ಬೆಳಗಾವಿಯಲ್ಲಿ ಕ್ರಿಪ್ಟೋಕರೆನ್ಸಿ ವ್ಯವಹಾರ ನಡೆಸುತ್ತಿದ್ದ ಉದ್ಯಮಿ ಅಪಹರಣ ಕೇಸ್; ಮೂವರು ಪ್ರಮುಖ ಆರೋಪಿಗಳು ಅರೆಸ್ಟ್
ಆರೋಪಿಗಳು ಬೆಳಗಾವಿ ಕೆಎಲ್ಇ ಆಸ್ಪತ್ರೆ ಬಳಿ ಕಾರನ್ನು ತಡೆದಿದ್ದಾರೆ. ಬೈಕ್ಗೆ ಕಾರು ಟಚ್ ಮಾಡಿ ಎಸ್ಕೇಪ್ ಆಗುತ್ತಿದ್ದೀಯ ಅಂತಾ ನಾಲ್ವರು ವಾಗ್ವಾದ ನಡೆಸಿದ್ದರು. ರವಿಕಿರಣ್ ಜತೆ ಜಗಳವಾಡಿ ಮೂವರು ಕಾರಿನಲ್ಲಿ ಹತ್ತಿದ್ದರು.
ಬೆಳಗಾವಿ: ಕ್ರಿಪ್ಟೋಕರೆನ್ಸಿ (Cryptocurrency) ವ್ಯವಹಾರ ನಡೆಸುತ್ತಿದ್ದ ಉದ್ಯಮಿ (Businessman) ಅಪಹರಣ (Kidnap) ಕೇಸ್ಗೆ ಸಂಬಂಧಿಸಿ ಮೂವರು ಪ್ರಮುಖ ಆರೋಪಿಗಳನ್ನ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದಲ್ಲಿ ತಲೆಮರಿಸಿಕೊಂಡಿದ್ದ ಮೂವರು ಆರೋಪಿಗಳನ್ನ ಸೆರೆಹಿಡಿಯಲಾಗಿದೆ. ಸದ್ಯ ಪ್ರಕರಣದಲ್ಲಿ ಒಟ್ಟು 11 ಆರೋಪಿಗಳನ್ನ ಬಂಧಿಸಲಾಗಿದ್ದು, ಪ್ರಮುಖ ಆರೋಪಿಗಳಾದ ಸಾಂಗಲಿಯ ಶಹನವಾಜ್ ಚಮನಶೇಖ್, ಅಜ್ಜು ಚಮನಶೇಖ್, ಅಭಿಷೇಕ ಶೆಟ್ಟಿ ಬಂಧನಕ್ಕೊಳಗಾಗಿದ್ದಾರೆ. ಬೆಳಗಾವಿಯ ಯೂನೂಸ್ ಖಾಜಿಗಾಗಿ ಶೋಧಕಾರ್ಯ ಮುಂದುವರಿದಿದೆ.
ಬಿಟ್ಕಾಯಿನ್ (Bitcoin) ವ್ಯವಹಾರದಲ್ಲಿ ಉದ್ಯಮಿ ವಂಚನೆ ಮಾಡಿರುವ ಹಿನ್ನೆಲೆ ಅಪಹರಣ ಮಾಡಿರುವುದಾಗಿ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಕರಮಾಳಾದ ಖಾಸಗಿ ಬ್ಯಾಂಕ್ ಮಾಜಿ ಉದ್ಯೋಗಿ ರಾಹುಲ್ ಮುಂಡೆ ಕಿಡ್ನಾಪ್ ಆಗಿದ್ದ ಉದ್ಯಮಿ ರವಿಕಿರಣ್ ಭಟ್ ವಿರುದ್ಧ ವಂಚನೆ ಮಾಡಿದ್ದಾಗಿ ಆರೋಪ ಮಾಡಿದ್ದರು. ಎರಡು ಕೋಟಿ ರೂ. ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು.
ಮೂರು ಕೋಟಿಗೆ ಬೇಡಿಕೆ: ಆರೋಪಿಗಳು ಬೆಳಗಾವಿ ಕೆಎಲ್ಇ ಆಸ್ಪತ್ರೆ ಬಳಿ ಕಾರನ್ನು ತಡೆದಿದ್ದಾರೆ. ಬೈಕ್ಗೆ ಕಾರು ಟಚ್ ಮಾಡಿ ಎಸ್ಕೇಪ್ ಆಗುತ್ತಿದ್ದೀಯ ಅಂತಾ ನಾಲ್ವರು ವಾಗ್ವಾದ ನಡೆಸಿದ್ದರು. ರವಿಕಿರಣ್ ಜತೆ ಜಗಳವಾಡಿ ಮೂವರು ಕಾರಿನಲ್ಲಿ ಹತ್ತಿದ್ದರು. ಬಳಿಕ ಹಿಂಬದಿಯಿಂದ ರಿವಾಲ್ವರ್ ತೋರಿಸಿ ನಾವು ಹೇಳಿದ ಕಡೆ ಕಾರು ಚಾಲನೆ ಮಾಡುವಂತೆ ಬೆದರಿಕೆ ಹಾಕಿದ್ದಾರೆ. ಅಲ್ಲಿಂದ ನೇರವಾಗಿ ಖಾನಾಪುರ ಬಳಿ ಕೋಳಿ ಫಾರ್ಮ್ಗೆ ಕರೆದೊಯ್ದಿದ್ದಾರೆ. ಬಂಧಿತರು ರವಿಕಿರಣ್ನ ಕುರ್ಚಿ ಮೇಲೆ ಕೂರಿಸಿ ಕೈ, ಕಾಲು ಕಟ್ಟಿ ಹೊಡೆದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲು 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಬಳಿಕ ಆತನ ಬಳಿ ಇದ್ದ 55 ಸಾವಿರ ನಗದು, ಆ್ಯಪಲ್ ವಾಚ್, ಮೊಬೈಲ್, ಚಿನ್ನ ಹಾಗೂ ಬೆಳ್ಳಿಯ ನಾಣ್ಯ, 75 ಸಾವಿರ ಮೌಲ್ಯದ ಯುಎಸ್ ಕರೆನ್ಸಿ ಕಿತ್ತುಕೊಂಡಿದ್ದರು. ಬಳಿಕ ರವಿಕಿರಣ್ ಮೊಬೈಲ್ನಿಂದ ಪತ್ನಿಗೆ ಕರೆ ಮಾಡಿ 3 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಜ.14ರಂದು ರವಿಕಿರಣ್ ಅಪಹರಣ ಮಾಡಿ 3ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಜ.18ರಂದು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ
ಗುರುವಾರ ನೆದರ್ಲ್ಯಾಂಡ್ನಿಂದ ಕಾಣೆಯಾಗಿದ್ದ ಪುಟ್ಟ ವಿಮಾನವೊಂದು ಐಸ್ಲ್ಯಾಂಡ್ನ ಒಂದು ಸರೋವರದಲ್ಲಿ ಪತ್ತೆಯಾಗಿದೆ
ಒಂದು ಚಿಟಿಕೆ ಕಪ್ಪು ಉಪ್ಪು ಅನೇಕ ರೋಗಗಳನ್ನು ದೂರ ಮಾಡುತ್ತದೆ; ಇಲ್ಲಿದೆ ಸಂಪೂರ್ಣ ಮಾಹಿತಿ
Published On - 8:47 am, Sun, 6 February 22