಲ್ಗೆ ಹೋಗಲ್ಲ ಇಂಥ ಹೇಳಿಕೆಗೆ ನಾನು ಹೆದರಲ್ಲ. ಓದಲು ಬರದೇ ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದೇಶಾದ್ಯಂತ ಜಾರಿಯಲ್ಲಿರುವ ವಿಶೇಷ ಸಮಗ್ರ ಮತದಾರರ ಪಟ್ಟಿಯ ಪರಿಷ್ಕರಣೆ(SIR) ಸೇರಿದಂತೆ ಹಲವು ವಿಷಯಗಳಲ್ಲಿ ಭಾರತ ಚುನಾವಣಾ ಆಯೋಗದ(ECI) ಮುಖ್ಯಸ್ಥರು ಹಾಗೂ ಸದಸ್ಯರ ನಡುವೆ ಆಂತರಿಕ ಭಿನ್ನಾಭಿಪ್ರಾಯ ಬಹಿರಂಗವಾದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಬಿಜೆಪಿ ಶಾಸಕರ ವಿರುದ್ಧ ಗುರುವಾರ ಗಂಭೀರ ಆರೋಪ ಮಾಡಿದ್ದರು. ಅಲ್ಲದೆ ದಾಖಲೆಗಳನ್ನು ಸಹ ಬಿಡುಗಡೆ ಮಾಡಿದ್ದರು. ಬೆಳಗಾವಿಯಲ್ಲಿ ಮತದಾರರ ಪಟ್ಟಿಯಿಂದ 2,500 ಮತದಾರರ ಹೆಸರುಗಳನ್ನು ತೆಗೆದುಹಾಕುವಂತೆ ಕೋರಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದರು.

ಬಿಜೆಪಿ ಶಾಸಕರು ನೀಡಿರುವ ಎಲ್ಲಾ ಹೆಸರುಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು, ಅವರನ್ನು ಪಾಕಿಸ್ತಾನಿಗಳು ಮತ್ತು ಬಾಂಗ್ಲಾದೇಶಿಗಳು ಎಂದು ಕರೆದಿದ್ದಾರೆ. ಮತದಾರರ ಪಟ್ಟಿಯಿಂದ 2,500 ಜನರ ಹೆಸರುಗಳನ್ನು ತೆಗೆದುಹಾಕಬೇಕು ಎಂದು ಶಾಸಕರೊಬ್ಬರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಹೀಗಾಗಿ ಅಭಯ್ ಪಾಟೀಲ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.