Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕೋಡಿ‌: ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆ ವ್ಯಕ್ತಿ ಸಾವು, ಕುಟುಂಬಸ್ಥರ ಆಕ್ರಂದನ

ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹೊಸಪೇಟೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೃತಪಟ್ಟ ವ್ಯಕ್ತಿ ಹೆಸ್ಕಾಂ ಗುತ್ತಿಗೆ ನೌಕರ ಅಲ್ಲ, ಆತ ಖಾಸಗಿ ವ್ಯಕ್ತಿಯಾಗಿದ್ದಾರೆ. ಸದ್ಯ ವಿದ್ಯುತ್ ಕಂಬದ ಮೇಲೆ ಜೋತಾಡುತ್ತಿದ್ದ ಶವವನ್ನು ಸಿಬ್ಬಂದಿ ಕೆಳಗಿಳಿಸಿದ್ದಾರೆ.

ಚಿಕ್ಕೋಡಿ‌: ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆ ವ್ಯಕ್ತಿ ಸಾವು, ಕುಟುಂಬಸ್ಥರ ಆಕ್ರಂದನ
ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆ ವ್ಯಕ್ತಿ ಸಾವು
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: Rakesh Nayak Manchi

Updated on: Aug 13, 2023 | 4:07 PM

ಚಿಕ್ಕೋಡಿ, ಆಗಸ್ಟ್ 13: ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆ ಖಾಸಗಿ ಎಲೆಕ್ಟ್ರಿಷಿಯನ್ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚಿಕ್ಕೋಡಿ (Chikkodi) ತಾಲೂಕಿನ ಹೊಸಪೇಟೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ದಫೇದರ್‌ಕೋಡಿ ನಿವಾಸಿ ಸಿದ್ದರಾಮ ಕುಪವಾಡೆ (38) ಮೃತ ದುರ್ದೈವಿ. ಹೆಸ್ಕಾಂ ಸಿಬ್ಬಂದಿ ಕೆಳಗೆ ನಿಂತು ಸಿದ್ದರಾಮ ಕುಪವಾಡೆರನ್ನ ಅವರನ್ನು ಕಂಬಕ್ಕೆ ಹತ್ತಿಸಿ ದುರಸ್ತಿ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ವಿದ್ಯುತ್ ತಂತಿಗಳು ಜೋತುಬಿದ್ದ ಹಿನ್ನೆಲೆ ಹೆಸ್ಕಾಂ ಕಚೇರಿಗೆ ರೈತರು ದೂರು ನೀಡಿದ್ದರು. ಹೀಗಾಗಿ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಸಿಬ್ಬಂದಿ ತನ್ನ ಜೊತೆ ಸಿದ್ದರಾಮ ಅವರನ್ನೂ ಕರೆದುಕೊಂಡು ಬಂದ್ದಿದ್ದರು. ಸಿಬ್ಬಂದಿ ಕೆಳಗೆ ನಿಂತು ಸಿದ್ದರಾಮ ಅವರನ್ನ ವಿದ್ಯುತ್ ಕಂಬಕ್ಕೆ ಹತ್ತಿಸಿದ್ದರು. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿ ಸಿದ್ದರಾಮ ಕಂಬದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ಸಿದ್ದರಾಮ ಕುಪವಾಡೆ ಹೆಸ್ಕಾಂ ಗುತ್ತಿಗೆ ನೌಕರ ಅಲ್ಲ, ಖಾಸಗಿ ವ್ಯಕ್ತಿಯಾಗಿದ್ದಾರೆ ಎಂದು ಹೆಸ್ಕಾಂ ಸೆಕ್ಷನ್ ಆಫೀಸರ್ ರಾಜು ಕುಂಬಾರ ಹೇಳಿದ್ದಾರೆ. ನಮ್ಮ ಇಲಾಖೆಯ ಲೈನ್‌ಮ್ಯಾನ್ ತಾಹೀರ್ ದಫೇದಾರ್ ಆತನನ್ನ ಕರೆದುಕೊಂಡು ಬಂದಿದ್ದ. ವೈರ್ ಲೂಸ್ ಆಗಿದ್ದು ದುರಸ್ತಿ ಕಾರ್ಯ ಮಾಡುವುದಾಗಿ ತಿಳಿಸಿದ್ದ. ಯಾವ್ಯಾವ ಲೈನ್ ಎಲ್‌ಸಿ (ಬಂದ್ ಮಾಡಲು) ಬೇಕು ಅಂತಾ ಕೇಳಿದ್ದೆವು. ಚಿಕ್ಕೋಡಿ ಗ್ರಾಮೀಣ ಭಾಗದ ಎಲ್‌ಸಿ ತಗೆದುಕೊಂಡಿದ್ದ ಆದ್ರೆ ಪಟ್ಟಣ ವಿಭಾಗದ್ದು ತಗೆದುಕೊಂಡಿರಲಿಲ್ಲ. ಇಂದು ಎಲ್ಲಾ ಲೈನ್ ಬಂದ್ ಇರುತ್ತೆ ಅಂತಾ ಕೆಲಸ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ವಿದ್ಯುತ್ ಪ್ರವಹಿಸಿ ದಂಪತಿ, ಮೊಮ್ಮಗಳು ಸಾವು; ಮತ್ತೊಂದೆಡೆ ಅಪಘಾತದಲ್ಲಿ ಇಬ್ಬರು ಸಾವು

ನಾವು ಖಾಸಗಿ ವ್ಯಕ್ತಿಗಳನ್ನು ವಿದ್ಯುತ್ ಕಂಬದ ಮೇಲೆ ಹತ್ತಿಸಬೇಡಿ ಎಂದು ಲೈನ್‌ಮ್ಯಾನ್‌ಗಳಿಗೆ ಹೇಳಿಸಿರುತ್ತೇವೆ. ಆದರೆ ಲೈನ್ ಮ್ಯಾನ್ ಖಾಸಗಿ ಇಲೆಕ್ಟ್ರಿಕ್ ಕೆಲಸ ಮಾಡುವರನ್ನ ಕರೆದುಕೊಂಡು ಮಾಡಿಸುತ್ತಿದ್ದ. ವಿದ್ಯುತ್ ಕಂಬ ಏರಿ ಕೆಲಸ ಮಾಡುವ ಕೆಲಸದ ಜವಾಬ್ದಾರಿ ಲೈನ್‌ಮ್ಯಾನ್‌ನದ್ದಾಗಿದೆ. ಘಟನೆ ಸಂಬಂಧ ನಾವು ಮೇಲಾಧಿಕಾರಿಗೆ ಮಾಹಿತಿ ನೀಡಿದ್ದೇವೆ ಎಂದ ರಾಜು ಕುಂಬಾರ ಹೇಳಿದ್ದಾರೆ.

ಕಂಬದಲ್ಲಿ ಜೋತಾಡುತ್ತಿದ್ದ ಶವ ಕೆಳಗಿಳಿಸಿದ ಹೆಸ್ಕಾಂ ಸಿಬ್ಬಂದಿ

ಕಂಬದ ಮೇಲೆ ಜೋತಾಡುತ್ತಿದ್ದ ಸಿದ್ದರಾಮ ಅವರ ಮೃತದೇಹವನ್ನು ಹೆಸ್ಕಾಂ ಸಿಬ್ಬಂದಿ ಕೆಳಗಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದ‌ನ ಮುಗಿಲು ಮುಟ್ಟಿದೆ. ಹೆಸ್ಕಾಂ ಸಿಬ್ಬಂದಿ ನಮ್ಮ ಮಾವನ ಕೊಲೆ ಮಾಡಿದ್ದಾರೆ ಎಂದು ಅಳಿಯ ಬಾಲಕೃಷ್ಣ ಕಣ್ಣೀರಿಟ್ಟಿದ್ದಾರೆ.

ಆರು ತಿಂಗಳಿಂದ ಕೆಇಬಿಯವರ ಬಳಿ ಕೆಲಸಕ್ಕೆ ಹೋಗುತ್ತಿದ್ದರು. ಹೆಸ್ಕಾಂ ಸಿಬ್ಬಂದಿ ಕೆಳಗೆ ನಿಂತು ಅವರನ್ನು ಕಂಬದ ಮೇಲೆ ಏರಿಸಿದ್ದಾರೆ. ಎಲ್ಲಾ ಲೈನ್ ಬಂದ್ ಮಾಡಿಸಿದ್ದಾಗಿ ಹೇಳುತ್ತಾರೆ. ಆದರೆ ಘಟನೆ ಹೇಗೆ ನಡೆಯಿತು? ಮೃತ ಸಿದ್ದರಾಮಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ, ಒಬ್ಬ ಆರನೇ ತರಗತಿಯಲ್ಲಿ ಓದುತ್ತಿದ್ದಾನೆ, ಮತ್ತೊಬ್ಬ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ಸಿದ್ದರಾಮ ಪತ್ನಿಗೆ ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ಕಣ್ಣೀರಿಟ್ಟಿದ್ದಾರೆ.

ಬೆಳಗ್ಗೆ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೋಗಿದ್ದರು ಎಂದು ತಂದೆಯ ಕೊನೆ ಮಾತನ್ನು ಹೇಳಿ ಪುತ್ರ ಹನುಮಂತ ಕಣ್ಣೀರಿಡುತ್ತಿದ್ದಾನೆ. ಅಲ್ಲದೆ, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ವಿದ್ಯುತ್ ಪ್ರವಹಿಸಿ ಬೆಸ್ಕಾಂ ಗುತ್ತಿಗೆ ನೌಕರ ಸಾವು

ಹೊಸಕೋಟೆ: ವಿದ್ಯುತ್ ಪ್ರವಹಿಸಿ ಬೆಸ್ಕಾಂ ಗುತ್ತಿಗೆ ನೌಕರ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದ ಬಳಿ ನಡೆದಿದೆ. ಕೋಲಾರ ಮೂಲದ ಅನಿಲ್ (35) ಮೃತ ದುರ್ದೈವಿ. ಚೆನ್ನೈ ಎಕ್ಸ್​ಪ್ರೆಸ್ ಕಾರಿಡಾರ್ ಹೆದ್ದಾರಿ ಕಾಮಗಾರಿ ಹಿನ್ನೆಲೆ ವಿದ್ಯುತ್ ಕಂಬ ಬದಲಿಸುವ ವೇಳೆ ವಿದ್ಯುತ್ ಸಂಪರ್ಕ ನೀಡಿದ್ದರಿಂದ ಈ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ