ಸುವರ್ಣಸೌಧ ಎದುರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ : ಸಿಎಂ ಬೊಮ್ಮಾಯಿ
ಸುವರ್ಣಸೌಧದ ಎದುರು ಕಿತ್ತೂರ ರಾಣಿ ಚೆನ್ನಮ್ಮ ಮತ್ತು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಭಾನುವಾರ (ಅ.2) ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಳಗಾವಿ: ಸುವರ್ಣಸೌಧದ (suvarna soudha) ಎದುರು ಕಿತ್ತೂರ ರಾಣಿ ಚೆನ್ನಮ್ಮ (Kittur Rani Chennamma) ಮತ್ತು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ (Sangolli Rayanna) ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಭಾನುವಾರ (ಅ.2) ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ. ಬೆಳಗಾವಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಿತ್ತೂರು ಉತ್ಸವದ ಪೂರ್ವಭಾವಿಯಾಗಿ ಕಿತ್ತೂರು ಚೆನ್ನಮ್ಮಾಜಿ ವಿಜಯ ಜ್ಯೋತಿಯಾತ್ರೆಗೆ ಚಾಲನೆ ನೀಡಿದರು.
ಸರ್ಕಾರದ ವತಿಯಿಂದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರ 50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕಿತ್ತೂರು ಉತ್ಸವ ಆರಂಭವಾಗಿ 24-25 ವರ್ಷಗಳಾಗಿದೆ. ಆದರೆ ಈ ನಡುವೆ ಆಗೊಮ್ಮೆ ಈಗೊಮ್ಮೆ ಕುಂಟುತ್ತಾ ಸಾಗುತ್ತಿದೆ. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯಾದ್ಯಂತ ಹಬ್ಬವನ್ನು ಆಚರಿಸಲು ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಪ್ರಕಟಿಸಿದ ಗೆಜೆಟ್‌ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮೊದಲ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದ ವೀರ ರಾಣಿ ಎಂದು ಉಲ್ಲೇಖಿಸಲಾಗಿದೆ. ಕಿತ್ತೂರಿನಲ್ಲಿ ಈಗಿರುವ ಶಿಥಿಲಾವಸ್ಥೆಯಲ್ಲಿರುವ ಚೆನ್ನಮ್ಮನ ಅರಮನೆಯನ್ನು ಅಭಿವೃದ್ಧಿಪಡಿಸಲು ಮತ್ತು ಅದರ ಪಕ್ಕದಲ್ಲಿ ಹೊಸ ಅರಮನೆಯನ್ನು ನಿರ್ಮಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಿತ್ತೂರನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.‘
ರಾಜಕಾರಣಕ್ಕಾಗಿ ದೇಶದಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವ ಸ್ಥಿತಿ ಎದುರಾಗಿದೆ
ಬೆಂಗಳೂರು: ರಾಜಕಾರಣಕ್ಕಾಗಿ ದೇಶದಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದು ಬದಲಾಗಬೇಕು ಎಂದು ಬೆಂಗಳೂರಿನ ಗೋಸಾಯಿ ಮಠದಲ್ಲಿ ನಡೆದ ಶರನ್ನವರಾತ್ರಿ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ದೇಶದ ಗೌರವ ಹಾಗೂ ಶಾಂತಿ ಸುವ್ಯವಸ್ಥೆ ಕಲಕುವ ರಾಜಕಾರಣ ಮಾಡಿದರೆ ದೇಶ ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದರು.
ಶರನ್ನವರಾತ್ರಿ ಮಹೋತ್ಸವ ಒಂದು ಅಭಿಮಾನ ಕಾರ್ಯಕ್ರಮ. ಗೋಸಾಯಿ ಮಠದ ಪರಂಪರೆಯ ಅಂತ್ಯತ ಶ್ರೇಷ್ಠ ಪರಂಪರೆ ಇದಾಗಿದೆ. ಶತಮಾನಕ್ಕು ಹೆಚ್ಚು ಕಾಲ ಬೆಂಗಳೂರಿನಲ್ಲಿ ಈ ಪರಂಪರೆ ಇದೆ. ಭಾವನಿ ಆಶೀರ್ವಾದದ ದಯೆಯಿಂದ ಈ ಕುಲಕ್ಕೆ ಜಯ ಇದ್ದೆ ಇರುತ್ತೆ. ಸೈನಿಕರ ಸಂಖ್ಯೆ ಮುಖ್ಯ ಅಲ್ಲ, ಅತ್ಮ ಸ್ಥೈರ್ಯ ಇದ್ದರೆ ಏನ್ ಬೇಕಾದರೂ ಮಾಡಬಹುದು ಅಂತ ಛತ್ರಪತಿ ಶಿವಾಜಿ ಮಹರಾಜರು ತೋರಿಸಿಕೊಟ್ಟಿದ್ದಾರೆ.
ಅವರು ನಿರ್ಧಿಷ್ಟವಾದ ಯೋಜನೆ ಇಟ್ಟುಕೊಂಡು ಕೆಲಸ ಮಾಡಿದವರು. ಯಾವ ದೇಶದಲ್ಲಿ ಅಭಿಮಾನತ್ಮಕ ಜನರು ಇರುತ್ತಾರೋ ಅಲ್ಲಿ ದೇಶದ ಅಭಿವೃದ್ಧಿ ಚೆನ್ನಾಗಿಯೇ ಇರುತ್ತೆ. ಎಲ್ಲಿ ದೇಶದ ಬಗ್ಗೆ ಭಕ್ತಿ, ಗೌರವ ಇರುವುದಿಲ್ಲವೋ ಅಲ್ಲಿ ಎಲ್ಲ ರೀತಿಯಾ ಸಮಸ್ಯೆಗಳು ಉದ್ಭವವಾಗುತ್ತವೆ. ಸಧ್ಯ ದೇಶದಲ್ಲಿರುವ ಪರಿಸ್ಥಿತಿ ಬದಲಾಗಬೇಕು ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:17 pm, Sun, 2 October 22