ಬೆಳಗಾವಿ: ಗಡಿ ವಿಚಾರವಾಗಿ ಎಂಇಎಸ್ (MES) ಕಾರ್ಯಕರ್ತರು ಪದೇ ಪದೇ ಬೆಳಗಾವಿಯಲ್ಲಿ (Belagavi) ಕ್ಯಾತೆ ತೆಗೆಯುತ್ತಿರುತ್ತಾರೆ. ಗಡಿ ವಿಚಾರವನ್ನು ಜೀವಂತವಾಗಿಡಲು ಆಗ ಆಗ ಕಾಲು ಕೆದರಿಕೊಂಡು ತಕರಾರು ತೆಗೆಯಲು ಬರುತ್ತಾರೆ. ಇನ್ನೂ ಗಡಿ ವಿಚಾರವಾಗಿ ಮಹಾರಾಷ್ಟ್ರ (Maharashtra) ಮತ್ತೆ ತನ್ನ ಮೊಂಡುತನವನ್ನು ಮುಂದುವರೆಸಿದೆ. ಈ ಮಧ್ಯೆಯೇ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಮತ್ತೊಂದು ವಿಫಲ ಯತ್ನಕ್ಕೆ ಕೈ ಹಾಕಿದ್ದಾರೆ.
ಬೆಳಗಾವಿಯ ನೂತನ ಬಸ್ ನಿಲ್ದಾಣಕ್ಕೆ ಮರಾಠಿ ಫಲಕ ಹಾಕುವಂತೆ MES ಕಾರ್ಯಕರ್ತರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಡಿಸಿ ಪಿ.ವೈ.ನಾಯಕ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವ ಡಿಸಿ ಪಿ.ವೈ.ನಾಯಕ್ ಕನ್ನಡ, ಇಂಗ್ಲಿಷ್ ಫಲಕ ಮಾತ್ರ ಹಾಕುತ್ತೇವೆ ಎಂದಿದ್ದಾರೆ. ಇದರಿಂದ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಎಂಇಎಸ್ ಕಾರ್ಯಕರ್ತರು ವಾಪಾಸ್ ಆಗಿದ್ದಾರೆ.
ಇದನ್ನೂ ಓದಿ: ಹೆಣ್ಣು ಮಕ್ಕಳ ಆತ್ಮರಕ್ಷಣೆಗಾಗಿ ಅಲ್ಪಾವಧಿ ಕೋರ್ಸ್ ಪ್ರಾರಂಭಕ್ಕೆ ಸರ್ಕಾರ ಚಿಂತನೆ: ಸಿಎಂ ಬೊಮ್ಮಾಯಿ
ಎಂಇಎಸ್ನ ಮಹಾಮೇಳಾವ್ಗೆ ಬ್ರೇಕ್ ಹಿನ್ನೆಲೆ ಮಹಾರಾಷ್ಟ್ರದ ಶಿನ್ನೊಳ್ಳಿ ಬಳಿ ಶಿವಸೇನೆ, ಎಂಇಎಸ್ ಪುಂಡರು ರಸ್ತೆ ತಡೆದು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಎಂಇಎಸ್ ಪುಂಡರು ಬೈಕ್ ಸವಾರರ ಮೇಲೆ ಮುಗಿಬಿದ್ದಿದ್ದಾರೆ. ಬೈಕ್ ಸವಾರರನ್ನು ತಡೆದು ವಾಪಸ್ ಬೆಳಗಾವಿಯತ್ತ ಕಳುಹಿಸುತ್ತಿದ್ದಾರೆ. ಏಕಾಏಕಿ ರಸ್ತೆ ಬಂದ್ ಹಿನ್ನೆಲೆ ಪ್ರಯಾಣಿಕರು, ವಾಹನ ಸವಾರರ ಪರದಾಡುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿಣ ವಾತಾವರಣ ನಿರ್ಮಾಣವಾಗಿದೆ.
ಕಲಬುರಗಿ: ಮಹಾರಾಷ್ಟ್ರ, ಗಡಿ ವಿಚಾರವಾಗಿ ಕರ್ನಾಟಕದ ಜೊತೆ ಪದೆ ಪದೆ ಕ್ಯಾತೆ ತೆಗೆಯುತ್ತಿರುತ್ತದೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರಾರಂಭವಾದ ಬೆನ್ನಲ್ಲೇ ವಿಜಯಪುರ ಮತ್ತು ಕಲಬುರಗಿ ಗಡಿನಾಡ ಕನ್ನಡಿಗರು ಮೂಸೌಕರ್ಯ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಮಹಾರಾಷ್ಟ್ರದ ಶಾಸಕರು ಕನ್ನಡ ಭಾಷಿಕರೇ ಹೆಚ್ಚಾಗಿರುವ ಊರುಗಳಿಗೆ ಭೇಟಿ ನೀಡಿ, ಮೂಲಸೌಕರ್ಯ ಒದಗಿಸುವುದಗಿ ಭರವಸೆ ನೀಡಿದ್ದರು. ಆದರೆ ಇದೀಗ ಮಹಾರಾಷ್ಟ್ರ ಸರ್ಕಾರ ಗಡಿನಾಡ ಕನ್ನಡಿಗರ ವಿರುದ್ಧ ಸೇಡಿನ ರಾಜಕಾರಣ ಮಾಡಲು ಮುಂದಾಗಿದೆ.
ಇದನ್ನೂ ಓದಿ: ಕೊಡಗು ಜಿಲ್ಲಾ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರು ಈ ಕ್ರಮಗಳನ್ನು ಅನುಸರಿಬೇಕು
Published On - 4:08 pm, Sat, 24 December 22