ಇನ್ಸ್ಟಾಗ್ರಾಮ್ನಲ್ಲಿ ಕಿತ್ತಾಟ: ಬೆಳಗಾವಿಯಲ್ಲಿ ಬಿತ್ತು ಬಾಲಕನ ಹೆಣ
ಸಾಮಾಜಿಕ ಜಾಲತಾಣಗಳಲ್ಲಿ ಮನುಷ್ಯನಿಗೆ ಎಷ್ಟು ಅನುಕೂತೆಗಳು ಇವೆಯೋ ಅಷ್ಟೇ ಅನಾನುಕೂಲತೆಗಳು ಇವೆ. ಇದಕ್ಕೆ ಪೂಕರವೆಂಬಂತೆ ಇನ್ಸ್ಟಾಗ್ರಾಮ್ನಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಪರಸ್ಪರ ಚಾಟಿಂಗ್ನಲ್ಲಿ ಕಿತ್ತಾಡಿಕೊಂಡು ಕೊನೆಗೆ ಅಪ್ರಾಪ್ತ ಬಾಲಕನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಷ್ಟಕ್ಕೂ ಕೊಲೆ ಮಾಡುವಷ್ಟು ಆಗಿದ್ದೇನು? ಎನ್ನುವ ವಿವರ ಈ ಕೆಳಗಿನಂತಿದೆ.
ಬೆಳಗಾವಿ, (ಸೆಪ್ಟೆಂಬರ್ 28): ಇತ್ತೀಚಿನ ದಿನಗಳಲ್ಲಿ ಯಥೇಚ್ಚವಾಗಿ ಅಂತರ್ಜಾದಲ್ಲಿ ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವುದು ಫೇಸ್ಬುಕ್ (Facebook) ಮತ್ತು ಇನ್ಸ್ಟಾಗ್ರಾಮ್ಗಳದ್ದೇ ಕಾರುಬಾರಾಗಿದೆ ಎಂದರೂ ತಪ್ಪಲ್ಲಾ ಹಾಗೂ ಇದನ್ನು ಪ್ರತಿಯೊಬ್ಬರೂ ಒಪ್ಪಲೇಬೇಕು. ಒಂದು ರೀತಿ ಸಾಮಾಜಿಕ ಜಾಲತಾಣವೆಂದರೆ ಸಮಾಜವೇ ಎಂದರ್ಥವಾಗಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಕೆಲವೊಂದು ಅನಾವಶ್ಯಕ ಜಗಳಗಳು ವಿಕೋಪಕ್ಕೆ ಹೋದ ಉದಾಹರಣೆಗಳು ನಮ್ಮ ಕಣ್ಣು ಮುಂದೆ ಇವೆ. ಇದೇ ರೀತಿ ಇನ್ಸ್ಟಾಗ್ರಾಮ್ನಲ್ಲಿ ನಡೆದ ಕಿತ್ತಾಟ ಕೊನೆಗೆ ಬಾಲಕನ ಹತ್ಯೆಯಲ್ಲಿ ಕೊನೆಯಾಗಿದೆ. ಹೌದು…ಚಾಟಿಂಗ್ ವಿಚಾರದಲ್ಲಿ ಶುರುವಾದ ಜಗಳ ಪ್ರಜ್ವಲ್ ಸುಂಕದ(17) ಎನ್ನುವ ಅಪ್ರಾಪ್ತ ಬಾಲಕನನ್ನು ಬರ್ಬರ ಹತ್ಯೆ ಮಾಡಿರು ಘಟನೆ ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ಹುಡುಗಿ ಹೆಸರಿನಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ ಪ್ರಜ್ವಲ್‌ಗೆ ಮೆಸೇಜ್ ಮಾಡಲಾಗಿದೆ. ಮೆಸೇಜ್ ಮಾಡುತ್ತಿರುವುದು ಹುಡುಗ ಎಂದು ಗೊತ್ತಾಗುತ್ತಿದ್ದಂತೆಯೇ ಮೆಸೇಜ್ನಲ್ಲಿ ಅವಾಚ್ಯವಾಗಿ ಬೈದಿದ್ದಾನೆ. ಇದರಿಂದ ಕೆರಳಿ ಗ್ಯಾಂಗ್ ಕಟ್ಟಿಕೊಂಡು ಬಂದು ಪ್ರಜ್ವಲ್ ಜತೆಗೆ ಜಗಳ ಮಾಡಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗಿ ಅಂತಿಮವಾಗಿ ಪ್ರಜ್ವಲ್‌ನನ್ನು ಹತ್ಯೆ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಹಳೇ ದ್ವೇಷಕ್ಕೆ ಹತ್ಯೆ; ನಾಲ್ವರು ಆರೋಪಿಗಳ ಬಂಧನ
ಸೆಪ್ಟೆಂಬರ್ 26ರಂದು ಸಂಜೆ ಹುಡುಗರ ಗ್ಯಾಂಗ್ , ಪ್ರಜ್ವಲ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರಜ್ವಲ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಪ್ರಜ್ವಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಾಲ್ಕು ಬಾಲಾಪರಾಧಿಗಳು ಸೇರಿ ವಿಶಾಲ್ ಎಂಬಾತನನ್ನು ಬಂಧಿಸಿದ್ದಾರೆ.
ಒಟ್ಟಿನಲ್ಲಿ ಇನ್ನೂ ಬಾಲಿ ಬದುಕಬೇಕಿದ್ದ ಬಾಲಕ ಪ್ರಜ್ವಲ್‌ನನ್ನು ಕ್ಷುಲ್ಲಕ ಕಾರಣಕ್ಕೆ ಜೀವ ತೆಗೆದಿರುವುದು ದುರಂತ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ