ಸರಕಾರಿ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಕಳ್ಳತನ; ಕಂಪ್ಯೂಟರ್ ಪ್ರಿಂಟರ್ ಸೇರಿದಂತೆ ಶಾಲೆ ದಾಖಲಾತಿ ಕಳವು

ಈ ಹಿಂದೆ ಗ್ರಾಮದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳರು ಈಗ ಜ್ಞಾನ ದೇಗುಲ ಮೇಲೆ ಕಣ್ಣು ಹಾಕಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ವ್ಯಕ್ತವಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಸರಕಾರಿ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಕಳ್ಳತನ; ಕಂಪ್ಯೂಟರ್ ಪ್ರಿಂಟರ್ ಸೇರಿದಂತೆ ಶಾಲೆ ದಾಖಲಾತಿ ಕಳವು
ಸರಕಾರಿ ಮರಾಠಿ ಪ್ರಾಥಮಿಕ ಶಾಲೆ
Follow us
TV9 Web
| Updated By: preethi shettigar

Updated on:Feb 05, 2022 | 11:11 AM

ಬೆಳಗಾವಿ: ಸರಕಾರಿ ಮರಾಠಿ ಪ್ರಾಥಮಿಕ ಶಾಲೆ(Government school) ಬಾಗಿಲು ಕೀ ಒಡೆದು ಕಳ್ಳತನ(Theft) ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ನಡೆದಿದೆ. ಸಾವಿರಾರು ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಕಂಪ್ಯೂಟರ್ ಪ್ರಿಂಟರ್(Computer printer) ಸೇರಿದಂತೆ ಶಾಲೆ ದಾಖಲಾತಿ ಕಳ್ಳತನ ಮಾಡಿದ್ದಾರೆ. ಈ ಹಿಂದೆ ಗ್ರಾಮದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳರು ಈಗ ಜ್ಞಾನ ದೇಗುಲ ಮೇಲೆ ಕಣ್ಣು ಹಾಕಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ವ್ಯಕ್ತವಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ತುಮಕೂರು: ಕಳ್ಳತನ ಆರೋಪಿಗಳ ಬಂಧನ

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಹಲವೆಡೆ ಮನೆ‌ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ. ಐವಾರ್ಲಹಳ್ಳಿ ಗ್ರಾಮದ ಜಯಪ್ರಕಾಶ್ ನಾಯ್ಕ್, ಲೋಕೇಶ್, ದೇವರಾಜ್ ಬಂಧಿತರು. ಬಂಧಿತರಿಂದ 11.60 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ. ಕಳೆದ 2021 ಸೆಪ್ಟೆಂಬರ್​ನಲ್ಲಿ ಸೇವಾಲಾಲ್ ಪುರ ಗ್ರಾಮದಲ್ಲಿ ಕಳವು ಮಾಡಿದ್ದರು. ಜೊತೆಗೆ ಪಾವಗಡ ಮಧುಗಿರಿ ತಾಲೂಕಿನ 8 ಮನೆಗಳಲ್ಲಿ ಕಳ್ಳತನ ಮಾಡಿದ್ದರು. ಕಳವು ಮಾಡಿದ್ದ ಆಭರಣಗಳನ್ನು ಮಹೇಶ್ ಎಂಬಾತರಿಗೆ ಮಾರಾಟ ಮಾಡಿದ್ದರು.

ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು ಬಂಧನ

ಬೈಕ್​ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ವಿದ್ಯಾರ್ಥಿಗಳಿಗೆ, ಗಾಂಜಾ ವ್ಯಸನಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು. ಕದ್ದ ಬೈಕ್​ನಲ್ಲಿ ಮಾರಾಟ ಮಾಡುತ್ತಿದ್ದರು. ಬೈರೇಶ್ ಮತ್ತು ಯಾಸೀರ್ ಅರಾಫತ್ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಹಿನ್ನೆಲೆ ದಾಳಿ‌ ನಡೆಸಿದ್ದ ಪೊಲೀಸರು, ಬಂಧಿತರಿಂದ 8 ದ್ವಿಚಕ್ರ ವಾಹನ ಮತ್ತು 1.2 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.  ಕೆಂಗೇರಿ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ.

ದೇವನಹಳ್ಳಿ: ಯುವತಿಗೆ ಮೆಸೇಜ್ ಮಾಡಿದಕ್ಕೆ ದೇವನಹಳ್ಳಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಯುವಕನಿಗೆ ಚಾಕು ಇರಿದು ಕೊಲೆ ಮಾಡಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನ ಬಾಗಲೂರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಯುವತಿಗೆ ಮೆಸೇಜ್ ಮಾಡಿದ್ದ ಅಂತ ನಾಲ್ವರು ಚಾಕು ಇರಿದಿದ್ದಾರೆ. ಬಾಗಲೂರು ಕೈಗಾರಿಕಾ ಪ್ರದೇಶದ ಅಮೇಜಾನ್ ಕಂಪನಿಯಲ್ಲಿ ಯುವತಿ ಕೆಲಸ ಮಾಡುತ್ತಿದ್ದಾಳೆ. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುರೇಂದ್ರ ಎಂಬುವನ ಮೇಲೆ ನಾಲ್ವರು ದಾಳಿ ಮಾಡಿದ್ದಾರೆ. ಮೋಹನ್, ರಾಕೇಶ್, ವರುಣ್ ಕುಮಾರ್ ಮತ್ತು ಸೂರಜ್ ಬಂಧಿತ ಆರೋಪಿಗಳು.

ಯುವತಿಗೆ ಮೆಸೇಜ್ ಮಾಡುತ್ತಿದ್ದ ಅಂತ ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕಿನ ಬಾಗಲೂರು ಗ್ರಾಮದಲ್ಲಿ ಕಳೆದ ತಿಂಗಳು 31 ರಂದು ಆರೋಪಿಗಳು ಕೊಲೆಗೆ ಯತ್ನಿಸಿದ್ದಾರೆ. ಅದೃಷ್ಟವಶಾತ್ ಸುರೇಂದ್ರ ಪ್ರಾಣಾಪಾಯದಿಂದ ಪಾರಾಗಿದ್ದು, ಯಲಹಂಕದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:

ಟ್ಯಾಂಕರ್‌ಗಳಲ್ಲಿ ಬೇಬಿ ಟ್ಯಾಂಕ್ ಬಳಸಿ ಪೆಟ್ರೋಲ್ ಕಳ್ಳತನ; ಸುಮಾರು 50 ಲೀಟರ್ ಪೆಟ್ರೋಲ್ ಕಳವು

Crime Update: ವ್ಯಕ್ತಿ ಗಮನ ಬೇರೆಡೆ ಸೆಳೆದು ಕಳ್ಳತನ, ನಕಲಿ ಬಂಗಾರದ ನಾಣ್ಯ ನೀಡಿ ವಂಚನೆ, ಹನಿಟ್ರ್ಯಾಪ್ ಆರೋಪಿಗಳ ಬಂಧನ

Published On - 11:05 am, Sat, 5 February 22